ಸಿಡ್ನಿ: ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ತಂಡಗಳ ನಡುವೆ ಮೂರನೇ ಟೆಸ್ಟ್ ಪಂದ್ಯ ಆರಂಭಗೊಂಡಿದ್ದು, ಟಾಸ್ ಗೆದ್ದ ಕಾಂಗರೂ ಪಡೆ ಬ್ಯಾಟಿಂಗ್ ಆಯ್ದುಕೊಂಡಿದ್ದು, ಮೊದಲ ದಿನದ ಅಂತ್ಯಕ್ಕೆ ತಂಡ 3ವಿಕೆಟ್ನಷ್ಟಕ್ಕೆ 283ರನ್ಗಳಿಕೆ ಮಾಡಿದೆ. ಇದರ ಮಧ್ಯೆ ಅಪರೂಪದ ಘಟನೆವೊಂದು ನಡೆದಿದೆ.
-
Getting off the mark off your 39th ball? A sigh of relief for Steve Smith! #OhWhatAFeeling @toyota_aus | #AUSvNZ pic.twitter.com/U3t0oS6aTn
— cricket.com.au (@cricketcomau) January 3, 2020 " class="align-text-top noRightClick twitterSection" data="
">Getting off the mark off your 39th ball? A sigh of relief for Steve Smith! #OhWhatAFeeling @toyota_aus | #AUSvNZ pic.twitter.com/U3t0oS6aTn
— cricket.com.au (@cricketcomau) January 3, 2020Getting off the mark off your 39th ball? A sigh of relief for Steve Smith! #OhWhatAFeeling @toyota_aus | #AUSvNZ pic.twitter.com/U3t0oS6aTn
— cricket.com.au (@cricketcomau) January 3, 2020
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಡೇವಿಡ್ ವಾರ್ನರ್ ವಿಕೆಟ್ ಬೀಳುತ್ತಿದ್ದಂತೆ ಮೈದಾನಕ್ಕೆ ಬಂದ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ಟಿವ್ ಸ್ಮಿತ್ ಮೊದಲ ರನ್ಗಳಿಕೆ ಮಾಡಲು ಬರೋಬ್ಬರಿ 39 ಎಸೆತ ತೆಗೆದುಕೊಂಡಿರುವ ಘಟನೆ ನಡೆದಿದೆ.
ಬರೋಬ್ಬರಿ 6 ಓವರ್ ಎದುರಿಸಿದ್ರೂ ಸ್ಮಿತ್ ಯಾವುದೇ ರೀತಿಯ ರನ್ಗಳಿಕೆ ಮಾಡಿಲ್ಲ. ಕೊನೆಯದಾಗಿ ನೀಲ್ ವ್ಯಾಗ್ನರ್ ಓವರ್ನಲ್ಲಿ ಸಿಂಗಲ್ ರನ್ಗಳಿಕೆ ಮಾಡಿದ್ದಾರೆ. ಈ ವೇಳೆ ನ್ಯೂಜಿಲ್ಯಾಂಡ್ ತಂಡದ ಪ್ಲೇಯರ್ ವ್ಯಾಗ್ನರ್ ಅವರಿಗೆ ನಗುಮುಖದಿಂದಲೇ ಅಭಿನಂದನೆ ಸಲ್ಲಿಕೆ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.
ಇನ್ನು 63ರನ್ಗಳಿಕೆ ಮಾಡಿದ್ದ ವೇಳೆ ಸ್ಮಿತ್ ಗ್ರ್ಯಾಂಡ್ಹೋಮ್ ಓವರ್ನಲ್ಲಿ ವಿಕೆಟ್ ನೀಡಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇದೇ ಪಂದ್ಯದಲ್ಲಿ ಮಾರ್ನಸ್ ಲಾಬುಶೇನ್ ಅಜೇಯ 130ರನ್ಗಳಿಕೆ ಮಾಡಿ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.