ETV Bharat / sports

2021ರ ಐಪಿಎಲ್​ನಿಂದ ಹಿಂದೆ ಸರಿದ ಡೇಲ್​ ಸ್ಟೈನ್: ನಿವೃತ್ತಿ ಬಗ್ಗೆ ಸ್ಪಷ್ಟನೆ - ಆರ್​ಸಿಬಿ ಡೇಲ್​ ಸ್ಟೈನ್​

ಟೆಸ್ಟ್​ ಕ್ರಿಕೆಟ್ ತಂಡಕ್ಕೆ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ವೇಗಿ 439 ವಿಕೆಟ್​ ಪಡೆಯುವ ಮೂಲಕ ದೀರ್ಘ ಮಾದರಿಯ ಕ್ರಿಕೆಟ್​ನಲ್ಲಿ ಆಫ್ರಿಕನ್ನರ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್​ ಆಗಿದ್ದಾರೆ. ಅಲ್ಲದೆ ಐಸಿಸಿ ಘೋಷಿಸಿದ ದಶಕದ ಟೆಸ್ಟ್​ ತಂಡದಲ್ಲಿ ಅವಕಾಶ ಪಡೆದಿದ್ದರು.

South Africa pacer Dale Steyn pulls out of IPL 2021
ಡೇಲ್​ ಸ್ಟೈನ್
author img

By

Published : Jan 2, 2021, 5:03 PM IST

ಕೇಪ್ ಟೌನ್​: ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಆರ್​ಸಿಬಿ ಪರ ಆಡುವ ದಕ್ಷಿಣ ಆಫ್ರಿಕಾದ ವೇಗದ ಬೌಲರ್​ ಡೇಲ್ ಸ್ಟೈನ್, 14ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡದಿರಲು ನಿರ್ಧರಿಸುವುದಾಗಿ ಶನಿವಾರ ತಿಳಿಸಿದ್ದಾರೆ.

ಕೇವಲ 2021ರ ಐಪಿಎಲ್​ನಿಂದ ಮಾತ್ರ ಹೊರ ಹೋಗುತ್ತಿದ್ದೇನೆ. ಆದರೆ ಈ ನಿರ್ಧಾರವನ್ನು ಆರ್​ಸಿಬಿ ಅಥವಾ ಕ್ರಿಕೆಟ್ ತ್ಯಜಿಸುತ್ತಿದ್ದೇನೆ ಎಂದು ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಟ್ವೀಟ್​ ಮೂಲಕ ಸ್ಪಷ್ಟಪಡಿಸಿದ್ದಾರೆ.

ಡೇಲ್​ ಸ್ಟೈನ್
ಡೇಲ್​ ಸ್ಟೈನ್​

"ಈ ವರ್ಷದ ಐಪಿಎಲ್‌ನಲ್ಲಿ ನಾನು ಆರ್‌ಸಿಬಿ ತಂಡಕ್ಕೆ ಲಭ್ಯನಾಗುವುದಿಲ್ಲ ಎಂದು ಎಲ್ಲರಿಗೂ ತಿಳಿಸಲು ಇದೊಂದು ಚಿಕ್ಕ ಸಂದೇಶ. ಆದರೆ ನಾನು ಮತ್ತೊಂದು ತಂಡಕ್ಕಾಗಿ ಆಡುವ ಯೋಜನೆಯನ್ನು ಹೊಂದಿಲ್ಲ, ಆ ಟೂರ್ನಿ ನಡೆಯುವ ಸಂದರ್ಭದಲ್ಲಿ ವಿಶ್ರಾಂತಿ ಬಯಸಿದ್ದೇನೆ. ನನ್ನನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಆರ್‌ಸಿಬಿಗೆ ಧನ್ಯವಾದಗಳು. ಆದರೆ ನಾನು ನಿವೃತ್ತನಾಗಿಲ್ಲ" ಎಂದು ಅವರು ತಿಳಿಸಿದ್ದಾರೆ.

  • Cricket tweet 🏏

    Just a short message to let everyone know that I’ve made myself unavailable for RCB at this years IPL, I’m also not planning on playing for another team, just taking some time off during that period.

    Thank you to RCB for understanding.

    No I’m not retired. 🤙

    — Dale Steyn (@DaleSteyn62) January 2, 2021 " class="align-text-top noRightClick twitterSection" data=" ">

ಟೆಸ್ಟ್​ ಕ್ರಿಕೆಟ್ ತಂಡಕ್ಕೆ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ವೇಗಿ, 439 ವಿಕೆಟ್​ ಪಡೆಯುವ ಮೂಲಕ ದೀರ್ಘ ಮಾದರಿಯ ಕ್ರಿಕೆಟ್​ನಲ್ಲಿ ಆಫ್ರಿಕನ್ನರ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್​ ಆಗಿದ್ದಾರೆ. ಅಲ್ಲದೆ ಐಸಿಸಿ ಘೋಷಿಸಿದ ದಶಕದ ಟೆಸ್ಟ್​ ತಂಡದಲ್ಲಿ ಅವಕಾಶ ಪಡೆದಿದ್ದರು.

37 ವರ್ಷದ ಈ ವೇಗಿ ಐಪಿಎಲ್​ನಲ್ಲಿ 95 ಪಂದ್ಯಗಳಿಂದ 97 ವಿಕೆಟ್ ಪಡೆದಿದ್ದಾರೆ. 13ನೇ ಆವೃತ್ತಿಯ ಐಪಿಎಲ್​ನಲ್ಲಿ ಕೇವಲ 3 ಪಂದ್ಯಗಳನ್ನಾಡಿದರೂ ಒಂದೇ ಒಂದು ವಿಕೆಟ್​ ಪಡೆದಿದ್ದರು. ಆರ್​ಸಿಬಿ 13ನೇ ಆವೃತ್ತಿಯಲ್ಲಿ 4ನೇ ಸ್ಥಾನಿಯಾಗಿ ಲೀಗ್​ ಮುಗಿಸಿತ್ತು.

ಓದಿ: ಪಾಕ್‌ ಕ್ರಿಕೆಟಿಗರು ಸುಳ್ಳು ವಯಸ್ಸು ಹೇಳುತ್ತಿರುವುದು ಆಸಿಫ್‌ ಹೇಳಿಕೆಯಿಂದ ಬಹಿರಂಗ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.