ETV Bharat / sports

ಮಾಲಿಂಗ ಉಪಸ್ಥಿತಿಯನ್ನು ತಂಡ ಕಳೆದುಕೊಳ್ಳಲಿದೆ: ರೋಹಿತ್ ಶರ್ಮಾ

author img

By

Published : Jan 22, 2021, 8:49 AM IST

ಸ್ಟಾರ್​ ಬೌಲರ್​ ಲಸಿತ್ ಮಾಲಿಂಗ ಪ್ರಾಂಚೈಸಿ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿದ್ದು, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಅವರ ಉಪಸ್ಥಿತಿಯನ್ನು ತಂಡ ಕಳೆದುಕೊಳ್ಳಲಿದೆ ಎಂದಿದ್ದಾರೆ.

Rohit Sharma on Lasith Malinga
ಮಲಿಂಗ ಉಪಸ್ಥಿತಿಯನ್ನು ತಂಡ ಕಳೆದುಕೊಳ್ಳಲಿದೆ

ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಪರ ಅತಿ ಹೆಚ್ಚು ವಿಕೆಟ್​ ಪಡೆದುಕೊಂಡಿರುವ ಸ್ಟಾರ್​ ಬೌಲರ್​ ಲಸಿತ್ ಮಾಲಿಂಗ ಪ್ರಾಂಚೈಸಿ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿದ್ದು, ಮುಂಬೈ ನಾಯಕ ರೋಹಿತ್ ಶರ್ಮಾ ಯಾರ್ಕರ್​ ಕಿಂಗ್ ಲಸಿತ್ ಮಾಲಿಂಗ ಅವರನ್ನು ಉತ್ತಮ ಆಟಗಾರ ಎಂದು ಅಭಿನಂದಿಸಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಮಾಲಿಂಗ ಜೊತೆ ಇರುವ ಪೋಟೋ ಪೋಸ್ಟ್ ಮಾಡಿರುವ ರೋಹಿತ್ ಶರ್ಮಾ, ಮಾಲಿಂಗ ಉತ್ತಮ ಆಟಗಾರರಲ್ಲಿ ಒಬ್ಬರು, ಪ್ರಮುಖ ಮ್ಯಾಚ್​ ವಿನ್ನರ್​ ಕೂಡ ಹೌದು. ಅವರ ಉಪಸ್ಥಿತಿಯನ್ನು ತಂಡ ಕಳೆದುಕೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ.

ಲಸಿತ್ ಮಾಲಿಂಗ ಇನ್ಮುಂದೆ ಪ್ರಾಂಚೈಸಿ ಕ್ರಿಕೆಟ್​ನಲ್ಲಿ ಭಾಗಿಯಾಗಲ್ಲ. ತಾವು ಅದರಿಂದ ನಿವೃತ್ತಿ ಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಕುಟುಂಬದೊಂದಿಗೆ ಚರ್ಚೆ ನಡೆಸಿದ ನಂತರ ಈ ನಿರ್ಧಾರ ಕೈಗೊಂಡಿದ್ದು, ಪ್ರಾಂಚೈಸಿ ಕ್ರಿಕೆಟ್​ನಲ್ಲಿ ನಿವೃತ್ತಿ ಹೊಂದಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಸಾಂಕ್ರಾಮಿಕ ಪರಿಸ್ಥಿತಿ ಹಾಗೂ ಪ್ರಯಾಣದ ಮೇಲಿನ ನಿರ್ಬಂಧಗಳು ಹಾಗೂ ವೈಯಕ್ತಿಕ ವಿಷಯಗಳಿಂದಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಜತೆಗೆ ಕಳೆದ ತಿಂಗಳ ಇದಕ್ಕೆ ಸಂಬಂಧಿಸಿದಂತೆ ತಾವು ಮುಂಬೈ ಇಂಡಿಯನ್ಸ್​ ಪ್ರಾಂಚೈಸಿ ಜೊತೆ ಮಾತುಕತೆ ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಮುಂಬೈ ಇಂಡಿಯನ್ಸ್ ಪ್ರಾಂಚೈಸಿ ಅವರನ್ನ ತಂಡದಿಂದ ಕೈಬಿಟ್ಟಿದೆ.

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಮುಂಬೈ ಇಂಡಿಯನ್ಸ್​ ಮಾಲೀಕ ಆಕಾಶ್​ ಅಂಬಾನಿ, ಕಳೆದ 12 ವರ್ಷಗಳಿಂದ ಅವರು ನಮ್ಮ ತಂಡದ ಭಾಗವಾಗಿದ್ದರು. ಅವರು ತೆಗೆದುಕೊಂಡಿರುವ ನಿರ್ಧಾರವನ್ನ ನಾವು ಗೌರವಿಸುತ್ತೇವೆ. ಇನ್ನೂ ಐದು ವರ್ಷಗಳ ಕಾಲ ಅವರು ನಮ್ಮ ಬೌಲಿಂಗ್​ ವಿಭಾಗದ ಪ್ರಮುಖ ಶಕ್ತಿಯಾಗಲು ನಾನು ಇಷ್ಟಪಡುತ್ತಿದೆ ಎಂದಿದ್ದಾರೆ.

ಈಗಾಗಲೇ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್​ಗೆ ಮಾಲಿಂಗ ನಿವೃತ್ತಿ ಘೋಷಣೆ ಮಾಡಿದ್ದು, ಟಿ-20 ಕ್ರಿಕೆಟ್​ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಐಪಿಎಲ್​ನಲ್ಲಿ 122 ಪಂದ್ಯಗಳನ್ನಾಡಿ 170 ವಿಕೆಟ್​ ಪಡೆದುಕೊಂಡಿದ್ದಾರೆ. ಇದರಲ್ಲಿ 13ರನ್​ಗಳಿಗೆ 5 ವಿಕೆಟ್ ಪಡೆದಿರುವುದು ಅತ್ಯದ್ಭುತ ಸಾಧನೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.