ETV Bharat / sports

ಮಹಿಳಾ ಕ್ರಿಕೆಟ್ ಟೆಸ್ಟ್​​: ದೀಪ್ತಿ, ಪೂಜಾ ಆಸರೆಯ ಇನ್ನಿಂಗ್ಸ್​; ಭಾರತಕ್ಕೆ ಭಾರಿ ಮುನ್ನಡೆ

AUSW vs INDW Day 2: ಎರಡನೇ ದಿನದಾಟದಂತ್ಯಕ್ಕೆ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 157 ರನ್​ಗಳ ಮುನ್ನಡೆ ಪಡೆದುಕೊಂಡಿತು. ​

India Women vs Australia Women Only Test Day 2  Score

author img

By ETV Bharat Karnataka Team

Published : Dec 22, 2023, 6:41 PM IST

ಮುಂಬೈ(ಮಹಾರಾಷ್ಟ್ರ): ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ ಮತ್ತು ದೀಪ್ತಿ ಶರ್ಮಾ ಅವರ ಅರ್ಧಶತಕದ ಇನ್ನಿಂಗ್ಸ್​ ನೆರವಿನಿಂದ ಭಾರತದ ವನಿತೆಯರ ತಂಡ ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 157 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಎರಡನೇ ದಿನದಾಟದ ಅಂತ್ಯಕ್ಕೆ ತಂಡ 376ಕ್ಕೆ 7 ವಿಕೆಟ್ ಕಳೆದುಕೊಂಡಿದ್ದು, ಕ್ರೀಸ್​ನಲ್ಲಿ ದೀಪ್ತಿ ಶರ್ಮಾ (70 ರನ್) ಮತ್ತು ಪೂಜಾ ವಸ್ತ್ರಾಕರ್ (33 ರನ್) ಇದ್ದಾರೆ. ಇನ್ನೆರಡು ದಿನಗಳ ಪಂದ್ಯ ಬಾಕಿ ಉಳಿದಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ 77.4 ಓವರ್​ಗೆ 219 ರನ್​ ಗಳಿಸಿ ಆಲೌಟಾಗಿತ್ತು. ಇನ್ನಿಂಗ್ಸ್​ ಆರಂಭಿಸಿದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 19 ಓವರ್​ಗೆ 1 ವಿಕೆಟ್​ ನಷ್ಟಕ್ಕೆ 98 ರನ್​ ಕಲೆಹಾಕಿತ್ತು. 59 ಎಸೆತಗಳಲ್ಲಿ 40 ರನ್​ ಗಳಿಸಿದ ಶೆಫಾಲಿ ವರ್ಮಾ ಔಟ್​ ಆಗಿದ್ದರು. ಉಪನಾಯಕಿ ಮಂಧಾನ ಮತ್ತು 'ನೈಟ್​ ವಾಚ್​ಮೆನ್' ಸ್ನೇಹ ರಾಣಾ ಕ್ರೀಸ್​ ಕಾಯ್ದುಕೊಂಡಿದ್ದರು. ​

ಎರಡನೇ ದಿನದ ಮೊದಲ ಸೆಷನ್​ನಲ್ಲಿ ಭಾರತ 2 ವಿಕೆಟ್​ ಕಳೆದುಕೊಂಡು 95 ರನ್​ ಕಲೆಹಾಕಿತು. ನೈಟ್​ ವಾಚ್​ಮೆನ್​ ಆಗಿ ಬಂದಿದ್ದ ರಾಣಾ ಎರಡನೇ ವಿಕೆಟ್​ಗೆ 50 ರನ್​ಗಳ ಪಾಲುದಾರಿಕೆ ಹಂಚಿಕೊಂಡರು. 57 ಎಸೆತ​ ಆಡಿದ ರಾಣಾ ಕೇವಲ 9 ರನ್​ ಗಳಿಸಿದರಾದೂ ವಿಕೆಟ್​ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಅರ್ಧಶತಕ ದಾಖಲಿಸಿದ ಮಂಧಾನ ಶತಕದತ್ತ ದಾಪುಗಾಲಿಡುತ್ತಿರುವಾಗ ರನೌಟ್​ಗೆ ಬಲಿಯಾದರು. 106 ಎಸೆತ​ ಆಡಿದ ಸ್ಮೃತಿ 12 ಬೌಂಡರಿಗಳ ಸಹಾಯದಿಂದ 74 ರನ್​ ಕಲೆಹಾಕಿದರು.

