ಶಾರ್ಜಾ: ಐಸಿಸಿ ಟಿ-20 ವಿಶ್ವಕಪ್ನಲ್ಲಿ ಶ್ರೀಲಂಕಾ-ಬಾಂಗ್ಲಾ ಮುಖಾಮುಖಿಯಾಗಿದ್ದ ಸಂದರ್ಭದಲ್ಲಿ ಉಭಯ ತಂಡದ ಆಟಗಾರರು ಮಾತಿನ ಚಕಮಕಿಯಲ್ಲಿ ಭಾಗಿಯಾಗಿದ್ದರು.
ಶಾರ್ಜಾ ಮೈದಾನದಲ್ಲಿ ನಡೆದಿದ್ದ ಸೂಪರ್-12 ಹಂತದ ಗ್ರೂಪ್ 1ರ ಪಂದ್ಯದ ವೇಳೆ ಲಂಕಾ ತಂಡದ ವೇಗಿ ಲಾಹಿರು ಹಾಗೂ ಬಾಂಗ್ಲಾದೇಶದ ಬ್ಯಾಟರ್ ಲಿಟನ್ ದಾಸ್ ಮಾತಿಕ ಚಕಮಕಿ ನಡೆಸಿದ್ದರು. ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇಬ್ಬರು ಆಟಗಾರರು ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ.
-
Exchange of words between Lahiru kumara & Litton das#SlvsBan pic.twitter.com/Wfy85BlveF
— CRICKET TWEETS (@RISHIKARTHEEK) October 24, 2021 " class="align-text-top noRightClick twitterSection" data="
">Exchange of words between Lahiru kumara & Litton das#SlvsBan pic.twitter.com/Wfy85BlveF
— CRICKET TWEETS (@RISHIKARTHEEK) October 24, 2021Exchange of words between Lahiru kumara & Litton das#SlvsBan pic.twitter.com/Wfy85BlveF
— CRICKET TWEETS (@RISHIKARTHEEK) October 24, 2021
ಶ್ರೀಲಂಕಾದ ಬೌಲರ್ ಲಾಹಿರುಗೆ ಪಂದ್ಯದ ಶೇ. 25ರಷ್ಟು ಹಾಗೂ ಲಿಟನ್ ದಾಸ್ಗೆ ಪಂದ್ಯದ ಶೇ. 15ರಷ್ಟು ದಂಡ ವಿಧಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡಿರುವ ಐಸಿಸಿ, ಘಟನೆ ವೇಳೆ ಲಾಹಿರು ತಪ್ಪಿತಸ್ಥನೆಂದು ಕಂಡು ಬಂದಿದೆ. ಆಟಗಾರರು ಐಸಿಸಿ ನೀತಿ ಸಂಹಿತೆ ಆರ್ಟಿಕಲ್ 2.5 ಉಲ್ಲಂಘನೆ ಮಾಡಿದ್ದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದೆ.
ಇದನ್ನೂ ಓದಿರಿ: 'Blank cheque' ಎಲ್ಲಿ?... ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಕಾಲೆಳೆದ ನೆಟ್ಟಿಗರು!
ಪಂದ್ಯದ ಐದನೇ ಓವರ್ನಲ್ಲಿ ಈ ಘಟನೆ ನಡೆದಿದ್ದು, ಲಾಹಿರು ಬೌಲಿಂಗ್ ಮಾಡ್ತಿದ್ದ ವೇಳೆ ಲಿಟನ್ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದರು. ಈ ವೇಳೆ ಚೆಂಡು ನೇರವಾಗಿ ದಸುನ್ ಕೈಗೆ ಸೇರಿತ್ತು. ಈ ವೇಳೆ ವಿಕೆಟ್ ಪಡೆದುಕೊಂಡ ಖುಷಿಯಲ್ಲಿ ಲಂಕಾ ಬೌಲರ್ ಲಿಟನ್ ಬಳಿ ತೆರಳಿ ಅವಾಚ್ಯ ಪದ ಬಳಕೆ ಮಾಡಿದ್ದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಮಧ್ಯೆ ಪ್ರವೇಶ ಮಾಡಿದ್ದ ಅಂಪೈರ್ ಹಾಗೂ ಸಹ ಆಟಗಾರರು ವಾತಾವರಣ ತಿಳಿಗೊಳಿಸಿದ್ದರು.