ನವದೆಹಲಿ: ಕೊರೊನಾ ಭೀತಿ ನಡುವೆಯೂ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಹಾಗೂ ಬ್ಯಾಟ್ಸ್ಮನ್ ಸುರೇಶ್ ರೈನಾ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಅಭ್ಯಾಸ ಶುರುಮಾಡಿದ್ದಾರೆ.
ರೈನಾ ಯುವ ವಿಕೆಟ್ ಕೀಪರ್ ಪಂತ್ ಜೊತೆ ಅಭ್ಯಾಸ ಮಾಡುತ್ತಿರುವ 8 ನಿಮಿಷದ ವಿಡಿಯೋವನ್ನು ತಮ್ಮಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
- " class="align-text-top noRightClick twitterSection" data="
">
'ಕಷ್ಟಪಟ್ಟು ಕೆಲಸ ಮಾಡಬೇಕು, ಎಂದಿಗೂ ಬಿಟ್ಟುಕೊಡಬಾರದು ಮತ್ತು ಅದಕ್ಕೆ ತಕ್ಕಂತ ಪ್ರತಿಫಲ ಪಡೆಯಬೇಕು' ಎಂದು ರೈನಾ ಬರೆದು ಕೊಂಡಿದ್ದಾರೆ.
ಈಗಾಗಲೇ ಭಾರತ ತಂಡದ ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಪೂಜಾರ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ. ಅವರ ಗುಂಪಿಗೆ ರೈನಾ ಮತ್ತು ಪಂತ್ ಕೂಡ ಸೇರಿಕೊಂಡಿದ್ದಾರೆ.
ರೈನಾ ಇಂಗ್ಲೆಂಡ್ ವಿರುದ್ಧ 2018ರಲ್ಲಿ ಕೊನೆಯ ಬಾರಿ ಭಾರತ ತಂಡದ ಪರ ಆಡಿದ್ದರು. ನಂತರ ಅವರ ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ. ಇನ್ನು ಪಂತ್ ತಂಡದಲ್ಲಿ ಅವಕಾಶ ಸಿಕ್ಕರೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿರುವ ಕಾರಣ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಸೀಮಿತ ಓವರ್ಗಳಲ್ಲಿ ಈಗಾಗಲೆ ವಿಕೆಟ್ ಕೀಪರ್ ಸ್ಥಾನಕ್ಕೆ ಬಡ್ತಿ ಪಡೆದುಕೊಂಡು ಯಶಸ್ವಿಯಾಗಿದ್ದಾರೆ.
ಈ ಇಬ್ಬರು ಎಡಗೈ ಆಟಗಾರರಿಗೆ ಮುಂಬರುವ ಐಪಿಎಲ್ ಟೂರ್ನಿ ಮಹತ್ವದ್ದಾಗಿದೆ. ಆದರೆ, ಐಪಿಎಲ್ ಕುರಿತು ಬಿಸಿಸಿಐ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಬಿಸಿಸಿಐ ಬಾಸ್ ಗಂಗೂಲಿ ಮಾತ್ರ ಐಪಿಎಲ್ ನಡೆಸಿಯೇ ತೀರುತ್ತೇನೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ.