ದುಬೈ: 2022ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದ್ದು, ಮಾರ್ಚ್ 4ರಿಂದ ನ್ಯೂಜಿಲ್ಯಾಂಡ್ನಲ್ಲಿ ಆರಂಭವಾಗಲಿರುವ ಈ ಟೂರ್ನಿ 31 ದಿನಗಳ ಕಾಲ ಅಂದರೆ ಏಪ್ರಿಲ್ 3ರವರೆಗೆ ನಡೆಯಲಿದೆ.
2021ರ ಫೆಬ್ರವರಿ - ಮಾರ್ಚ್ ಅವಧಿಯಲ್ಲಿ ಜರುಗಬೇಕಿದ್ದ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಾವಳಿಯನ್ನು ಕೊರೊನಾ ಕಾರಣದಿಂದ 2022ಕ್ಕೆ ಮುಂದೂಡಲಾಗಿತ್ತು. ಮೊದಲ ಸೆಮಿಫೈನಲ್ ಮಾರ್ಚ್ 30ರಂದು ವೆಲ್ಲಿಂಗ್ಟನ್ನ ಬ್ಯಾಸಿನ್ ರಿಸರ್ವ್ ಮತ್ತು ಎರಡನೇ ಸೆಮಿಫೈನಲ್ ಮಾರ್ಚ್ 31ರಂದು ಕ್ರೈಸ್ಟ್ಚರ್ಚ್ನ ಹ್ಯಾಗ್ಲೇ ಓವಲ್ನಲ್ಲಿ ನಡೆಯಲಿದ್ದು, ಏಪ್ರಿಲ್ 3ರಂದು ಓವಲ್ ಮೈದಾನದಲ್ಲಿ ಫೈನಲ್ ಪಂದ್ಯ ಜರುಗಲಿದೆ.
ಭಾರತ ಮಹಿಳಾ ತಂಡವು ಗ್ರೂಪ್ ಹಂತದಲ್ಲಿ ಒಟ್ಟು ಏಳು ಪಂದ್ಯಗಳನ್ನು ಆಡಲಿದೆ. ಅದರಲ್ಲಿ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ನಾಲ್ಕು ಪಂದ್ಯಗಳಿದ್ದರೆ, ಉಳಿದ ಮೂರು ಪಂದ್ಯಗಳು ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವ ತಂಡಗಳೊಂದಿಗೆ ಸೆಣಸಾಟ ನಡೆಸಲಿದೆ. ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಮಾರ್ಚ್ 6ರಂದು ಆಡಲಿದೆ.
ಪಂದ್ಯಗಳು ಎಲ್ಲೆಲ್ಲಿ ಜರುಗಲಿವೆ: ಆಕ್ಲೆಂಡ್, ಟೌರಂಗಾ, ಹ್ಯಾಮಿಲ್ಟನ್, ವೆಲ್ಲಿಂಗ್ಟನ್, ಕ್ರೈಸ್ಟ್ಚರ್ಚ್ ಮತ್ತು ಡುನೆಡಿನ್.
ವಿಶ್ವಕಪ್ ವೇಳಾಪಟ್ಟಿ
-
It's here 🗓️
— ICC (@ICC) December 15, 2020 " class="align-text-top noRightClick twitterSection" data="
Which clash are you most looking forward to?#WWC22 pic.twitter.com/HcKdxzaEbG
">It's here 🗓️
— ICC (@ICC) December 15, 2020
Which clash are you most looking forward to?#WWC22 pic.twitter.com/HcKdxzaEbGIt's here 🗓️
— ICC (@ICC) December 15, 2020
Which clash are you most looking forward to?#WWC22 pic.twitter.com/HcKdxzaEbG