ಮುಂಬೈ(ಮಹಾರಾಷ್ಟ್ರ): ಭಾರತೀಯ ಕ್ರಿಕೆಟ್ ಮಾತ್ರವಲ್ಲ ವಿಶ್ವ ಕ್ರಿಕೆಟ್ನಲ್ಲಿ ಛಾಪು ಮೂಡಿಸಿರುವ ಆರ್ ಅಶ್ವಿನ್ 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಿ.ಟೆಕ್ ಪದವಿ ಪಡೆದು ಇಂಜಿನಿಯರ್ ಆಗಬೇಕಿದ್ದ ಈ ಪ್ಲೇಯರ್ ಕ್ರಿಕೆಟ್ ಜಗತ್ತಿನಲ್ಲಿ ಮಿಂಚಿರುವುದು ಮಾತ್ರ ಆಶ್ಚರ್ಯ. ಆರಂಭದಲ್ಲಿ ವೇಗದ ಬೌಲರ್ ಆಗಿ ವೃತ್ತಿ ಜೀವನ ಆರಂಭಿಸಿದ ತಮಿಳುನಾಡು ಮೂಲದ ಅಶ್ವಿನ್ ಇದೀಗ ಸ್ಪಿನ್ನರ್ ಆಗಿ ಟೀಂನಲ್ಲಿ ಆಡುತ್ತಿದ್ದಾರೆ.
ಆಫ್ ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ತಮ್ಮ ವಿಶೇಷ ಸ್ಪಿನ್ ಬೌಲಿಂಗ್ ಮೂಲಕ ಬ್ಯಾಟರ್ಗಳ ಎದೆಯಲ್ಲಿ ನಡುಕ ಹುಟ್ಟಿಸಿರುವ ಪ್ರತಿಭೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಎರಡನೇ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಅಶ್ವಿನ್ 2022ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿಯೂ ಸ್ಥಾನ ಪಡೆದಿದ್ದಾರೆ.
ಇಂಜಿನಿಯರಿಂಗ್ನಲ್ಲಿ ಬಿ.ಟೆಕ್ ಮಾಡಿದ್ದ ಅಶ್ವಿನ್ ಆರಂಭದಲ್ಲಿ ತಮಿಳುನಾಡು ತಂಡದ ಪರ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಇದರ ಜಿತೆಗೆ ಆರಂಭಿಕರಾಗಿ ಬ್ಯಾಟಿಂಗ್ ಸಹ ಮಾಡ್ತಿದ್ದರು. ತದನಂತರ ತಮ್ಮ ಬೌಲಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಸ್ಪಿನ್ನರ್ ಆಗುತ್ತಾರೆ. ಇವರ ಬೌಲಿಂಗ್ ಮೋಡಿಗೆ ಫಿದಾ ಆಗುವ ಬಿಸಿಸಿಐ ಹಿರಿಯರ ತಂಡದಲ್ಲೂ ಅವಕಾಶ ನೀಡುತ್ತಾರೆ. ತದನಂತರ ಹಿಂತಿರುಗಿ ನೋಡದ ಸ್ಪಿನ್ ಮಾಂತ್ರಿಕ ಅತಿ ಕಡಿಮೆ ಇನ್ನಿಂಗ್ಸ್ನಲ್ಲಿ ಭಾರತದ ಪರ 50 ವಿಕೆಟ್, 100, 150 ಹಾಗೂ 400 ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮುತ್ತಾರೆ. 2016ರಲ್ಲಿ ಐಸಿಸಿ ಕ್ರಿಕೆಟಿಗ ಎಂಬ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
-
2⃣5⃣5⃣ international games 👍
— BCCI (@BCCI) September 17, 2022 " class="align-text-top noRightClick twitterSection" data="
6⃣5⃣9⃣ international wickets 👌
3⃣7⃣9⃣9⃣ international runs 💪
2⃣nd highest wicket-taker for #TeamIndia in Tests 🌟
2⃣0⃣1⃣1⃣ ICC World Cup & 2⃣0⃣1⃣3⃣ ICC Champions Trophy winner 🏆 🏆
Here's wishing @ashwinravi99 a very happy birthday. 🎂 👏 pic.twitter.com/NLxwikIAHq
