ETV Bharat / sports

ಟೀಮ್ ಇಂಡಿಯಾದ ಸಕ್ಸಸ್​ನಲ್ಲಿದೆ ಆತನ ಕೈಚಳಕ... ವಿರಾಟ್ ಪಡೆ 'ಫಿಟ್' ಆಗಿದ್ದು ಇವರಿಂದಲೇ..! - ವರ್ಕೌಟ್

ವಿರಾಟ್ ಪಡೆಗೆ ಫಿಟ್ನೆಸ್ ಟ್ರೈನರ್​​ ಶಂಕರ್ ಬಸು ಹಾಗೂ ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್ ಫರ್ಹಾಟ್ ಶಿಸ್ತು ರೂಪಿಸಿ ಮೈದಾನದಲ್ಲಿ ಉತ್ತಮ ಪ್ರದರ್ಶನಕ್ಕೆ ಕಾರಣರಾಗಿದ್ದಾರೆ. ಶಂಕರ್ ಬಸು ಆರ್​​ಸಿಬಿ ತಂಡಕ್ಕೂ ಟ್ರೈನರ್ ಆಗಿ ಕಾಣಿಸಿಕೊಂಡಿದ್ದಾರೆ.

ವಿರಾಟ್ ಪಡೆ
author img

By

Published : Jun 25, 2019, 1:41 PM IST

ಲಂಡನ್​: ವಿಶ್ವಕಪ್​ ಟೂರ್ನಿಯಲ್ಲಿ ಆಡಿರುವ ಎಲ್ಲ ಪಂದ್ಯಗಳನ್ನೂ ಗೆದ್ದಿರುವ ಟೀಮ್ ಇಂಡಿಯಾ ಸದ್ಯದ ಭರ್ಜರಿ ಸಕ್ಸಸ್ ಅಲೆಯಲ್ಲಿದೆ. ಈಗಾಗಲೇ ಸೆಮೀಸ್​​ನತ್ತ ದಾಪುಗಾಲಿಡುತ್ತಿರುವ ವಿರಾಟ್ ಬಳಗ ಈ ಟೂರ್ನಿಯ ಪರಿಪೂರ್ಣ ತಂಡ ಎಂದರೆ ತಪ್ಪಾಗಲಾರದು.

ಒಂದೂವರೆ ತಿಂಗಳ ಕಾಲ ನಡೆಯುವ ಟೂರ್ನಿ ಎಂದರೆ ಆಟಗಾರರ ಫಿಟ್ನೆಸ್ ಅತ್ಯಂತ ಮಹತ್ವದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಟೀಮ್ ಇಂಡಿಯಾದ ಆಟಗಾರರು ಶಿಸ್ತನ್ನು ಪಾಲಿಸುತ್ತಿದ್ದು,ನಿತ್ಯ ವರ್ಕೌಟ್ ಮಾಡುತ್ತಾ ಫಿಟ್ನೆಸ್​ಗಾಗಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ.

shankar-basu-
ಟೀಮ್ ಇಂಡಿಯಾ

ವಿರಾಟ್ ಪಡೆಗೆ ಫಿಟ್ನೆಸ್ ಟ್ರೈನರ್​​ ಶಂಕರ್ ಬಸು ಹಾಗೂ ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್ ಫರ್ಹಾಟ್ ಶಿಸ್ತು ರೂಪಿಸಿ ಮೈದಾನದಲ್ಲಿ ಉತ್ತಮ ಪ್ರದರ್ಶನಕ್ಕೆ ಕಾರಣರಾಗಿದ್ದಾರೆ. ಶಂಕರ್ ಬಸು ಆರ್​​ಸಿಬಿ ತಂಡಕ್ಕೂ ಟ್ರೈನರ್ ಆಗಿ ಕಾಣಿಸಿಕೊಂಡಿದ್ದಾರೆ.

"ನಾವು ಸರ್ಕಾಡಿಯನ್ ರಿದಮ್​ಗೆ ಹೆಚ್ಚಿನ ಆದ್ಯತೆ ನೀಡಿ ಅದರ ಕುರಿತಂತೆ ಹೆಚ್ಚಿನ ಮಾಹಿತಿ ನೀಡುತ್ತೇವೆ. ಸರ್ಕಾಡಿಯನ್ ರಿದಮ್ ಎನ್ನುವುದು 24 ಗಂಟೆಗಳ ಅವಧಿಯ ಬಯೋಲಾಜಿಕಲ್​ ಸೈಕಲ್ ಆಗಿದ್ದು, ಇದರ ಅನ್ವಯ ನಮ್ಮ ದೇಹ ಯಾವಾಗ ನಿದ್ದೆ ಮಾಡಬೇಕು, ಎದ್ದೇಳಬೇಕು, ಆಹಾರ ಸೇವನೆಯ ಬಗ್ಗೆ ಮಾಹಿತಿ ನೀಡುತ್ತದೆ."

