ETV Bharat / sports

ಟಿ-20 ವಿಶ್ವಕಪ್​ಗಾಗಿ ಲಂಕಾ ತಂಡಕ್ಕೆ ರ‍್ಯಾಲಿ ಕಿಂಗ್ ಮಾಲಿಂಗ ಮರಳುವ ಸಾಧ್ಯತೆ - World T20

ನಾವು ಲಸಿತ್ ಮಾಲಿಂಗ ಅವರ ಜೊತೆ ಶೀಘ್ರದಲ್ಲೇ ಮಾತನಾಡಲಿದ್ದೇವೆ. ಅವರು ನಮ್ಮ ಮುಂಬರುವ ಟಿ-20 ಪ್ರವಾಸ ಮತ್ತು ಅಕ್ಟೋಬರ್​ನಲ್ಲಿ ನಡೆಯುವ ಟಿ-20 ವಿಶ್ವಕಪ್​ನ ಯೋಜನೆಯಲ್ಲಿ ಅವರಿದ್ದಾರೆ ಎಂದು ವಿಕ್ರಮಸಿಂಘೆ ತಿಳಿಸಿದ್ದಾರೆ.

ಲಸಿತ್ ಮಾಲಿಂಗ
ಲಸಿತ್ ಮಾಲಿಂಗ
author img

By

Published : May 10, 2021, 7:29 PM IST

ಕ್ಯಾಂಡಿ: ಭಾರತದಲ್ಲಿ ಅಕ್ಟೋಬರ್- ನವೆಂಬರ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗಾಗಿ ಯಾರ್ಕರ್​ ಸ್ಪೆಷಲಿಸ್ಟ್ ಲಸಿತ್ ಮಾಲಿಂಗ ಶ್ರೀಲಂಕಾ ರಾಷ್ಟ್ರೀಯ ತಂಡಕ್ಕೆ ಮರಳುವ ಸಾಧ್ಯತೆಯಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಪ್ರಮೋದ್ಯ ವಿಕ್ರಮಸಿಂಘೆ ಹೇಳಿದ್ದಾರೆ.

ನಾವು ಲಸಿತ್ ಮಾಲಿಂಗ ಅವರ ಜೊತೆ ಶೀಘ್ರದಲ್ಲೇ ಮಾತನಾಡಲಿದ್ದೇವೆ. ಅವರು ನಮ್ಮ ಮುಂಬರುವ ಟಿ-20 ಪ್ರವಾಸ ಮತ್ತು ಅಕ್ಟೋಬರ್​ನಲ್ಲಿ ನಡೆಯುವ ಟಿ-20 ವಿಶ್ವಕಪ್​ನ ಯೋಜನೆಯಲ್ಲಿ ಅವರಿದ್ದಾರೆ ಎಂದು ವಿಕ್ರಮಸಿಂಘೆ ತಿಳಿಸಿದ್ದಾರೆ.

ನಾವು 2023ರ ಏಕದಿನ ವಿಶ್ವಕಪ್​ನ ದೃಷ್ಟಿಯಿಂದ ದೀರ್ಘಾವಧಿಯ ಯೋಜನೆಯ ಮೇಲೆ ಕೆಲಸ ಮಾಡುತ್ತಿದ್ದೇವೆ. ಫಿಟ್​ನೆಸ್​ ಮತ್ತು ವಯೋಮಿತಿ ನಾವು ಗಮನ ನೀಡುತ್ತಿರುವ ಪ್ರಮುಖ ಅಂಶಗಳಾಗಿದ್ದು, ಅವಗಳಿಗೆ ನಾವು ನಿಖರವಾಗಿ ಹೊಂದಿಕೊಳ್ಳಬೇಕಿದೆ ಎಂದು ಅವರು ತಿಳಿಸಿದ್ದಾರೆ.

