ಆಕ್ಲೆಂಡ್: ಮಹಿಳಾ ವಿಶ್ವಕಪ್ನಲ್ಲಿ ಇಂದು ಭಾರತ - ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿದ್ದು, ಸೆಮಿಫೈನಲ್ಗೆ ಹತ್ತಿರವಾಗಿರುವ ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಆಕ್ಲೆಂಡ್ನಲ್ಲಿ ನಡೆಯುತ್ತಿರುವ ಪಂದ್ಯ ಭಾರತ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಭಾರತ ತಂಡ ಕೆಲವು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದೆ. ಆಲ್ರೌಂಡರ್ ದೀಪ್ತಿ ಶರ್ಮಾ ಬದಲಿಗೆ ಸ್ಫೋಟಕ ಬ್ಯಾಟರ್ ಶೆಫಾಲಿ ವರ್ಮಾ ಅವರನ್ನು ಇಂದು ಕಣಕ್ಕಿಳಿಸಿದೆ.
ಇಂಗ್ಲೆಂಡ್ ವಿರುದ್ಧ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲಿಯೂ ಲಯ ಕಳೆದುಕೊಂಡು ಹೀನಾಯ ಸೋಲು ಕಂಡಿದೆ. ಈ ಪಂದ್ಯ ಭಾರತದ ಪಾಲಿಗೆ ಮಹತ್ವದ್ದಾಗಿದೆ, ಗೆದ್ದರೆ ನಾಕೌಟ್ ಪ್ರವೇಶ ಸುಲಭವಾಗಲಿದೆ. ಸೋಲುಕಂಡರೆ ಲೀಗ್ನಲ್ಲಿಯೇ ಹೊರ ಬೀಳುವ ಸಾಧ್ಯತೆಯಿದೆ.
-
🚨 Team News 🚨
— BCCI Women (@BCCIWomen) March 19, 2022 " class="align-text-top noRightClick twitterSection" data="
1⃣ change for #TeamIndia as Shafali Verma is named in the team. #CWC22 | #INDvAUS
Follow the match ▶️ https://t.co/SLZ4bayb4f
Here's our Playing XI 🔽 pic.twitter.com/FU269oE6ja
">🚨 Team News 🚨
— BCCI Women (@BCCIWomen) March 19, 2022
1⃣ change for #TeamIndia as Shafali Verma is named in the team. #CWC22 | #INDvAUS
Follow the match ▶️ https://t.co/SLZ4bayb4f
Here's our Playing XI 🔽 pic.twitter.com/FU269oE6ja🚨 Team News 🚨
— BCCI Women (@BCCIWomen) March 19, 2022
1⃣ change for #TeamIndia as Shafali Verma is named in the team. #CWC22 | #INDvAUS
Follow the match ▶️ https://t.co/SLZ4bayb4f
Here's our Playing XI 🔽 pic.twitter.com/FU269oE6ja
ಇತ್ತ ಆಸ್ಟ್ರೇಲಿಯಾ ತಂಡ ವಿಶ್ವಕಪ್ನಲ್ಲೂ ತನ್ನ ಪ್ರಾಬಲ್ಯ ಮುಂದುವರಿಸಿದ್ದು, ತಾನು ಆಡಿದ ನಾಲ್ಕು ಪಂದ್ಯಗಳಲ್ಲೂ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಬಳಗ ಹೊಂದಿರುವ ಆಸ್ಟ್ರೇಲಿಯಾ ತಂಡ ಈ ಪಂದ್ಯದಲ್ಲೂ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಭಾರತ ಮಹಿಳೆಯರು (ಪ್ಲೇಯಿಂಗ್ XI): ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಸ್ತಿಕಾ ಭಾಟಿಯಾ, ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ಸ್ನೇಹ ರಾಣಾ, ರಿಚಾ ಘೋಷ್ (ವಿಕೀ), ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಆಸ್ಟ್ರೇಲಿಯಾ ಮಹಿಳೆಯರು (ಪ್ಲೇಯಿಂಗ್ XI): ಅಲಿಸ್ಸಾ ಹೀಲಿ (ವಿಕೀ), ರಾಚೆಲ್ ಹೇನ್ಸ್, ಮೆಗ್ ಲ್ಯಾನಿಂಗ್ (ನಾಯಕಿ), ಎಲ್ಲಿಸ್ ಪೆರ್ರಿ, ಬೆತ್ ಮೂನಿ, ತಹಿಲಾ ಮೆಕ್‌ಗ್ರಾತ್, ಆಶ್ಲೇ ಗಾರ್ಡ್ನರ್, ಜೆಸ್ ಜೊನಾಸೆನ್, ಅಲಾನಾ ಕಿಂಗ್, ಮೇಗನ್ ಶೂಟ್, ಡಾರ್ಸಿ ಬ್ರೌನ್
ಇದನ್ನೂ ಓದಿ:ಪಾಕ್ನಲ್ಲಿ ರಾಜಕೀಯ ಕೋಲಾಹಲ: ಪಾಕ್-ಆಸೀಸ್ ಏಕದಿನ, ಟಿ20 ಸರಣಿ ಲಾಹೋರ್ಗೆ ಶಿಫ್ಟ್