shankar-basu
ಟ್ರೈನರ್ ಶಂಕರ್ ಬಸು

"ಡಯಟ್ ವಿಚಾರದಲ್ಲಿ ಡೆಕ್ಸಾಸ್ಕ್ಯಾನ್​​​ ವಿಧಾನವನ್ನು ಅನುಸರಿಸಿದ್ದು, ಈ ಮೂಲಕ ಮೂಳೆಯಲ್ಲಿರುವ ಖನಿಜ ಸಾಂದ್ರತೆಯನ್ನು ತಿಳಿದುಕೊಳ್ಳಬಹುದು. ಇದು ಆರೋಗ್ಯಕರ ದೇಹವನ್ನು ತಿಳಿದುಕೊಳ್ಳುವ ಒಂದು ಮಾನದಂಡವಾಗಿದೆ."

'ಬಾಹ್ಯವಾಗಿ ನಾವೆಲ್ಲರೂ ವಿಭಿನ್ನವಾಗಿ ಕಾಣಿಸುತ್ತೇವೆ. ದೇಹದ ಒಳಭಾಗದ ಕ್ರಿಯೆಯಲ್ಲೂ ನಾವು ಅಷ್ಟೇ ಭಿನ್ನರಾಗಿದ್ದೇವೆ. ಓರ್ವ ವ್ಯಕ್ತಿಯ ಆಹಾರ ಇನ್ನೊಬ್ಬ ವ್ಯಕ್ತಿಗೆ ವಿಷವಾಗಿ ಪರಿಣಮಿಸುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರಿಗೂ ಒಂದೇ ತೆರನಾದ ಟ್ರೈನಿಂಗ್ ನೀಡಲು ಸಾಧ್ಯವಿಲ್ಲ."

shankar-basu-
ಟೀಮ್ ಇಂಡಿಯಾ

"ಆರೋಗ್ಯಕರ ತಂಡವನ್ನು ಕಟ್ಟುವುದು ಒಂದೇ ದಿನದಲ್ಲಿ ಸಾಧ್ಯವಿಲ್ಲ. ನಾವು ಇಂದು ಇರುವ ತಂಡವನ್ನು ಕಟ್ಟುವ ಕಾಯಕ 2015ರಲ್ಲಿ ಆರಂಭಿಸಿದ್ದೆವು. ಇಂದಿನ ಫಲಿತಾಂಶ ಕಳೆದ ಮೂರ್ನಾಲ್ಕು ವರ್ಷದ ಪರಿಶ್ರಮ" ಎನ್ನುತ್ತಾರೆ ಟ್ರೈನರ್ ಶಂಕರ್ ಬಸು.

ಫಿಟ್ನೆಸ್​ ವಿಚಾರದಲ್ಲಿ ಯಾವುದೇ ರಾಜಿಗೆ ಒಪ್ಪದ ಶಂಕರ್ ಬಸು, ಒಂದಷ್ಟು ದಿನ ದೇಹ ದಂಡಿಸಿ ನಂತರ ಬ್ರೇಕ್​ ತೆಗೆದುಕೊಳ್ಳುತ್ತೇನೆ ಎನ್ನುವ ಮಾತನ್ನು ಒಪ್ಪುದಿಲ್ಲ ಎನ್ನುತ್ತಾರೆ. ಇದೇ ನಿಟ್ಟಿನಲ್ಲಿ ಟೀಮ್ ಇಂಡಿಯಾದ ಆಟಗಾರರಿಗೆ ಮಾಡಬೇಕಾದ ಹಾಗೂ ಮಾಡಬಾರದ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

shankar-basu-
ಟೀಮ್ ಇಂಡಿಯಾ

ಟೀಮ್ ಇಂಡಿಯಾ ಆಟಗಾರರ ದಿನದ ಫಿಟ್ನೆಸ್​​ ಕುರಿತ ಚಟುವಟಿಕೆಯ ಲಿಸ್ಟ್ ಹೀಗಿದೆ..

