ಮುಂಬೈ: ರವಿಚಂದ್ರನ್ ಅಶ್ವಿನ್ ಮತ್ತು ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ನ್ಯೂಜಿಲ್ಯಾಂಡ್ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 62 ರನ್ಗಳಿಗೆ ಆಲೌಟ್ ಮಾಡಿ 263 ರನ್ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಭಾರತ ತಂಡದ ಮಯಾಂಕ್ ಅಗರ್ವಾಲ್(150) ಶತಕ ಮತ್ತು ಅಕ್ಷರ್ ಪಟೇಲ್ 52 ಹಾಗೂ ಶುಬ್ಮನ್ ಗಿಲ್ 44 ರನ್ಗಳ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ 325 ರನ್ಗಳಿಸಿತ್ತು. ನ್ಯೂಜಿಲ್ಯಾಂಡ್ ತಂಡದ ಸ್ಪಿನ್ನರ್ ಅಜಾಜ್ ಪಟೇಲ್ 119 ರನ್ ನೀಡಿ 10 ವಿಕೆಟ್ ಪಡೆದಿದ್ದರು.
-
New Zealand are all out for 62! #WTC23 | #INDvNZ | https://t.co/EdvFj8QtKD pic.twitter.com/E48ktesYJU
— ICC (@ICC) December 4, 2021 " class="align-text-top noRightClick twitterSection" data="
">New Zealand are all out for 62! #WTC23 | #INDvNZ | https://t.co/EdvFj8QtKD pic.twitter.com/E48ktesYJU
— ICC (@ICC) December 4, 2021New Zealand are all out for 62! #WTC23 | #INDvNZ | https://t.co/EdvFj8QtKD pic.twitter.com/E48ktesYJU
— ICC (@ICC) December 4, 2021
ನ್ಯೂಜಿಲ್ಯಾಂಡ್ 62ಕ್ಕೆ ಆಲೌಟ್
325 ರನ್ಗಳನ್ನು ಹಿಂಬಾಲಿಸಿದ ನ್ಯೂಜಿಲ್ಯಾಂಡ್ ಭಾರತೀಯ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 62 ರನ್ಗಳಿಗೆ ಸರ್ವಪತನಗೊಂಡಿತು. ಇದು ಭಾರತದಲ್ಲಿ ದಾಖಲಾದ ಅತ್ಯಂತ ಕನಿಷ್ಠ ಮೊತ್ತವಾಯಿತು. ಕೈಲ್ ಜೇಮಿಸನ್(17) ಮತ್ತು ಟಾಮ್ ಲೇಥಮ್(10) ಮಾತ್ರ ಎರಡಂಕಿ ಮೊತ್ತ ದಾಖಲಿಸಿದರು.
ಭಾರತದ ಪರ ಮೊಹಮ್ಮದ್ ಸಿರಾಜ್ 19ಕ್ಕೆ3, ಅಕ್ಷರ್ ಪಟೇಲ್ 14ಕ್ಕೆ 2, ರವಿಚಂದ್ರನ್ ಅಶ್ವಿನ್ 8ಕ್ಕೆ 4 ಮತ್ತು ಜಯಂತ್ ಯಾದವ್ 13ಕ್ಕೆ1 ವಿಕೆಟ್ ಪಡೆದು ಮಿಂಚಿದರು.
ಇದನ್ನು ಓದಿ:ಟೀಂ ಇಂಡಿಯಾ ವಿರುದ್ಧ ಒಂದೇ ಇನ್ಸಿಂಗ್ಸ್‌ನಲ್ಲಿ 10 ವಿಕೆಟ್ ಪಡೆದು ಅಜಾಜ್ ಪಟೇಲ್ ದಾಖಲೆ