ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ಮುಂಬೈನ ವಾಖೆಂಡೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್, ಕನ್ನಡಿಗ ಮಯಾಂಕ್ ಅಗರವಾಲ್ ಜವಾಬ್ದಾರಿಯುತ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ನಾಲ್ಕನೇ ಶತಕ ಬಾರಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಮೈದಾನಕ್ಕಿಳಿದ ಮಯಾಂಕ್ ಹಾಗೂ ಶುಬ್ಮನ್ ತಂಡಕ್ಕೆ 80ರನ್ಗಳ ಉತ್ತಮ ಅಡಿಪಾಯ ಹಾಕಿದರು.
ಆದರೆ, 44 ರನ್ಗಳಿಕೆ ಮಾಡಿದ್ದ ವೇಳೆ ಗಿಲ್ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಪೂಜಾರಾ ಹಾಗೂ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ತಂಡವನ್ನ ಸಂಕಷ್ಟಕ್ಕೆ ದೂಡಿದರು. ಈ ವೇಳೆ ಶ್ರೇಯಸ್ ಅಯ್ಯರ್ ಹಾಗೂ ವೃದ್ಧಿಮಾನ್ ಸಾಹಾ ಜೊತೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಯಾಂಕ್ ಶತಕ ಸಿಡಿಸಿ ಮಿಂಚಿದರು.
ಮಯಾಂಕ್ ಎದುರಿಸಿದ 196 ಎಸೆತಗಳಲ್ಲಿ 3 ಸಿಕ್ಸರ್, 13 ಬೌಂಡರಿ ಸೇರಿದಂತೆ 100 ರನ್ಗಳಿಕೆ ಮಾಡಿ ತಂಡಕ್ಕೆ ಜವಾಬ್ದಾರಿಯುತ ರನ್ ಕಾಣಿಕೆ ನೀಡಿದರು. ಕಳೆದ ಅನೇಕ ಟೆಸ್ಟ್ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಕನ್ನಡಿಗ ಇದೀಗ ಭರ್ಜರಿ ಶತಕ ಸಿಡಿಸಿ, ತಮ್ಮ ಬ್ಯಾಟಿಂಗ್ ಕೌಶಲ್ಯ ಹೊರಹಾಕಿದ್ದಾರೆ.
-
That moment when @mayankcricket got to his 4th Test Century 👏👏
— BCCI (@BCCI) December 3, 2021 " class="align-text-top noRightClick twitterSection" data="
Live - https://t.co/KYV5Z1jAEM #INDvNZ @Paytm pic.twitter.com/GFXapG6GQo
">That moment when @mayankcricket got to his 4th Test Century 👏👏
— BCCI (@BCCI) December 3, 2021
Live - https://t.co/KYV5Z1jAEM #INDvNZ @Paytm pic.twitter.com/GFXapG6GQoThat moment when @mayankcricket got to his 4th Test Century 👏👏
— BCCI (@BCCI) December 3, 2021
Live - https://t.co/KYV5Z1jAEM #INDvNZ @Paytm pic.twitter.com/GFXapG6GQo
ಎರಡು ವರ್ಷಗಳ ನಂತರ ಶತಕ ಸಿಡಿಸಿದ ಕನ್ನಡಿಗ
ಈ ಹಿಂದೆ 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ಮಯಾಂಕ್ ಅಗರವಾಲ್ ತದನಂತರ ಶತಕ ವಂಚಿತರಾಗಿದ್ದರು. ಆದರೆ, ಇದೀಗ ಮುಂಬೈ ಮೈದಾನದಲ್ಲಿ ತಮ್ಮ ಶತಕದ ಬರ ತೀರಿಸಿಕೊಂಡಿದ್ದಾರೆ. ಇದೇ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ಮಯಾಂಕ್ ಮಿಂಚಿದ್ದರು.