ETV Bharat / sports

ಉದ್ಘಾಟನಾ ಪಂದ್ಯ: ಸಿಎಸ್​ಕೆ ವರ, ಮುಂಬೈ ಇಂಡಿಯನ್ಸ್​ಗೆ ಶಾಪ! ಏಕೆ ಗೊತ್ತಾ? - ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆ -ಮುಂಬೈ

ಉದ್ಘಾಟನಾ ಪಂದ್ಯ ಮುಂಬೈಗೆ ಶಾಪವಾಗಿದೆ ಏಕೆಂದರೆ ನಾಲ್ಕುಬಾರಿ ಚಾಂಪಿಯನ್​ ಆಗಿರುವ ಮುಂಬೈ ಇಂಡಿಯನ್ಸ್​ ಈ ಹಿಂದೆ 6 ಬಾರಿ ಉದ್ಘಾಟನಾ ಪಂದ್ಯವನ್ನಾಡಿದೆ. ಇದರಲ್ಲಿ ಒಂದು ಬಾರಿ ಚಾಂಪಿಯನ್​ ಆಗಿದ್ದರೆ ಎರಡು ಕ್ವಾಲಿಫೈಯರ್​ ಹಂತದಕ್ಕೇರಿದೆ. 3 ಬಾರಿ ಲೀಗ್​ ಹಂತದಲ್ಲೇ ಹೊರಬಿದ್ದಿದೆ.

ಮುಂಬೈ ಇಂಡಿಯನ್ಸ್​ vs ಸಿಎಸ್​ಕೆ
ಮುಂಬೈ ಇಂಡಿಯನ್ಸ್​ vs ಸಿಎಸ್​ಕೆ
author img

By

Published : Sep 6, 2020, 7:33 PM IST

ದುಬೈ: ಬಹು ನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್​ ವೇಳಾಪಟ್ಟಿಯನ್ನು ಬಿಸಿಸಿಐ ಭಾನುವಾರ ಬಿಡುಗಡೆ ಮಾಡಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ರನ್ನರ್​ ಆಪ್​ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಸೆಣಸಾಡಲಿದೆ.

ಉದ್ಘಾಟನಾ ಪಂದ್ಯ ಮುಂಬೈಗೆ ಶಾಪವಾಗಿದೆ ಏಕೆಂದರೆ ನಾಲ್ಕು ಬಾರಿ ಚಾಂಪಿಯನ್​ ಆಗಿರುವ ಮುಂಬೈ ಇಂಡಿಯನ್ಸ್​ ಈ ಹಿಂದೆ 6 ಬಾರಿ ಉದ್ಘಾಟನಾ ಪಂದ್ಯವನ್ನಾಡಿದೆ. ಇದರಲ್ಲಿ ಒಂದು ಬಾರಿ ಚಾಂಪಿಯನ್​ ಆಗಿದ್ದರೆ ಎರಡು ಕ್ವಾಲಿಫೈಯರ್​ ಹಂತದಕ್ಕೇರಿದೆ. 3 ಬಾರಿ ಲೀಗ್​ ಹಂತದಲ್ಲೇ ಹೊರಬಿದ್ದಿದೆ.

6 ಬಾರಿ ಆರಂಭಿಕ ಪಂದ್ಯವನ್ನಾಡಿರುವ ಮುಂಬೈ ಇಂಡಿಯನ್ಸ್​ 2009ರಲ್ಲಿ 7ನೇ ಸ್ಥಾನ, 2012ರಲ್ಲಿ 3ನೇ ಸ್ಥಾನ, 2014ರಲ್ಲಿ 4ನೇ ಸ್ಥಾನ, 2016ರಲ್ಲಿ 5ನೇ ಸ್ಥಾನ, 2018ರಲ್ಲಿ 5ನೇ ಸ್ಥಾನಕ್ಕೆ ಸೀಮಿತವಾಗಿದೆ. 2015ರಲ್ಲಿ ಮುಂಬೈ ಇಂಡಿಯನ್ಸ್​ ಸಿಎಸ್​ಕೆ ತಂಡವನ್ನು ಮಣಿಸಿ 2ನೇ ಬಾರಿ ಐಪಿಎಲ್​ ಕಿರೀಟ ಧರಿಸಿತ್ತು.

ಆದರೆ ಉದ್ಘಾಟನಾ ಪಂದ್ಯ ಚೆನ್ನೈಗೆ ಬಹಳ ಅದೃಷ್ಟವಾಗಿದೆ. ಏಕೆಂದರೆ ಚೆನ್ನೈ 5 ಬಾರಿ ಮೊದಲ ಪಂದ್ಯವನ್ನಾಡಿರುವ ಲೀಗ್​ನಲ್ಲಿ 4 ಬಾರಿ ಫೈನಲ್​ ಪ್ರವೇಶಿಸಿದೆ. ಇದರಲ್ಲಿ ಎರಡು ಬಾರಿ ಚಾಂಪಿಯನ್​ ಆಗಿದ್ದರೆ, ಮತ್ತೆರಡು ಬಾರಿ ರನ್ನರ್​ ಅಪ್​ಗೆ ತೃಪ್ತಿಪಟ್ಟು ಕೊಂಡಿದೆ. 2009, 2011, 2012, 2018 ಮತ್ತು 2019ರಲ್ಲಿ ಸಿಎಸ್​ಕೆ ಮೊದಲ ಪಂದ್ಯವನ್ನಾಡಿದ್ದು, 2011 ಮತ್ತು 2018ರಲ್ಲಿ ಚಾಂಪಿಯನ್​, 2012 ಮತ್ತು 2019ರಲ್ಲಿ ರನ್ನರ್​ ಅಪ್​ ಹಾಗೂ 2009ರಲ್ಲಿ 3ನೇ ಸ್ಥಾನ ಪಡೆದಿದೆ.​

ಒಟ್ಟಿನಲ್ಲಿ ಮುಂಬೈ ಇಂಡಿಯನ್ಸ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ಆರಂಭಿಕ ಪಂದ್ಯಗಳನ್ನಾಡಿದ ಟೂರ್ನಿಯಲ್ಲಿ ಸಿಎಸ್​ಕೆ ಮೇಲುಗೈ ಸಾಧಿಸಿದೆ. ಆದರೆ ಬಲಿಷ್ಠ ಪಡೆಯನ್ನು ಹೊಂದಿರುವ ಮುಂಬೈ ತಂಡ ಈ ಬಾರಿ ಯಾವ ರೀತಿ ಪ್ರದರ್ಶನ ತೋರಲಿದೆ ಎಂದು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.