ಮುಂಬೈ : ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ, ದೇಶಕ್ಕೆ 2 ವಿಶ್ವಕಪ್ ಸೇರಿದಂತೆ 3 ಐಸಿಸಿ ಟ್ರೋಫಿಗಳನ್ನು ತಂದುಕೊಟ್ಟಿದ್ದ ಎಂ ಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಇಂದಿಗೆ ಒಂದು ವರ್ಷ ಕಳೆದಿದೆ.
ಆಗಸ್ಟ್ 15, 2020 ದೇಶ 74ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದ್ದಾಗ ಧೋನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡು 1929(7 ಗಂಟೆ, 29 ನಿಮಿಷ)ದಿಂದ ನಾನು ನಿವೃತ್ತಿಯಾಗಿದ್ದೇನೆ ಎಂದು ಪರಿಗಣಿಸಬಹುದು ಎಂದು ಬರೆಯುವ ಮೂಲಕ ಕ್ರಿಕೆಟ್ ಜಗತ್ತಿಗೆ ಶಾಕ್ ನೀಡಿದ್ದರು. ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದ ಧೋನಿ ಅಭಿಮಾನಿಗಳಿಗೆ ಇದು ನಿಜಕ್ಕೂ ದಿಗ್ಭ್ರಮೆಯನ್ನುಂಟು ಮಾಡಿತ್ತು.
-
💬 "From 1929 hrs consider me as Retired"#OnThisDay in 2020, MS Dhoni bid adieu to international cricket 🙌
— ICC (@ICC) August 15, 2021 " class="align-text-top noRightClick twitterSection" data="
📽️ Watch the legends of the game decipher what made MSD such a special player and leader.pic.twitter.com/BoXdR99412
">💬 "From 1929 hrs consider me as Retired"#OnThisDay in 2020, MS Dhoni bid adieu to international cricket 🙌
— ICC (@ICC) August 15, 2021
📽️ Watch the legends of the game decipher what made MSD such a special player and leader.pic.twitter.com/BoXdR99412💬 "From 1929 hrs consider me as Retired"#OnThisDay in 2020, MS Dhoni bid adieu to international cricket 🙌
— ICC (@ICC) August 15, 2021
📽️ Watch the legends of the game decipher what made MSD such a special player and leader.pic.twitter.com/BoXdR99412
ಧೋನಿ ಟಿ20 ವಿಶ್ವಕಪ್ ನಂತರ ನಿವೃತ್ತಿ ಹೊಂದುವ ನಿರ್ಧಾರ ಹೊಂದಿದ್ದರು. ಆದರೆ, ಕೋವಿಡ್-19 ಕಾರಣ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ವಿಶ್ವಕಪ್ 2022ಕ್ಕೆ ಮುಂದೂಡಲ್ಪಟ್ಟಿತ್ತು. ಇತ್ತ ಬಿಸಿಸಿಐ ಕೂಡ ಧೋನಿಯನ್ನು ತನ್ನ ವಾರ್ಷಿಕ ಗುತ್ತಿಗೆಯಿಂದ ಕೈಬಿಟ್ಟಿತ್ತು. ಹಾಗಾಗಿ, ಧೋನಿ ದೇಶಕ್ಕೆ ಸ್ವತಂತ್ರ ಸಿಕ್ಕ ದಿನದಂತೆ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದರು. ಆದರೆ, ಸಮಾಧಾನಕರ ವಿಷಯವೆಂದರೆ ಧೋನಿ ಐಪಿಎಲ್ನಲ್ಲಿ ಆಡುವುದಾಗಿ ಹೇಳಿಕೊಂಡಿದ್ದರು, ಈಗಲೂ ಆಡುತ್ತಾ ಬರುತ್ತಿದ್ದಾರೆ.
