ಕ್ರೈಸ್ಟ್‌ಚರ್ಚ್: ಪಾಕಿಸ್ತಾನದ ಆರು ಕ್ರಿಕೆಟಿಗರು ಇಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಪ್ರಕಟಿಸಿದೆ.
ಬಾಬರ್ ಅಜಮ್ ನೇತೃತ್ವದ 53 ಸದಸ್ಯರ ಬಲಿಷ್ಠ ಪಾಕಿಸ್ತಾನ ತಂಡವು ಮಂಗಳವಾರ ನ್ಯೂಜಿಲ್ಯಾಂಡ್ಗೆ ಆಗಮಿಸಿದೆ. ಪ್ರೋಟೋಕಾಲ್ ಪ್ರಕಾರ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಕಡ್ಡಾಯವಾಗಿ ಪೂರೈಸುತ್ತಿದೆ.
ಸೋಂಕಿಗೆ ತುತ್ತಾದ ಆಟಗಾರರ ಹೆಸರನ್ನು ಬಹಿರಂಗಪಡಿಸದೇ, ಆರು ಮಂದಿಗೆ ಕೊರೊನಾ ದೃಢಪಟ್ಟಿದೆ ಎಂದಷ್ಟೆ ಮಾಹಿತಿ ನೀಡಿದೆ. ತಂಡದ ಎಲ್ಲ ಆರೂ ಸದಸ್ಯರನ್ನು ಪ್ರತ್ಯೇಕವಾಗಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಆಟಗಾರರಿಗೆ ಕೋವಿಡ್ ಸೋಂಕು ತಗುಲಿದ ಪರಿಣಾಮ ಪಾಕ್ ಆಟಗಾರರ ಅಭ್ಯಾಸಕ್ಕೆ ತಡೆ ನೀಡಲಾಗಿದ ಎಂದು ನ್ಯೂಜಿಲ್ಯಾಂಡ್ ಸ್ಪಷ್ಟಪಡಿಸಿದೆ.
ಮೂರು ಟಿ-20 ಮತ್ತು ಎರಡು ಟೆಸ್ಟ್ ಪಂದ್ಯಗಳಿನ್ನು ಆಡಲು ಪಾಕಿಸ್ತಾನ ನ್ಯೂಜಿಲ್ಯಾಂಡ್ಗೆ ಆಗಮಿಸಿದೆ. ಈ ಸರಣಿಯು ಡಿಸೆಂಬರ್ 18 ರಂದು ಆಕ್ಲೆಂಡ್‌ನಲ್ಲಿ ಪ್ರಾರಂಭವಾಗುತ್ತದೆ.