ETV Bharat / sports

ಶಾರೂಕ್​ ಖಾನ್​ 47ರನ್​... ಚೆನ್ನೈ ಗೆಲುವಿಗೆ 107 ರನ್​ ಟಾರ್ಗೆಟ್​ ನೀಡಿದ ಪಂಜಾಬ್​

ಇಂಡಿಯನ್​ ಪ್ರೀಮಿಯರ್ ಲೀಗ್​ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​ ವಿರುದ್ಧ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಪಂಜಾಬ್​ ಎದುರಾಳಿ ತಂಡಕ್ಕೆ ಸುಲಭ ರನ್​ಗಳ ಟಾರ್ಗೆಟ್ ನೀಡಿದೆ.

Punjab vs Chennai
Punjab vs Chennai
author img

By

Published : Apr 16, 2021, 9:22 PM IST

ಮುಂಬೈ: ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್​ ಟೂರ್ನಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲಿಂಗ್​ ದಾಳಿಗೆ ತತ್ತರಿಸಿ ಹೋಗಿರುವ ಪಂಜಾಬ್ 8ವಿಕೆಟ್ ​ನಷ್ಟಕ್ಕೆ ಕೇವಲ 106 ರನ್​ಗಳಿಕೆ ಮಾಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದ ಪಂಜಾಬ್​ ಆರಂಭದಿಂದಲೂ ವಿಕೆಟ್ ಕಳೆದುಕೊಂಡಿದ್ದರಿಂದ ಬೃಹತ್​ ರನ್​ ಪೇರಿಸಲು ಸಾಧ್ಯವಾಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗರಾದ ಮಯಾಂಕ್​ ಹಾಗೂ ಕ್ಯಾಪ್ಟನ್ ರಾಹುಲ್​ ನಿರಾಸೆ ಮೂಡಿಸಿದರು. ಚೆನ್ನೈ ಪರ ಮೊದಲ ಓವರ್​​ ಎಸೆದ ದೀಪಕ್​ ಚಹರ್​ ಓವರ್​ನಲ್ಲೇ ಮಯಾಂಕ್​(0) ವಿಕೆಟ್ ಒಪ್ಪಿಸಿದರೆ, ರಾಹುಲ್​(5)ರನ್​ಗಳಿಕೆ ಮಾಡಿದ್ದ ವೇಳೆ ರನೌಟ್ ಬಲೆಗೆ ಬಿದ್ದರು.

ಇದಾದ ಬಳಿಕ ಬಂದ ಕ್ರಿಸ್ ಗೇಲ್​(10), ದೀಪಕ್​ ಹೂಡಾ(10), ಪೂರನ್​ (0) ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದ್ದರಿಂದ ತಂಡ 4.4 ಓವರ್​ಗಳಲ್ಲಿ ಕೇವಲ 26 ರನ್​ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತು.

ಈ ವೇಳೆ ಒಂದಾದ ಶಾರೂಕ್ ಖಾನ್​ - ರಿಚರ್ಡ್ಸನ್​ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು. ಆದರೆ 15 ರನ್​ಗಳಿಕೆ ಮಾಡಿದ್ದ ವೇಳೆ ಮೊಯಿನ್ ಅಲಿ ಬೌಲಿಂಗ್​ನಲ್ಲಿ ರಿಚರ್ಡ್ಸನ್​ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ಶಾರೂಕ್ ಖಾನ್(47) ವಿಕೆಟ್​ ಒಪ್ಪಿಸಿದರು. ಇದಾದ ಬಳಿಕ ಮುರ್ಗನ್​ ಅಶ್ವಿನ್​(6), ಶಮಿ ಅಜೇಯ(9)ರನ್​ಗಳಿಕೆ ಮಾಡಿದ್ದರಿಂದ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ನಷ್ಟಕ್ಕೆ 106 ರನ್​ಗಳಿಕೆ ಮಾಡಿದ್ದು, ಚೆನ್ನೈಗೆ 107ರನ್​ಗಳ ಸುಲಭ ಗುರಿ ನೀಡಿದೆ. ತಂಡದ ಪರ ಶಾರೂಕ್ ಖಾನ್ 36 ಎಸೆತಗಳಲ್ಲಿ​ 47ರನ್​ಗಳಿಕೆ ಮಾಡಿರುವುದು ಅತ್ಯಧಿಕ ಸ್ಕೋರ್​ ಆಗಿದೆ.

ಚೆನ್ನೈ ಪರ ಮಾರಕ ಬೌಲಿಂಗ್​ ಪ್ರದರ್ಶನ ನೀಡಿದ ದೀಪಕ್​ ಚಹರ್​​ 4 ಓವರ್​ಗಳಲ್ಲಿ 13 ರನ್​ ನೀಡಿ ಪ್ರಮುಖ 4 ವಿಕೆಟ್​ ಪಡೆದುಕೊಂಡರೆ, ಸ್ಯಾಮ್​ ಕರ್ರನ್​, ಮೊಯಿನ್ ಅಲಿ, ಡ್ವೇನ್​ ಬ್ರಾವೋ ತಲಾ 1ವಿಕೆಟ್ ಕಬಳಿಸಿ ತಂಡಕ್ಕೆ ಮೆಲುಗೈ ತಂದುಕೊಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.