ಮುಂಬೈ: ನ್ಯೂಜಿಲ್ಯಾಂಡ್ ವಿರುದ್ಧ ಬುಮ್ರಾ ವಿಕೆಟ್ ಪಡೆಯದಿರುವುದಕ್ಕೆ ಅವರ ಬೌಲಿಂಗ್ ಕಾರಣವಲ್ಲ, ಬದಲಾಗಿ ಅವರ ಮೇಲಿರುವ ಎದುರಾಳಿ ಬ್ಯಾಟ್ಸ್ಮನ್ಗಳಿಗಿರುವ ಭಯವೇ ಕಾರಣ ಎಂದು ಟೀಮ್ ಇಂಡಿಯಾ ಮಾಜಿ ಬೌಲರ್ ಜಹೀರ್ ಖಾನ್ ತಿಳಿಸಿದ್ದಾರೆ.
![Jusprit Bumrah](https://etvbharatimages.akamaized.net/etvbharat/prod-images/eof5roswoay5hha_1302newsroom_1581598767_497.jpg)
ಕಳೆದ ಎರಡು ವರ್ಷಗಳಿಂದ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಬುಮ್ರಾ ತಮ್ಮ ಬೌಲಿಂಗ್ ಮೂಲಕ ಅಪಾಯಕಾರಿ ಎಂದೆನಿಸಿಕೊಂಡಿದ್ದಾರೆ. ಆದರೀಗ ಅದನ್ನು ಉಳಿಸಿಕೊಳ್ಳಲು ಅವರು ಫೈಟ್ ಮಾಡಬೇಕಿದೆ. ಕೆಲವು ಆಟಗಾರರು ಬುಮ್ರಾ ಎದುರು 10 ಓವರ್‌ಗಳಲ್ಲಿ 35 ರನ್ ಗಳಿಸಿದರೆ ಸಾಕು, ವಿಕೆಟ್ ಮಾತ್ರ ನೀಡದೆ, ಉಳಿದ ಬೌಲರ್ಗಳನ್ನು ಟಾರ್ಗೆಟ್ ಮಾಡಿ ಸುಲಭವಾಗಿ ರನ್ಗಳಿಸುವ ತಂತ್ರಕ್ಕೆ ಮುಂದಾಗಿದ್ದಾರೆ.
ಈ ಮಾರ್ಗವನ್ನು ನ್ಯೂಜಿಲ್ಯಾಂಡ್ ತಂಡದ ಬ್ಯಾಟ್ಸ್ಮನ್ಗಳು ಅನುಸರಿಸಿದರು. ಆದ್ದರಿಂದ 30 ಓವರ್‌ಗಳಲ್ಲಿ 167 ರನ್ ಬಿಟ್ಟುಕೊಟ್ಟು ವಿಕೆಟ್ರಹಿತವಾಗಿ ಸರಣಿ ಮುಗಿಸಿಬೇಕಾಯಿತು.
ಬುಮ್ರಾ ಎದರಾಳಿಗಳ ಈ ಯೋಜನೆಯನ್ನು ಅರಿತುಕೊಳ್ಳಬೇಕು. ಮತ್ತೆ ತಮ್ಮ ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರಿ ವಿಕೆಟ್ ಪಡೆಯಲು ಪ್ರಯತ್ನಿಸಬೇಕು. ತಮ್ಮ ಹಳೆಯ ತಂತ್ರಗಳನ್ನು ಕೈಬಿಟ್ಟು ಹೊಸ ತಂತ್ರಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಬ್ಯಾಟ್ಸ್ಮನ್ಗಳು ತಪ್ಪೆಸಗಿ ವಿಕೆಟ್ ಕೈಚೆಲ್ಲುತ್ತಾರೆ ಎಂದು ಜಹೀರ್ ಬುಮ್ರಾಗೆ ಸಲಹೆ ನೀಡಿದ್ದಾರೆ.