ETV Bharat / sports

ಭಾರತದ ಟಿ-20 ವಿಶ್ವಕಪ್ ತಂಡದಲ್ಲಿ ಒಬ್ಬ ವೇಗಿಯ ಕೊರತೆಯಿದೆ: ಎಂಎಸ್​ಕೆ ಪ್ರಸಾದ್​ - ಹಾರ್ದಿಕ್ ಪಾಂಡ್ಯ ಬೌಲಿಂಗ್

ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಸೆಪ್ಟೆಂಬರ್​ 24ರಂದು ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.

MSK Prasad
ಎಂಎಸ್​ಕೆ ಪ್ರಸಾದ್​
author img

By

Published : Oct 6, 2021, 10:23 PM IST

ಮುಂಬೈ: ವಿಶ್ವಕಪ್​ಗೆ ಘೋಷಿಸಿರುವ ಭಾರತ ತಂಡದಲ್ಲಿ ಒಬ್ಬ ವೇಗಿಯ ಕೊರೆತೆ ಕಾಣುತ್ತಿದೆ ಎಂದು ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್​ ಅಭಿಪ್ರಾಯಪಟ್ಟಿದ್ದಾರೆ. ಹಾರ್ದಿಕ್ ಬೌಲಿಂಗ್​ ಮಾಡದಿರುವುದರ ಬಗ್ಗೆಯೂ ಸ್ವಲ್ಪ ಕಳವಳ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಮುಗಿಯುತ್ತಿದ್ದಂತೆ ಯುಎಇ ಮತ್ತು ಓಮನ್​ನಲ್ಲಿ ಟಿ-20 ವಿಶ್ವಕಪ್​ ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಮೊದಲು ಅರ್ಹತಾ ಪಂದ್ಯಗಳು ಓಮನ್​ನಲ್ಲಿ ನಡೆಯಲಿವೆ. ಶಾರ್ಜಾ ಸ್ಪಿನ್ನರ್​ಗೆ ನೆರವಾದರೆ, ಅಬುಧಾಬಿ ಮತ್ತು ದುಬೈ ವೇಗಿಗಳಿಗೆ ನೆರವಾಗುತ್ತದೆ. ಈ ಕಾರಣದಿಂದ ಪ್ರಸ್ತುತ ಭಾರತ ತಂಡ ಒಬ್ಬ ವೇಗಿಯ ಕೊರತೆಯನ್ನು ಹೊಂದಿದೆ ಎಂದು ಪ್ರಸಾದ್​ ಹೇಳಿದ್ದಾರೆ.

ಇದೊಂದು ಯೋಗ್ಯವಾದ ತಂಡವಾಗಿದೆ, ಆದರೆ ತಂಡದಲ್ಲಿ ಒಬ್ಬ ವೇಗದ ಬೌಲರ್​ನ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾನು ದುಬೈ ಮತ್ತು ಅಬುಧಾಬಿಯಲ್ಲಿ ಹೆಚ್ಚು ಪಂದ್ಯಗಳನ್ನು ಆಡುತ್ತೇವೆ. ಆದ್ದರಿಂದ ಇನ್ನೊಬ್ಬ ವೇಗದ ಬೌಲರ್​ ಇದ್ದರೆ ಸೂಕ್ತವಾಗಿರುತ್ತಿತ್ತು ಎಂದು ಪ್ರಸಾದ್​ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಪ್ರಸಾದ್​ ತಿಳಿಸಿದ್ದಾರೆ.

ಶಾರ್ಜಾದಲ್ಲಿ ಹೆಚ್ಚಿನ ಪಂದ್ಯಗಳನ್ನಾಡುವಂತಿದ್ದರೆ ಈ ತಂಡ ಸರಿಯಾಗಿರುತ್ತಿತ್ತು. ಆದರೆ, ತಂಡದಲ್ಲಿ ಒಬ್ಬ ವೇಗದ ಬೌಲರ್​ ಇರಬೇಕಿತ್ತು. ಪ್ರಮುಖವಾಗಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿಲ್ಲ. ಹಾಗಾಗಿ ಇದು ಕೂಡ ಇದು ಸ್ವಲ್ಪ ಕಾಳಜಿಯ ಕಾರಣ ಎಂದು ನಾನು ಭಾವಿಸುತ್ತೇನೆ ಎಂದು 46 ವರ್ಷದ ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಸೆಪ್ಟೆಂಬರ್​ 24ರಂದು ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.

ಇದನ್ನು ಓದಿ:EXCLUSIVE: ಶೆಫಾಲಿ ಅಂದ್ರೆ ಮಿಂಚು, ಅವರನ್ನು ಕಂಡ್ರೆ ಎದುರಾಳಿ ತಂಡಗಳಿಗಿದೆ ಭಾರಿ ಭಯ:ರಾಮನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.