ಭಾರತ ತಂಡದ ಯಾರ್ಕರ್ ಕಿಂಗ್, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕಮ್ಬ್ಯಾಕ್ ಮಾಡುವತ್ತ ಸಿದ್ಧತೆ ನಡೆಸಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಬುಮ್ರಾ ಶುಕ್ರವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಲ್ಲಿ ಜಸ್ಪ್ರೀತ್ ಕಣಕ್ಕಿಳಿಯಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಭಾರತವು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಲುಪುವಲ್ಲಿ ಬುಮ್ರಾ ಉಪಸ್ಥಿತಿ ಪ್ರಮುಖ ಪಾತ್ರ ವಹಿಸಲಿದೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯು ನಿರ್ಣಾಯಕವಾಗಲಿದೆ.
- " class="align-text-top noRightClick twitterSection" data="
">
ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿರುವ ವಿಡಿಯೋಗೆ ಬುಮ್ರಾ 'Full throttle' ಎಂಬ ಶೀರ್ಷಿಕೆ ನೀಡಿದ್ದಾರೆ. ಕಳೆದ ತಿಂಗಳು ಕೂಡ ಟ್ವಿಟರ್ 'ಮುಂದೆ ಒಳ್ಳೆಯ ಸಮಯ' ಎಂದು ಬರೆದ ಪೋಸ್ಟ್ ಮಾಡಿದ್ದರು. ಇನ್‌ಸ್ಟಾಗ್ರಾಮ್ ಪೋಸ್ಟ್ಗೆ ಲಕ್ಷಾಂತರ ಲೈಕ್ಸ್ ಹಾಗೂ ಕಾಮೆಂಟ್ಸ್ ಬಂದಿವೆ. ಅದರಲ್ಲಿ ಹಲವರು ಬುಮ್ರಾ ಐಪಿಎಲ್ಗೆ ಮಾತ್ರ ಫಿಟ್, ಐಪಿಎಲ್ಗೆ ಸಿದ್ಧತೆ ನಡೆಸಿದ್ದಾರೆ ಅಂತೆಲ್ಲ ಟೀಕಿಸಿದ್ದಾರೆ.
ಬೆನ್ನು ನೋವಿನ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್ನಿಂದ ಟೀಮ್ನಿಂದ ಬುಮ್ರಾ ಹೊರಗಿದ್ದಾರೆ. ಟಿ20 ವಿಶ್ವಕಪ್‌ನಿಂದಲೂ ಹೊರಗುಳಿದ ಕಾರಣ ತಂಡಕ್ಕೆ ಬುಮ್ರಾ ಅನುಪಸ್ಥಿತಿ ಕಾಡಿತ್ತು.
ಇದನ್ನೂ ಓದಿ: ಬಿಗ್ ಬ್ಯಾಶ್ ಲೀಗ್: 15 ರನ್ಗಳಿಗೆ ಆಲೌಟ್ ಆದ ಸಿಡ್ನಿ ಥಂಡರ್ಸ್!