ETV Bharat / sports

ವನಿತೆಯರ ಕ್ರಿಕೆಟ್​: ಮಂಧಾನಾ ಪಂದ್ಯಶ್ರೇಷ್ಠ ಆಟ, ನ್ಯೂಜಿಲೆಂಡ್‌ ವಿರುದ್ಧ ಕೊನೆಯ ಪಂದ್ಯ ಗೆದ್ದ ಭಾರತ - 6 ವಿಕೆಟ್​ ಗೆಲುವು ಸಾಧಿಸಿದ ವನಿತೆಯರು

ಆತಿಥೇಯ ನ್ಯೂಜಿಲ್ಯಾಂಡ್​ ವಿರುದ್ಧ ನಡೆದ 5ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ವನಿತೆಯರು 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದರು.

india-women
ಭಾರತ ಮಹಿಳೆಯರು
author img

By

Published : Feb 24, 2022, 11:22 AM IST

ನ್ಯೂಜಿಲ್ಯಾಂಡ್​: ಸ್ಟಾರ್​ ಆಟಗಾರ್ತಿಯರಾದ ಸ್ಮೃತಿ ಮಂಧಾನಾ, ಹರ್ಮನ್​ಪ್ರೀತ್​ ಕೌರ್​, ನಾಯಕಿ ಮಿಥಾಲಿ ರಾಜ್​ರ ಹೋರಾಟದ ಫಲವಾಗಿ ಆತಿಥೇಯ ನ್ಯೂಜಿಲ್ಯಾಂಡ್​ ವಿರುದ್ಧ ನಡೆದ 5ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ವನಿತೆಯರು 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದರು. ಈ ಮೂಲಕ ಏಕದಿನ ಸರಣಿ 4-1 ರಲ್ಲಿ ಕೊನೆಗೊಂಡಿತು.

ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್​ ವನಿತೆಯರು ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 251 ರನ್​ ಗಳಿಸಿದ್ದರು. ಆತಿಥೇಯರ ಪರ ಮತ್ತೆ ಮಿಂಚಿದ ಅಮೇಲಿಯಾ ಕೆರ್(66)​ ಮತ್ತೊಂದು ಅರ್ಧಶತಕ ಸಿಡಿಸಿದರು. ಎಸ್​.ಡೆವೈನ್​(34) ಲೌರೆನ್​ ಡೌನ್​(30), ಜೆನ್ಸೆನ್​(30) ರನ್​ ಗಳಿಸಿ ಭಾರತೀಯ ಬೌಲರ್​ಗಳಿಗೆ ಅಲ್ಪ ಪ್ರತಿರೋಧ ಒಡ್ಡಿದರು. ಉಳಿದಂತೆ ಎಲ್ಲಾ ಆಟಗಾರ್ತಿಯರು ಅಲ್ಪ ಮೊತ್ತದಲ್ಲೇ ಔಟಾದರು.

ಕರಾರುವಾಕ್ ​ಬೌಲಿಂಗ್ ದಾಳಿ ನಡೆಸಿದ ಭಾರತದ ವನಿತೆಯರು ನ್ಯೂಜಿಲ್ಯಾಂಡ್ ತಂಡ ಬೃಹತ್​ ಮೊತ್ತ ಪೇರಿಸದಂತೆ ತಡೆ ಒಡ್ಡಿದರು. ಗಾಯಕ್ವಾಡ್​ ಮತ್ತು ದೀಪ್ತಿ ಶರ್ಮಾ ತಮ್ಮ ಕೋಟಾದ 10 ಓವರ್​ ಎಸೆದು ತಲಾ 2 ವಿಕೆಟ್​ ಪಡೆದರೆ, ಸ್ನೇಹ್​ ರಾಣಾ 2, ಪೂನಮ್​ ಯಾದವ್​, ಮೇಘನಾ ಸಿಂಗ್​ ತಲಾ 1 ವಿಕೆಟ್​ ಪಡೆದರು.

ಬ್ಯಾಟ್​ ಝಳಪಿಸಿದ ಮಂಧಾನಾ: ನ್ಯೂಜಿಲ್ಯಾಂಡ್​ ನೀಡಿದ 251 ರನ್​ಗಳ ಗುರಿ ಬೆನ್ನತ್ತಿದ್ದ ಭಾರತ ವನಿತೆಯರು 46 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 255 ರನ್​ ಗಳಿಸಿ ಜಯದ ನಗೆ ಬೀರಿದರು. ಇದರಲ್ಲಿ ಆರಂಭಿಕ ಆಟಗಾರ್ತಿ ಶಫಾಲಿ ಶರ್ಮಾ(9) ಬೇಗನೇ ಔಟ್​ ಆಗಿ ನಿರಾಸೆ ಮೂಡಿಸಿದರು. ಈ ವೇಳೆ ತಂಡ ಜಯದ ನೊಗ ಹೊತ್ತ ಸ್ಮೃತಿ ಮಂಧಾನಾ 71 ರನ್​ ಸಿಡಿಸಿದರು. ಇದರಲ್ಲಿ ಭರ್ಜರಿ 9 ಬೌಂಡರಿಗಳಿದ್ದವು.

ಇದಲ್ಲದೇ, ದೀಪ್ತಿ ಶರ್ಮಾ (22), ಹರ್ಮನ್​ಪ್ರೀತ್​ ಕೌರ್​(63) ಮತ್ತು ನಾಯಕಿ ಮಿಥಾಲಿ ರಾಜ್​ ಔಟಾಗದೇ 57 ರನ್​ ಸಿಡಿಸಿ ಜಯದ ಶಾಸ್ತ್ರ ಮುಗಿಸಿದರು. ನ್ಯೂಜಿಲ್ಯಾಂಡ್ ಪರ ಹೈಲೈ ಜಾನ್ಸನ್​, ಹನ್ನಾಹ್​ ರೋವ್​, ಫ್ರಾನ್​ ಜೋನಸ್​, ಅಮೇಲಿಯಾ ಕೆರ್​ ತಲಾ 1 ವಿಕೆಟ್​ ಪಡೆದರು. ಇನ್ನು ಭಾರತದ ಗೆಲುವಿಗೆ ಕಾರಣವಾದ ಸ್ಮೃತಿ ಮಂಧಾನಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: ಭಾರತ ಶ್ರೀಲಂಕಾ ಮೊದಲ ಟಿ 20: ಆತಿಥೇಯರಿಗೆ ಗೆಲುವಿನ ಹುಮ್ಮಸ್ಸು; ಪ್ರವಾಸಿಗರಿಗೆ ಗಾಯದ ತಲೆನೋವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.