ದುಬೈ: ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸಾಮ್ಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
6ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡ ಇಂದಿನ ಪಂದ್ಯವನ್ನು ಗೆದ್ದರೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಲಿದೆ. ಸನ್ರೈಸರ್ಸ್ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿರುವುದರಿಂದ ಉಳಿದ 5 ಪಂದ್ಯಗಳನ್ನು ಗೆದ್ದು ತಮ್ಮ ಕೊನೆಯ ಸ್ಥಾನವನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಕಿದೆ.
-
.@rajasthanroyals have won the toss and they will bat first against #SRH.
— IndianPremierLeague (@IPL) September 27, 2021 " class="align-text-top noRightClick twitterSection" data="
Live - https://t.co/hhKTGSojjm #SRHvRR #VIVOIPL pic.twitter.com/P9INTsd6RB
">.@rajasthanroyals have won the toss and they will bat first against #SRH.
— IndianPremierLeague (@IPL) September 27, 2021
Live - https://t.co/hhKTGSojjm #SRHvRR #VIVOIPL pic.twitter.com/P9INTsd6RB.@rajasthanroyals have won the toss and they will bat first against #SRH.
— IndianPremierLeague (@IPL) September 27, 2021
Live - https://t.co/hhKTGSojjm #SRHvRR #VIVOIPL pic.twitter.com/P9INTsd6RB
ರಾಜಸ್ಥಾನ್ ರಾಯಲ್ಸ್ ಪರ ಕಾರ್ತಿಕ್ ತ್ಯಾಗಿ ಗಾಯದ ಕಾರಣ ಹೊರಬಿದ್ದಿದ್ದು, ಅವರ ಸ್ಥಾನವನ್ನು ಉನಾದ್ಕಟ್ ತುಂಬಲಿದ್ದಾರೆ. ಡೇವಿಡ್ ಮಿಲ್ಲರ್ ಮತ್ತು ತಬ್ರೈಜ್ ಶಂಸಿ ಬದಲಿಗೆ ಎವಿನ್ ಲೂಯಿಸ್ ಮತ್ತು ಕ್ರಿಸ್ ಮೋರಿಸ್ ತಂಡಕ್ಕೆ ಮರಳಿದ್ದಾರೆ.
ಇಂದಿನ ಪಂದ್ಯದಲ್ಲಿ ಫಾರ್ಮ್ ಕಳೆದುಕೊಂಡಿರುವ ಡೇವಿಡ್ ವಾರ್ನರ್ ಬದಲಿಗೆ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ಮನ್ ಜೇಸನ್ ರಾಯ್ ಹೈದರಾಬಾದ್ ಪರ ಪದಾರ್ಪಣೆ ಮಾಡಲಿದ್ದಾರೆ. ಇನ್ನು ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಕೇದಾರ್ ಜಾಧವ್, ಮನೀಶ್ ಪಾಂಡೆ ಮತ್ತು ಗಾಯಗೊಂಡಿರುವ ಖಲೀಲ್ ಅಹ್ಮದ್ ಬದಲಿಗೆ ಪ್ರಿಯಂ ಗರ್ಗ್, ಅಭಿಶೇಕ್ ಶರ್ಮಾ ಮತ್ತು ಸಿದ್ಧಾರ್ಥ್ ಕೌಲ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ : ಜೇಸನ್ ರಾಯ್, ವೃದ್ಧಿಮಾನ್ ಸಹಾ (ವಿ.ಕೀ), ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ
ರಾಜಸ್ಥಾನ ರಾಯಲ್ಸ್ : ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿ.ಕೀ/ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲೊಮ್ರೋರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಚೇತನ್ ಸಕಾರಿಯಾ, ಜಯದೇವ್ ಉನಾದ್ಕಟ್, ಮುಸ್ತಫಿಜುರ್ ರಹಮಾನ್