ಮುಂಬೈ (ಮಹಾರಾಷ್ಟ್ರ): ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ಲಂಚ್ ಬ್ರೇಕ್ ವೇಳೆಗೆ 46 ಓವರ್ಗೆ ಭಾರತ 2 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿದೆ.
ಊಟದ ವಿರಾಮದ ವೇಳೆಗೆ ಮಯಾಂಕ್ ಅಗರ್ವಾಲ್ 62 ರನ್ ಹಾಗೂ ಚೇತೇಶ್ವರ ಪೂಜಾರ 47 ರನ್ ಗಳಿಸಿ ಔಟ್ ಆದರು. ಸದ್ಯ ವಿರಾಟ್ ಕೊಹ್ಲಿ (11) ಮತ್ತು ಶುಭಮನ್ ಗಿಲ್ (17) ಕ್ರೀಸಿನಲ್ಲಿದ್ದಾರೆ. ಟೀಂ ಇಂಡಿಯಾ ವಿರುದ್ಧ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದು ದಾಖಲೆ ಬರೆದಿದ್ದ ಅಜಾಜ್ ಪಟೇಲ್ ಇಂದು ಕೂಡಾ ಎರಡೂ ವಿಕೆಟ್ ಕಬಳಿಸಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 62 ರನ್‌ಗೆ ನ್ಯೂಜಿಲ್ಯಾಂಡ್ ತಂಡವನ್ನು ಆಲೌಟ್ ಮಾಡಿದ್ದ ಭಾರತ 263 ರನ್‌ಗಳ ಮುನ್ನಡೆ ಸಾಧಿಸಿತ್ತು. ಇದೀಗ ಎರಡನೇ ಇನ್ನಿಂಗ್ಸ್ ಸೇರಿ ಲಂಚ್ ಬ್ರೇಕ್ ವೇಳೆಗೆ ಒಟ್ಟು 405 ರನ್‌ಗಳ ಮೊತ್ತದಲ್ಲಿ ಮುಂಚೂಣಿಯಲ್ಲಿದೆ.