ETV Bharat / sports

ಸಚಿನ್, ಯುವಿ ಅಬ್ಬರ: ದ.ಅಫ್ರಿಕಾ ಲೆಜೆಂಡ್ ವಿರುದ್ಧ ಭಾರತ ಲೆಜೆಂಡ್​ಗೆ 56 ರನ್​ಗಳ ಜಯ - ಸಚಿನ್ ತೆಂಡೂಲ್ಕರ್

ಯುಸುಫ್ ಪಠಾಣ್ 10 ಎಸೆತಗಳಲ್ಲಿ ತಲಾ 2 ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ 23 ರನ್​ಗಳಿಸಿದರೆ, ಯುವರಾಜ್ ಸಿಂಗ್​ 22 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್ ಸಹಿತ ಅಜೇಯ 52 ರನ್​ಗಳಿಸಿದರು. ಇದರಲ್ಲಿ ಒಂದೇ ಓವರ್​ನಲ್ಲಿ ಸತತ 4 ಸಿಕ್ಸರ್​ ಕೂಡ ಸೇರಿತ್ತು. ಗೋನಿ 16 ರನ್​ಗಳಿಸಿ ಅಜೇಯರಾಗಿ ಉಳಿದರು.

ದ.ಅಫ್ರಿಕಾ ಲೆಜೆಂಡ್ ವಿರುದ್ಧ ಭಾರತ ಲೆಜೆಂಡ್​ಗೆ 56 ರನ್​ಗಳ ಜಯ

author img

By

Published : Mar 13, 2021, 10:56 PM IST

ರಾಯ್ಪುರ್: ನಾಯಕ ಸಚಿನ್ ತೆಂಡೂಲ್ಕರ್​ ಮತ್ತು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್​ ಅವರ ಸ್ಪೋಟಕ ಅರ್ಧಶತಕದ ನೆರವಿನಿಂದ ಭಾರತ ಲೆಜೆಂಡ್​ ತಂಡ 56 ರನ್​ಗಳ ಅಂತರದಿಂದ ದಕ್ಷಿಣ ಆಫ್ರಿಕಾ ಲೆಜೆಂಡ್ ತಂಡವನ್ನು ಮಣಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಲೆಜೆಂಡ್​ ತಂಡ ಅರಂಭದಲ್ಲೇ ಸ್ಟೋಟಕ ಬ್ಯಾಟ್ಸ್​ಮನ್ ವಿರೇಂದ್ರ ಸೆಹ್ವಾಗ್​(6) ವಿಕೆಟ್​ ಬೇಗನೆ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್​ಗೆ ನಾಯಕ ಸಚಿನ್ (60) ಮತ್ತು ಬದ್ರಿನಾಥ್​(42) 95 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು.

ತೆಂಡೂಲ್ಕರ್​ 37 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 60 ರನ್​ಗಳಿಸಿ ಔಟಾದರೆ, ಬದ್ರಿನಾಥ್​34 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸೇರದಂತೆ 42 ರನ್​ಗಳಿಸಿ ಗಾಯದಿಂದ ನಿವೃತ್ತಿಯಾದರು.

ನಂತರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಯುಸುಫ್ ಪಠಾಣ್ 10 ಎಸೆತಗಳಲ್ಲಿ ತಲಾ 2 ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ 23 ರನ್​ಗಳಿಸಿದರೆ, ಯುವರಾಜ್ ಸಿಂಗ್​ 22 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್ ಸಹಿತ ಅಜೇಯ 52 ರನ್​ಗಳಿಸಿದರು. ಇದರಲ್ಲಿ ಒಂದೇ ಓವರ್​ನಲ್ಲಿ ಸತತ 4 ಸಿಕ್ಸರ್​ ಕೂಡ ಸೇರಿತ್ತು. ಗೋನಿ 16 ರನ್​ಗಳಿಸಿ ಅಜೇಯರಾಗಿ ಉಳಿದರು.

ಒಟ್ಟಾರೆ ಭಾರತ ತಂಡದ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 204 ರನ್​ಗಳ ಬೃಹತ್ ಮೊತ್ತ ಕಲೆಯಾಕಿತು.

205 ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 148 ರನ್​ಗಳಿಸಲಷ್ಟೇ ಶಕ್ತವಾಗಿ 56 ರನ್​ಗಳ ಸೋಲು ಕಂಡಿತು. ದಕ್ಷಿಣ ಆಫ್ರಿಕಾ ಪರ ಆ್ಯಂಡ್ರ್ಯೂ ಪುಟಿಕ್ 41 ಮತ್ತ ಮಾರ್ನ್ ವ್ಯಾನ್ ವಿಕ್ 35 ಎಸೆತಗಳಲ್ಲಿ 48 ರನ್​ಗಳಿಸಿದರು.

ಭಾರತದ ಪರ ಬೌಲಿಂಗ್​ನಲ್ಲಿ ಯೂಸುಫ್ ಪಠಾಣ್​ 34ಕ್ಕೆ3, ಯುವರಾಜ್ ಸಿಂಗ್ 18ಕ್ಕೆ 2, ವಿನಯ್ ಕುಮಾರ್​ 14ಕ್ಕೆ 1 ಮತ್ತು ಓಜಾ 28ಕ್ಕೆ1 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.