2004ರಲ್ಲಿ ಬಾಂಗ್ಲಾದೇಶದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಧೋನಿ ಕೇವಲ 3 ವರ್ಷಗಳಲ್ಲಿ ಭಾರತದ ಮೂರು ಮಾದರಿಯಲ್ಲೂ ತಂಡಕ್ಕೆ ನಾಯಕನಾಗಿದ್ದರು.
2007ರ ಚೊಚ್ಚಲ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ ಟ್ರೋಫಿ ಗೆಲ್ಲಿಸಿ ಕೊಡುವ ಮೂಲಕ ಐಸಿಸಿ ಆಯೋಜಿಸುವ ಎಲ್ಲಾ ಪ್ರಶಸ್ತಿಗಳನ್ನು ಗೆದ್ದ ಏಕೈಕ ನಾಯಕ ಎನಿಸಿಕೊಂಡಿದ್ದಾರೆ. ಧೋನಿ ಭಾರತದ ಪರ 90 ಟೆಸ್ಟ್ ಪಂದ್ಯಗಳಿಂದ 4876 ರನ್, 350 ಏಕದಿನ ಪಂದ್ಯಗಳಿಂದ 10,773 ರನ್ ಮತ್ತು 98 ಪಂದ್ಯಗಳಿಂದ 1617 ರನ್ ಗಳಿಸಿದ್ದಾರೆ.
-
Leader. Legend. Inspiration. 🙌#OnThisDay last year, #TeamIndia great @msdhoni announced his retirement from international cricket. 🇮🇳 pic.twitter.com/0R1LZ2IZyu
— BCCI (@BCCI) August 15, 2021 " class="align-text-top noRightClick twitterSection" data="
">Leader. Legend. Inspiration. 🙌#OnThisDay last year, #TeamIndia great @msdhoni announced his retirement from international cricket. 🇮🇳 pic.twitter.com/0R1LZ2IZyu
— BCCI (@BCCI) August 15, 2021Leader. Legend. Inspiration. 🙌#OnThisDay last year, #TeamIndia great @msdhoni announced his retirement from international cricket. 🇮🇳 pic.twitter.com/0R1LZ2IZyu
— BCCI (@BCCI) August 15, 2021
ಧೋನಿ ನೆಚ್ಚಿನ ಗೆಳೆಯ ರೈನಾ ವಿದಾಯ : ಒಂದು ವರ್ಷದ ಅಂತರದಲ್ಲಿ ಕ್ರಿಕೆಟ್ ಪದಾರ್ಪಣೆ ಮಾಡಿದರೂ ದಶಕಗಳ ಕಾಲ ಧೋನಿ ಜೊತೆಯಾಗಿ ಆಡಿದ್ದ ಆಲ್ರೌಂಡರ್ ಸುರೇಶ್ ರೈನಾ ಕೂಡ ಗೆಳೆಯ ನಿವೃತ್ತಿ ಘೋಷಿಸಿದ ಕೇವಲ ಅರ್ಧಗಂಟೆಯ ಅಂತರದಲ್ಲಿ ತಾವೂ ಕೂಡ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು.
ಸುರೇಶ್ ರೈನಾ ಭಾರತದ ಪರ 18 ಟೆಸ್ಟ್, 226 ಏಕದಿನ ಪಂದ್ಯ ಮತ್ತು 78 ಟಿ20 ಪಂದ್ಯಗಳನ್ನಾಡಿದ್ದಾರೆ. ಕ್ರಮವಾಗಿ 768 , 5615 ಮತ್ತು 1604 ರನ್ಗಳಿಸಿದ್ದಾರೆ.
ಇದನ್ನೂ ಓದಿ:ಚಾಣಾಕ್ಷ ಆಟಗಾರ ಧೋನಿ... ಮಹತ್ವದ ಟೂರ್ನಿಗಳಲ್ಲಿ ಇವರ ನಿರ್ಧಾರವೇ ಪ್ರಶಸ್ತಿ ಗೆಲುವಿಗೆ ಕಾರಣ!