ಚೆಸ್ಟರ್-ಲೆ-ಸ್ಟ್ರೀಟ್(ಲಂಡನ್): ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಇಂಗ್ಲೆಂಡ್ನ ಆಲ್ರೌಂಡರ್ ಬೆನ್ಸ್ಟೋಕ್ಸ್ ನಿನ್ನೆ ದಿಢೀರ್ ಆಗಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹೀಗಾಗಿ, ದಕ್ಷಿಣ ಆಫ್ರಿಕಾ - ಇಂಗ್ಲೆಂಡ್ ನಡುವೆ ಇಂದು ನಡೆಯುತ್ತಿರುವ ಪಂದ್ಯ ಅವರಿಗೆ ವಿದಾಯದ ಪಂದ್ಯವಾಗಿದೆ. 2019ರ ವಿಶ್ವಕಪ್ ವಿಜೇತ ತಂಡದ ಆಟಗಾರ ಸ್ಟೋಕ್ಸ್ಗೆ ಇಸಿಬಿ ಅದ್ಧೂರಿ ಸ್ವಾಗತ ಮಾಡಿದ್ದು, ಅದನ್ನ ನೋಡಿ ಭಾವುಕರಾಗಿದ್ದಾರೆ.
-
❤️
— England Cricket (@englandcricket) July 19, 2022 " class="align-text-top noRightClick twitterSection" data="
🏴 #ENGvSA 🇿🇦 | @benstokes38 pic.twitter.com/teNgTVlV7T
">❤️
— England Cricket (@englandcricket) July 19, 2022
🏴 #ENGvSA 🇿🇦 | @benstokes38 pic.twitter.com/teNgTVlV7T❤️
— England Cricket (@englandcricket) July 19, 2022
🏴 #ENGvSA 🇿🇦 | @benstokes38 pic.twitter.com/teNgTVlV7T
ತವರು ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಕಣಕ್ಕಿಳಿದಿದ್ದು, ಈ ವೇಳೆ ಸ್ಟೋಕ್ಸ್ ಮೈದಾನಕ್ಕಿಳಿಯುತ್ತಿದ್ದಂತೆ ಪ್ರೇಕ್ಷಕರು ಅದ್ಧೂರಿ ಸ್ವಾಗತ ನೀಡಿದರು. ಜೊತೆಗೆ ಅವರ ಹೆಸರು ಘೋಷಣೆ ಮಾಡ್ತಿದ್ದಂತೆ ಭಾವುಕರಾದರು.
ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಜೋಸ್ ಬಟ್ಲರ್ ವಿಕೆಟ್ ಕೀಪಿಂಗ್ ಮಾಡಲು ಹೋಗುವುದಕ್ಕೂ ಮುಂಚಿತವಾಗಿ ಆಲ್ರೌಂಡರ್ ಸ್ಟೋಕ್ಸ್ ಅವರನ್ನ ಅಪ್ಪಿಕೊಂಡರು. ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಬ್ಯಾಟಿಂಗ್ ನಡೆಸುತ್ತಿರುವ ದಕ್ಷಿಣ ಆಫ್ರಿಕಾ 5 ವಿಕೆಟ್ನಷ್ಟಕ್ಕೆ 333ರನ್ಗಳಿಸಿದೆ.
31 ವರ್ಷದ ಬೆನ್ಸ್ಟೋಕ್ಸ್ 2019ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅದರ ಫಲವಾಗಿ ತಂಡ ಏಕದಿನ ವಿಶ್ವಕಪ್ಗೆ ಮುತ್ತಿಕ್ಕಿತ್ತು. ಜೊತೆಗೆ ಸ್ಟೋಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಸಹ ಪಡೆದುಕೊಂಡಿದ್ದರು. ಇಂಗ್ಲೆಂಡ್ ಪರ 104 ಏಕದಿನ ಪಂದ್ಯಗಳನ್ನಾಡಿರುವ ಇವರು, 2919 ರನ್ಗಳಿಸಿದ್ದು, 74 ವಿಕೆಟ್ ಪಡೆದುಕೊಂಡಿದ್ದಾರೆ. ಸದ್ಯ ಟೆಸ್ಟ್ ತಂಡದ ನಾಯಕನಾಗಿ ಸ್ಟೋಕ್ಸ್ ಮುಂದುವರೆಯಲಿದ್ದು, ಟಿ20 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ಭಾಗವಾಗಲಿದ್ದಾರೆ.