  • ಕನಿಷ್ಠ ರಾತ್ರಿ 10:30ರ ವೇಳೆಗೆ ನಿದ್ದೆಗೆ ಜಾರಬೇಕು
  • ಕನಿಷ್ಠ ಮೂರು ಗ್ರಾಂನ ಮೀನಿನ ಅಂಶವಿರುವ ಮಾತ್ರೆ ಸೇವಿಸಬೇಕು
  • ನಿತ್ಯ ಒಂದು ಮಲ್ಟಿ ವಿಟಾಮಿನ್ ಸೇವಿಸಬೇಕು
  • ನಿತ್ಯ ಕನಿಷ್ಠ ಎರಡು ಹಣ್ಣನ್ನು ತಿನ್ನಬೇಕು
  • ನಿತ್ಯ ಒಂದು ಮುಷ್ಟಿ ಒಣ ಹಣ್ಣು/ಬೀಜ ತಿನ್ನಬೇಕು
  • ಆರೋಗ್ಯಕರ ಆಹಾರವನ್ನು ಪ್ರತಿ ಮೂರು ಗಂಟೆಗೊಮ್ಮೆ ತಿನ್ನಲೇಬೇಕು
  • ಸಂಸ್ಕರಿಸಿದ ಯಾವುದೇ ಆಹಾರವನ್ನು ಸೇವಿಸುವಂತಿಲ್ಲ
  • ಅತಿಯಾಗಿ ಕರಿದ ಆಹಾರ ತೆಗೆದುಕೊಳ್ಳುವಂತಿಲ್ಲ
  • ಸಕ್ಕರೆ ಅಂಶದ ಆಹಾರವನ್ನು ಸ್ನ್ಯಾಕ್ಸ್ ರೂಪದಲ್ಲಿ ಸೇವಿಸುವಂತಿಲ್ಲ
  • ಮೂರು ಗಂಟೆಗೊಮ್ಮೆ ಕಡ್ಡಾಯವಾಗಿ ಆಹಾರ ತೆಗೆದುಕೊಳ್ಳಬೇಕು
  • ಪ್ರತಿದಿನ ಮೂರು ಕಪ್​ನಷ್ಟು ಸಸ್ಯಾಹಾರ ಸೇವಿಸಬೇಕು
  • ಊಟದಲ್ಲಿ ಪ್ರೊಟೀನ್ ಅಂಶ ಇರಲೇಬೇಕು
  • ಸಂಜೆ ಆರರ ನಂತರ ಧಾನ್ಯಗಳ ಸೇವನೆ ಮಾಡಬಾರದು
  • ನಿತ್ಯ ಅರ್ಧಗಂಟೆ ವ್ಯಾಯಾಮ ಮಾಡಬೇಕು
  • ಯೋಗ/ಧ್ಯಾನ/ವಾಕಿಂಗ್/ಸಂಗೀತಗಳ ಮೂಲಕ ದೇಹಕ್ಕೆ ವಿಶ್ರಾಂತಿ ನೀಡಬೇಕು
  • ದಿನದಲ್ಲಿ ಹತ್ತು ಗಂಟೆಗಿಂತ ಅಧಿಕ ಹಾಗೂ ಏಳು ಗಂಟೆಗಿಂಗ ಕಡಿಮೆ ನಿದ್ದೆ ಮಾಡಬಾರದು

Intro:Body:

ಟೀಮ್ ಇಂಡಿಯಾದ ಸಕ್ಸಸ್​ನಲ್ಲಿದೆ ಶಂಕರ್ ಬಸು ಕೈಚಳಕ... ವಿರಾಟ್ ಪಡೆ 'ಫಿಟ್' ಆಗಿದ್ದು ಇವರಿಂದಲೇ..!

ಲಂಡನ್​: ವಿಶ್ವಕಪ್​ ಟೂರ್ನಿಯಲ್ಲಿ ಆಡಿರುವ ಎಲ್ಲ ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಸದ್ಯದ ಭರ್ಜರಿ ಸಕ್ಸಸ್ ಅಲೆಯಲ್ಲಿದೆ. ಈಗಾಗಲೇ ಸೆಮೀಸ್​​ನತ್ತ ದಾಪುಗಾಲಿಡುತ್ತಿರುವ ವಿರಾಟ್ ಬಳಗ ಈ ಟೂರ್ನಿಯ ಪರಿಪೂರ್ಣ ತಂಡ ಎಂದರೆ ತಪ್ಪಾಗಲಾರದು.

ಒಂದೂವರೆ ತಿಂಗಳ ಕಾಲ ನಡೆಯುವ ಟೂರ್ನಿ ಎಂದರೆ ಆಟಗಾರರ ಫಿಟ್ನೆಸ್ ಅತ್ಯಂತ ಮಹತ್ವದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಟೀಮ್ ಇಂಡಿಯಾದ ಆಟಗಾರರು ಶಿಸ್ತನ್ನು ಪಾಲಿಸುತ್ತಿದ್ದು ಪ್ರತಿನಿತ್ಯ ವರ್ಕೌಟ್ ಮಾಡುತ್ತಾ ಫಿಟ್ನೆಸ್​ಗಾಗಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ.