ಜೆಮಿಮಾ-ರಿಚಾ ಶತಕದ ಜೊತೆಯಾಟ: 4ನೇ ವಿಕೆಟ್​ಗೆ ಒಂದಾದ ಜೆಮಿಮಾ ರಾಡ್ರಿಗಸ್ ಮತ್ತು ರಿಚಾ ಘೋಷ್ 113 ರನ್​ಗಳ ಜೊತೆಯಾಟ ಆಡಿದರು. 104 ಎಸೆತ​ ಆಡಿದ ರಿಚಾ 7 ಬೌಂಡರಿಯ ಸಹಾಯದಿಂದ 52 ರನ್​ ಕಲೆಹಾಕಿದರು. ರಿಚಾ ವಿಕೆಟ್​ ನಂತರ ಬಂದ ನಾಯಕಿ ಹರ್ಮನ್​ಪ್ರೀತ್​ ಕೌರ್​ ಶೂನ್ಯಕ್ಕೆ ವಿಕೆಟ್​ ಕೊಟ್ಟರು. ಅವರ ಬೆನ್ನಲ್ಲೇ ಯಾಸ್ತಿಕ ಭಾಟಿಯಾ ಸಹ ಪೆವಿಲಿಯನ್​ಗೆ ಮರಳಿದರು. 121 ಎಸೆತ​ ಆಡಿ 9 ಬೌಂಡರಿಗಳ ಸಹಾಯದಿಂದ 73 ರನ್​ ಗಳಿಸಿದ್ದ ಜೆಮಿಮಾ ರಾಡ್ರಿಗಸ್ ಸಹ ವಿಕೆಟ್​ ಕೊಟ್ಟರು. 159ಕ್ಕೆ 3 ವಿಕೆಟ್​ ಕಳೆದುಕೊಂಡಿದ್ದ ಭಾರತ 174ಕ್ಕೆ 7 ವಿಕೆಟ್​ ನಷ್ಟ ಅನುಭವಿಸಿ ಸಂಕಷ್ಟಕ್ಕೊಳಗಾಯಿತು. 14 ರನ್‌ಗಳ​ ಅಂತರದಲ್ಲಿ ತಂಡ 4 ವಿಕೆಟ್​ ಕಳೆದುಕೊಂಡಿತು.

ದೀಪ್ತಿ-ಪೂಜಾ ಆಸರೆ: ಒಮ್ಮೆಗೆ 4 ವಿಕೆಟ್​ ಕುಸಿತ ಅನುಭವಿಸಿದ ತಂಡಕ್ಕೆ ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಾಕರ್ ಆಸರೆಯಾದರು. ಕೊನೆಯ ಇನ್ನಿಂಗ್ಸ್​ನಲ್ಲಿ ಈ ಜೋಡಿ ಶತಕದ ಜೊತೆಯಾಟವಾಡಿದ್ದಲ್ಲದೇ ದಿನದಾಟದ ಅಂತ್ಯದವರೆಗೂ ಅಜೇಯವಾಗಿ ಮುಂದುವರೆದಿದ್ದಾರೆ. 147 ಎಸೆತ​ ಎದುರಿಸಿರುವ ದೀಪ್ತಿ ಶರ್ಮಾ 9 ಬೌಂಡರಿಯಿಂದ 70 ಮತ್ತು 115 ಎಸೆತ​ ಆಡಿರುವ ಪೂಜಾ ವಸ್ತ್ರಾಕರ್ 4 ಬೌಂಡರಿಗಳ ಸಹಾಯದಿಂದ 33 ರನ್​ ಗಳಿಸಿ ಆಜೇಯವಾಗುಳಿದರು.

ಆಸೀಸ್​ ಬೌಲಿಂಗ್​ ಅಸ್ತ್ರ: ಭಾರತದ ಬ್ಯಾಟಿಂಗ್​ ವಿರುದ್ಧ ಆಸ್ಟ್ರೇಲಿಯಾ ನಾಯಕಿ ಅಲಿಸ್ಸಾ ಹೀಲಿ ಎಂಟು ಜನ ಬೌಲರ್​ಗಳನ್ನು ಕಣಕ್ಕಿಳಿಸಿದರು. ಅದರಲ್ಲಿ ಯಶಸ್ಸು ಸಾಧಿಸಿದ್ದು ಆಶ್ಲೀ ಗಾರ್ಡ್ನರ್ ಮಾತ್ರ. 41 ಓವರ್​ ಮಾಡಿರುವ ಆಶ್ಲೀ 100 ರನ್​ ಕೊಟ್ಟು 4 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರನ್ನು ಬಿಟ್ಟರೆ, ಜೆಸ್ ಜೊನಾಸೆನ್ ಮತ್ತು ಕಿಮ್ ಗಾರ್ತ್ ತಲಾ ಒಂದೊಂದು ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ: 'ಸಂಜು ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ, ಆದರೆ ದುರಾದೃಷ್ಟವಶಾತ್..': ಕೆ.ಎಲ್‌.ರಾಹುಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.