2021 ಮತ್ತು 2022ರಲ್ಲಿ ಸತತ ಎರಡು ಟಿ - 20 ವಿಶ್ವಕಪ್​ಗಳನ್ನು ಹೊಂದಿರುವುದರಿಂದ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಅನುಭವಿ ಮಾಲಿಂಗ ಅವರನ್ನು ಮತ್ತೆ ತಂಡಕ್ಕೆ ಕರೆಸಿಕೊಳ್ಳುವ ಆಶಯದಲ್ಲಿದೆ.

ಮಾಲಿಂಗ ಕೂಡ ನಮ್ಮ ಯೋಜನೆಯಲ್ಲಿದ್ದಾರೆ. ಅವರ ಪ್ರಸ್ತುತ ಫಾರ್ಮ್​ನಲ್ಲೂ ಅವರು ಶ್ರೀಲಂಕಾ ಕಂಡಿರುವ ಅದ್ಭುತ ಬೌಲರ್​ಗಳಲ್ಲಿ ಒಬ್ಬರು ಎನ್ನುವುದನ್ನು ನಾವು ಎಂದಿಗೂ ಮರೆಯುವಂತಿಲ್ಲ. ಅವರ ದಾಖಲೆಗಳು ಅದನ್ನು ಹೇಳುತ್ತಿವೆ. ಈ ವರ್ಷ ಮತ್ತು ಮುಂದಿನ ವರ್ಷ ಎರಡು ಟಿ-20 ವಿಶ್ವಕಪ್​ಗಳು ಬರಲಿವೆ. ಆದ್ದರಿಂದ ನಾವು ಅವರನ್ನು ಮುಂದಿನ ಒಂದೆರಡು ದಿನಗಳಲ್ಲಿ ಭೇಟಿ ಮಾಡಿದಾಗ ನಮ್ಮ ಯೋಜನೆಗಳನ್ನು ಅವರೊಡನೆ ಚರ್ಚಿಸಲಿದ್ದೇವೆ ಎಂದು ಶ್ರೀಲಂಕಾದ ಮಾಜಿ ಬೌಲರ್ ಆಗಿರುವ ವಿಕ್ರಮಸಿಂಘೆ ಹೇಳಿದ್ದಾರೆ.

ಐಪಿಎಲ್ ಮತ್ತು ಟಿ-20 ಕ್ರಿಕೆಟ್​ನಲ್ಲಿ ಗರಿಷ್ಟ ವಿಕೆಟ್ ಪಡೆದ ದಾಖಲೆ ಹೊಂದಿರುವ ಮಾಲಿಂಗ ಕೂಡ ಆಯ್ಕೆಗಾರರೊಂದಿಗೆ ಮಾತನಾಡುವುದಕ್ಕೆ ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ನಾನು ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ನಿಂದ ನಿವೃತ್ತಿಯಾಗಿದ್ದೇನೆ. ಟಿ-20 ಕ್ರಿಕೆಟ್​ನಿಂದ ಇನ್ನೂ ನಿವೃತ್ತಿಯಾಗಿಲ್ಲ. ನನ್ನಂತಹ ಹಿರಿಯ ಆಟಗಾರರ ಸೇವೆಯನ್ನು ಆಯ್ಕೆ ಸಮಿತಿ ಯಾವ ರೀತಿ ಪಡೆಯಲಿದೆ ಎಂಬುದನ್ನು ತಿಳಿಯಲು ನಾನು ಕೂಡ ಉತ್ಸುಕನಾಗಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ದೀರ್ಘ ಸಮಯದ ಹಿಂತಿರುಗಿದಾಗ ದೇಶಕ್ಕಾಗಿ ಹಲವು ಬಾರಿ ಉತ್ತಮ ಪ್ರದರ್ಶನದ ಮೂಲಕ ನನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ಕೋವಿಡ್​ ಹೋರಾಟಕ್ಕೆ 30 ಕೋಟಿ ರೂ ದೇಣಿಗೆ ನೀಡಿದ ಎಸ್​ಆರ್​​ಹೆಚ್​ ಸಂಸ್ಥೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.