ವಿರಾಟ್ ಪಡೆಗೆ ಫಿಟ್ನೆಸ್ ಟ್ರೈನರ್​​ ಶಂಕರ್ ಬಸು ಹಾಗೂ ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್ ಫರ್ಹಾಟ್ ಶಿಸ್ತನ್ನು ರೂಪಿಸಿ ಮೈದಾನದಲ್ಲಿ ಉತ್ತಮ ಪ್ರದರ್ಶನಕ್ಕೆ ಕಾರಣರಾಗಿದ್ದಾರೆ. ಶಂಕರ್ ಬಸು ಆರ್​​ಸಿಬಿ ತಂಡಕ್ಕೂ ಟ್ರೈನರ್ ಆಗಿ ಕಾಣಿಸಿಕೊಂಡಿದ್ದಾರೆ.

"ನಾವು ಸರ್ಕಾಡಿಯನ್ ರಿದಮ್​ಗೆ ಹೆಚ್ಚಿನ ಆದ್ಯತೆ ನೀಡಿ ಅದರ ಕುರಿತಂತೆ ಹೆಚ್ಚಿನ ಮಾಹಿತಿ ನೀಡುತ್ತೇವೆ. ಸರ್ಕಾಡಿಯನ್ ರಿದಮ್ ಎನ್ನುವುದು 24 ಗಂಟೆಗಳ ಅವಧಿಯ ಬಯೋಲಾಜಿಕಲ್​ ಸೈಕಲ್ ಆಗಿದ್ದು, ಇದರ ಅನ್ವಯ ನಮ್ಮ ದೇಹ ಯಾವಾಗ ನಿದ್ದೆ ಮಾಡಬೇಕು, ಎದ್ದೇಳಬೇಕು, ಆಹಾರ ಸೇವನೆಯ ಬಗ್ಗೆ ಮಾಹಿತಿ ನೀಡುತ್ತದೆ."  

"ಡಯಟ್ ವಿಚಾರದಲ್ಲಿ ಡೆಕ್ಸಾಸ್ಕ್ಯಾನ್​​​ ವಿಧಾನವನ್ನು ಅನುಸರಿಸಿದ್ದು, ಈ ಮೂಲಕ ಮೂಳೆಯಲ್ಲಿರುವ ಖನಿಜ ಸಾಂದ್ರತೆಯನ್ನು ತಿಳಿದುಕೊಳ್ಳಬಹುದು. ಇದು ಆರೋಗ್ಯಕರ ದೇಹವನ್ನು ತಿಳಿದುಕೊಳ್ಳುವ ಒಂದು ಮಾನದಂಡವಾಗಿದೆ."

'ಬಾಹ್ಯವಾಗಿ ನಾವೆಲ್ಲರೂ ವಿಭಿನ್ನವಾಗಿ ಕಾಣಿಸುತ್ತೇವೆ. ದೇಹದ ಒಳಭಾಗದ ಕ್ರಿಯೆಯಲ್ಲೂ ನಾವು ಅಷ್ಟೇ ಭಿನ್ನರಾಗಿದ್ದೇವೆ. ಓರ್ವ ವ್ಯಕ್ತಿಯ ಆಹಾರ ಇನ್ನೊಬ್ಬ ವ್ಯಕ್ತಿಗೆ ವಿಷವಾಗಿ ಪರಿಣಮಿಸುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರಿಗೂ ಒಂದೇ ತೆರನಾದ ಟ್ರೈನಿಂಗ್ ನೀಡಲು ಸಾಧ್ಯವಿಲ್ಲ."

"ಆರೋಗ್ಯಕರ ತಂಡವನ್ನು ಕಟ್ಟುವುದು ಒಂದೇ ದಿನದಲ್ಲಿ ಸಾಧ್ಯವಿಲ್ಲ. ನಾವು ಇಂದು ಇರುವ ತಂಡವನ್ನು ಕಟ್ಟುವ ಕಾಯಕ 2015ರಲ್ಲಿ ಆರಂಭಿಸಿದ್ದೆವು. ಇಂದಿನ ಫಲಿತಾಂಶ ಕಳೆದ ಮೂರ್ನಾಲ್ಕು ವರ್ಷದ ಪರಿಶ್ರಮ" ಎನ್ನುತ್ತಾರೆ ಟ್ರೈನರ್ ಶಂಕರ್ ಬಸು.