">2⃣5⃣5⃣ international games 👍
— BCCI (@BCCI) September 17, 2022
6⃣5⃣9⃣ international wickets 👌
3⃣7⃣9⃣9⃣ international runs 💪
2⃣nd highest wicket-taker for #TeamIndia in Tests 🌟
2⃣0⃣1⃣1⃣ ICC World Cup & 2⃣0⃣1⃣3⃣ ICC Champions Trophy winner 🏆 🏆
Here's wishing @ashwinravi99 a very happy birthday. 🎂 👏 pic.twitter.com/NLxwikIAHq2⃣5⃣5⃣ international games 👍
— BCCI (@BCCI) September 17, 2022
6⃣5⃣9⃣ international wickets 👌
3⃣7⃣9⃣9⃣ international runs 💪
2⃣nd highest wicket-taker for #TeamIndia in Tests 🌟
2⃣0⃣1⃣1⃣ ICC World Cup & 2⃣0⃣1⃣3⃣ ICC Champions Trophy winner 🏆 🏆
Here's wishing @ashwinravi99 a very happy birthday. 🎂 👏 pic.twitter.com/NLxwikIAHq
ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಆರ್.ಅಶ್ವಿನ್ ಹೆಸರಿಗೆ
ಟೆಸ್ಟ್ನಲ್ಲಿ ಮೂರು ಸಲ ಐದು ವಿಕೆಟ್ ಪಡೆದುಕೊಂಡಿರುವ ಭಾರತದ ಏಕೈಕ ಕ್ರಿಕೆಟಿಗನಾಗಿದ್ದಾರೆ. ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ದೀರ್ಘಕಾಲ ಆಡಿರುವ ಅವರು, ಟೀಂ ಇಂಡಿಯಾ ಪರ ವಿಶ್ವಕಪ್, ಚಾಂಪಿಯನ್ಸ್ ಟ್ರೋಪಿ, ಚಾಂಪಿಯನ್ಸ್ ಲೀಗ್ ಜೊತೆಗೆ ಐಪಿಎಲ್ನಲ್ಲೂ ಭಾಗಿಯಾಗಿದ್ದಾರೆ. ಆರ್ ಅಶ್ವಿನ್ 86 ಟೆಸ್ಟ್ ಪಂದ್ಯಗಳಲ್ಲಿ 442 ವಿಕೆಟ್ ಪಡೆದಿದ್ದು, 30 ಬಾರಿ 5 ಮತ್ತು 7 ಬಾರಿ 10 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅವರು 5 ಶತಕ ಮತ್ತು 12 ಅರ್ಧ ಶತಕಗಳ ಸಹಾಯದಿಂದ 2931 ರನ್ ಗಳಿಸಿದ್ದಾರೆ. ಟೀಂ ಇಂಡಿಯಾ ಪರ 113 ಏಕದಿನ ಪಂದ್ಯಗಳಿಂದ 151 ವಿಕೆಟ್ ಹಾಗೂ 56 ಟಿ20 ಪಂದ್ಯಗಳಿಂದ 66 ವಿಕೆಟ್ ಪಡೆದುಕೊಂಡಿದ್ದು, ಒಟ್ಟಾರೆ ಟಿ20 ಕ್ರಿಕೆಟ್ನಲ್ಲಿ 287 ಪಂದ್ಯಗಳಿಂದ 281 ವಿಕೆಟ್ ಪಡೆದುಕೊಂಡಿದ್ದಾರೆ.
ಆರ್ ಅಶ್ವಿನ್ ಅವರಿಗೆ ಭಾರತೀಯ ಕ್ರಿಕೆಟ್ ಮಂಡಳಿ ಸೇರಿದಂತೆ ಅನೇಕ ಕ್ರಿಕೆಟರ್ಸ್, ಐಪಿಎಲ್ ಫ್ರಾಂಚೈಸಿಗಳು ಶುಭ ಹಾರೈಕೆ ಮಾಡಿವೆ. ಈ ಪ್ಲೇಯರ್ ಸದ್ಯ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದಾರೆ. ಜೊತೆಗೆ ಮುಂಬರುವ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ಅವಕಾಶ ಸಹ ಪಡೆದುಕೊಂಡಿದ್ದಾರೆ.