ಕೊಲಂಬೊ(ಶ್ರೀಲಂಕಾ): ಆತಿಥೇಯ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ 10 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡಿದೆ. ಈ ಮೂಲಕ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಕೊಲಂಬೊದ ಪ್ರೇಮದಾಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ಪಡೆ ಕಾಂಗರೂ ಬೌಲಿಂಗ್ ದಾಳಿಗೆ ತತ್ತರಿಸಿ, ಕೇವಲ 128ರನ್ಗಳಿಕೆ ಮಾಡಿತು.
ತಂಡದ ಪರ ನಿಶಾಕ್(36), ಗುಣತಿಲಕ್(26) ಹಾಗೂ ಅಸಲಂಕಾ(38)ರನ್ಗಳಿಕೆ ಮಾಡಿದ್ದು ತಂಡದ ಪರ ವೈಯಕ್ತಿಕ ಗರಿಷ್ಠ ಸ್ಕೋರ್ ಆಯಿತು. ಉಳಿದಂತೆ ಯಾವೊಬ್ಬ ಪ್ಲೇಯರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಆಸ್ಟ್ರೇಲಿಯಾ ತಂಡದ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಹ್ಯಾಜಲ್ವುಡ್ 4 ವಿಕೆಟ್ ಪಡೆದುಕೊಂಡರೆ, ಸ್ಟಾರ್ಕ್ ಮೂರು ಹಾಗೂ ರಿಚರ್ಡ್ಸನ್ 1 ವಿಕೆಟ್ ಕಿತ್ತರು.
129ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಯಾವುದೇ ವಿಕೆಟ್ ಪಡೆದುಕೊಳ್ಳದೇ 14 ಓವರ್ಗಳಲ್ಲಿ 134ರನ್ಗಳಿಕೆ ಮಾಡಿ, ಗೆಲುವಿನ ನಗೆ ಬೀರಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್(70*) ಹಾಗೂ ಕ್ಯಾಪ್ಟನ್ ಫಿಂಚ್(61*) ರನ್ಗಳಿಸಿ, ತಂಡವನ್ನ ಗೆಲುವಿನ ದಡ ಸೇರಿಸಿದರು. ಲಂಕಾ ಪರ ಯಾವುದೇ ಬೌಲರ್ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.
ಇದನ್ನೂ ಓದಿ: ಐಪಿಎಲ್‌ನಲ್ಲಿ ಭಾರತೀಯ ನಾಯಕರ ಯಶಸ್ಸು ರಾಷ್ಟ್ರೀಯ ತಂಡಕ್ಕೆ ಸಹಕಾರಿ: ರಾಹುಲ್ ದ್ರಾವಿಡ್
ಆಸ್ಟ್ರೇಲಿಯಾ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿ, 4 ವಿಕೆಟ್ ಪಡೆದುಕೊಂಡ ಹ್ಯಾಜಲ್ವುಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.