ಫಿಟ್ನೆಸ್​ ವಿಚಾರದಲ್ಲಿ ಯಾವುದೇ ರಾಜಿಗೆ ಒಪ್ಪದ ಶಂಕರ್ ಬಸು, ಒಂದಷ್ಟು ದಿನ ದೇಹ ದಂಡಿಸಿ ನಂತರ ಬ್ರೇಕ್​ ತೆಗೆದುಕೊಳ್ಳುತ್ತೇನೆ ಎನ್ನುವ ಮಾತನ್ನು ಒಪ್ಪುದಿಲ್ಲ ಎನ್ನುತ್ತಾರೆ. ಇದೇ ನಿಟ್ಟಿನಲ್ಲಿ ಟೀಮ್ ಇಂಡಿಯಾದ ಆಟಗಾರರಿಗೆ ಮಾಡಬೇಕಾದ ಹಾಗೂ ಮಾಡಬಾರದ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಟೀಮ್ ಇಂಡಿಯಾ ಆಟಗಾರರ ದಿನದ ಫಿಟ್ನೆಸ್​​ ಕುರಿತ ಚಟುವಟಿಕೆಯ ಲಿಸ್ಟ್ ಹೀಗಿದೆ..

ಕನಿಷ್ಠ 10,.30ರ ವೇಳೆಗೆ ನಿದ್ದೆಗೆ ಜಾರಬೇಕು

ಕನಿಷ್ಠ ಮೂರು ಗ್ರಾಂನ ಮೀನಿನ ಅಂಶವಿರುವ ಮಾತ್ರೆ ಸೇವಿಸಬೇಕು

ಪ್ರತಿದಿನ ಒಂದು ಮಲ್ಟಿ ವಿಟಾಮಿನ್ ಸೇವಿಸಬೇಕು

ಪ್ರತಿನಿತ್ಯ ಕನಿಷ್ಠ ಎರಡು ಹಣ್ಣನ್ನು ಸೇವಿಸಬೇಕು

ಪ್ರತಿದಿನ ಒಂದು ಮುಷ್ಟಿ ಒಣ ಹಣ್ಣು/ಬೀಜ ತಿನ್ನಬೇಕು

ಆರೋಗ್ಯಕರ ಆಹಾರವನ್ನು ಪ್ರತಿ ಮೂರು ಗಂಟೆಗೆ ಸೇವಿಸಬೇಕು

ಸಂಸ್ಕರಿಸಿದ ಯಾವುದೇ ಆಹಾರವನ್ನು ಸೇವಿಸುವಂತಿಲ್ಲ

ಅತಿಯಾಗಿ ಕರಿದ ಆಹಾರ ತೆಗೆದುಕೊಳ್ಳುವಂತಿಲ್ಲ

ಸಕ್ಕರೆ ಅಂಶದ ಆಹಾರವನ್ನು ಸ್ನ್ಯಾಕ್ಸ್ ರೂಪದಲ್ಲಿ ಸೇವಿಸುವಂತಿಲ್ಲ

ಮೂರು ಗಂಟೆಗೊಮ್ಮೆ ಕಡ್ಡಾಯವಾಗಿ ಆಹಾರ ತೆಗೆದುಕೊಳ್ಳಬೇಕು

ಪ್ರತಿದಿನ ಮೂರು ಕಪ್​ನಷ್ಟು ಸಸ್ಯಾಹಾರವನ್ನು ಸೇವಿಸಬೇಕು

ಊಟದಲ್ಲಿ ಪ್ರೊಟೀನ್ ಅಂಶ ಇರಲೇಬೇಕು

ಸಂಜೆ ಆರರ ನಂತರ ಧಾನ್ಯಗಳ ಸೇವನೆ ಮಾಡಬಾರದು

ಪ್ರತಿದಿನ ಅರ್ಧಗಂಟೆ ವ್ಯಾಯಾಮ ಮಾಡಬೇಕು

ಯೋಗ/ಧ್ಯಾನ/ವಾಕಿಂಗ್/ಸಂಗೀತಗಳ ಮೂಲಕ ದೇಹಕ್ಕೆ ವಿಶ್ರಾಂತಿ ನೀಡಬೇಕು

ದಿನದಲ್ಲಿ ಹತ್ತು ಗಂಟೆಗಿಂತ ಅಧಿಕ ಹಾಗೂ ಏಳು ಗಂಟೆಗಿಂಗ ಕಡಿಮೆ ನಿದ್ದೆ ಮಾಡಬಾರದು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.