ಮುಂಬೈ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಹಲವಾರು ಸ್ಫೋಟಕ ಹೇಳಿಕೆ ನೀಡಿರುವ ವಿರಾಟ್ ಕೊಹ್ಲಿ ನಡೆಯನ್ನು ಭಾರತದ ಮಾಜಿ ನಾಯಕ ಕಪಿಲ್ ದೇವ್ ಟೀಕಿಸಿದ್ದು, ಬೇರೆಯವರ ಕಡೆಗೆ ಬೊಟ್ಟು ಮಾಡಿ ತೋರಿಸುವುದು ಒಳ್ಳೆಯದಲ್ಲ ಎಂದಿದ್ದಾರೆ.
ನವೆಂಬರ್ನಲ್ಲಿ ವಿರಾಟ್ ಕೊಹ್ಲಿ ಟಿ-20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದರು. ವಿಶ್ವಕಪ್ ನಂತರ ನಾಯಕತ್ವ ತ್ಯಜಿಸಿದ್ದರು. ಆದರೆ, ವಿರಾಟ್ ಅವರನ್ನು ಕಳೆದ ವಾರ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೆಸ್ಟ್ ತಂಡವನ್ನು ಪ್ರಕಟಿಸಿದ್ದ ವೇಳೆ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದಲೂ ಕೆಳಗಿಳಿಸಲಾಗಿತ್ತು.
ಆದರೆ, ಕಳೆದ ಎರಡೂ ದಿನಗಳ ಹಿಂದೆ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಬಿಸಿಸಿಐ ಅಧ್ಯಕ್ಷ ಗಂಗೂಲಿ, " ಕೊಹ್ಲಿಗೆ ನಾನು ಸ್ವತಃ ಕರೆ ಮಾಡಿ ಟಿ-20 ನಾಯಕತ್ವ ಬಿಡುವುದು ಬೇಡ ಎಂದಿದ್ದೆ, ಆದರೆ ಅವರು ಒಪ್ಪಲಿಲ್ಲ, ಆಯ್ಕೆ ಸಮಿತಿ ಸೀಮಿತ ಓವರ್ಗಳ ತಂಡಕ್ಕೆ ಇಬ್ಬರು ನಾಯಕ ಬೇಡ ಎಂದು ನಿರ್ಧರಿಸಿ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುವ ನಿರ್ಧಾರ ತೆಗೆದುಕೊಂಡಿದ್ದರು ಎಂದು ತಿಳಿಸಿದ್ದರು.
ಗಂಗೂಲಿ ಈ ಹೇಳಿಕೆಯನ್ನು ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ತಾವೂ ಟಿ20 ನಾಯಕತ್ವ ತ್ಯಜಿಸಿದ ವೇಳೆ ಯಾರೊಬ್ಬರು ನನ್ನ ನಿರ್ಧಾರವನ್ನು ಪರಿಶೀಲಿಸುವಂತೆ ಹೇಳಲಿಲ್ಲ ಎಂದು ಬಿಸಿಸಿಐ ಅಧ್ಯಕ್ಷರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದರು.
ಈ ಸಮಯದಲ್ಲಿ ಯಾರ ಮೇಲೂ ಬೆರಳು ಮಾಡಿ ತೋರಿಸುವುದು ಒಳ್ಳೆಯದಲ್ಲ. ದಕ್ಷಿಣ ಆಫ್ರಿಕಾ ಪ್ರವಾಸ ಬರುತ್ತಿದೆ ಮತ್ತು ದಯವಿಟ್ಟು ಪ್ರವಾಸದತ್ತ ಗಮನ ಹರಿಸಿ ಎಂದು ಕಪಿಲ್ ದೇವ್ ಸಲಹೆ ನೀಡಿದ್ದಾರೆ.
ಬಿಸಿಸಿಐನ ಅಧ್ಯಕ್ಷ ಸ್ಥಾನ ಬೋರ್ಡ್ನಲ್ಲೇ ಅತ್ಯಂತ ಮಹತ್ವದ ಸ್ಥಾನ, ಹಾಗೆಯೇ ಭಾರತ ತಂಡದ ನಾಯಕನ ಸ್ಥಾನವೂ ಮಹತ್ವದ್ದಾಗಿದೆ. ಸಾರ್ವಜನಿಕವಾಗಿ ಇಬ್ಬರೂ ಕಿತ್ತಾಡುವುದು ಒಳ್ಳೆಯ ಸಂಗತಿಯಲ್ಲ ಎಂದು ನಾನು ಭಾವಿಸುತ್ತೇನೆ. ಅದು ಸೌರವ್ ಮತ್ತು ಕೊಹ್ಲಿ ಯಾರಿಗಾದರೂ ಇದು ಶೋಭೆ ತರುವುದಿಲ್ಲ" ಎಂದು 1983ರ ವಿಶ್ವಕಪ್ ನಾಯಕ ಹೇಳಿದ್ದಾರೆ.
ಕೊಹ್ಲಿ ದೇಶದ ಬಗ್ಗೆ ಯೋಚಿಸಬೇಕು
" ಪರಿಸ್ಥಿತಿಗಳನ್ನು ನಿಯಂತ್ರಣಕ್ಕೆ ತರುವುದನ್ನು ನೋಡಿ ಮತ್ತು ಎಲ್ಲಕ್ಕಿಂತ ಮೊದಲು ದೇಶದ ಪರ ಆಡುವುದರ ಪರ ಆಲೋಚಿಸಿ. ತಪ್ಪು ಎಲ್ಲಾಗಿದೆ ಎಂಬುದು ಖಂಡಿತಾ ನಾಳೆ ತಿಳಿಯಲಿದೆ. ಆದರೆ, ಈ ವಿಚಾರವಾಗಿ ವಿದೇಶಿ ಪ್ರವಾಸಕ್ಕೂ ಮುನ್ನ ವಿವಾದವನ್ನುಂಟು ಮಾಡುವುದು ಒಳ್ಳೆಯದಲ್ಲ " ಎಂದು ಕಪಿಲ್ ದೇವ್ ಹೇಳಿದ್ದಾರೆ.
ಇದನ್ನೂ ಓದಿ:ನೋ ಕಮೆಂಟ್ಸ್, ಬಿಸಿಸಿಐ ಸೂಕ್ತ ರೀತಿಯಲ್ಲಿ ಇದನ್ನು ಡೀಲ್ ಮಾಡಲಿದೆ: ಕೊಹ್ಲಿ ಹೇಳಿಕೆಗೆ ಗಂಗೂಲಿ ಪ್ರತಿಕ್ರಿಯೆ