ಮುಂಬೈ: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ಕುಟುಂಬ ಸದಸ್ಯರಿಗೆ ಮ್ಯಾಂಗೊ ಕುಲ್ಫಿ ತಯಾರಿಸುವ ಮೂಲಕ ಸರ್ಪ್ರೈಸ್ ಕೊಟ್ಟಿದ್ದಾರೆ.
“ನಮ್ಮ ವಿವಾಹವಾರ್ಷಿಕೋತ್ಸವದ ಪ್ರಯುಕ್ತ ಸರ್ಪ್ರೈಸ್ ನೀಡುತ್ತಿದ್ದೇನೆ. ನಮ್ಮ 25 ನೇ ವಿವಾಹ ವಾರ್ಷಿಕೋತ್ಸವದಂದು ಮನೆಯಲ್ಲಿರುವ ಎಲ್ಲರಿಗೂ ಸರ್ಪ್ರೈಸ್ ನೀಡಲು ಈ ಮಾವಿನ ಹಣ್ಣಿನ ಕುಲ್ಫಿಯನ್ನು ತಯಾರಿಸಿದ್ದೇನೆ ” ಎಂದು ಸಚಿನ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.
- View this post on Instagram
Made this Mango Kulfi as a surprise for everyone at home on our 25th wedding anniversary. 🥭 ☺️
">
47 ವರ್ಷದ ಸಚಿನ್ ತೆಂಡೂಲ್ಕರ್ ವಿಡಿಯೋದಲ್ಲಿ ಮ್ಯಾಂಗೋ ಕುಲ್ಫಿಯನ್ನು ಹೇಗೆ ತಯಾರಿಸುವುದು ಎಂದು ವಿವರಣೆ ನೀಡಿದ್ದಾರೆ.
ಸಚಿನ್ ಹಾಗೂ ಅಂಜಲಿ 1990ರಲ್ಲಿ ಇಬ್ಬರು ಭೇಟಿಯಾಗಿದ್ದರು. 5 ವರ್ಷಗಳ ಬಳಿಕ 1995 ಮೇ 24 ರಂದು ವಿವಾಹವಾಗಿದ್ದರು. ಈ ದಂಪತಿಗೆ ಸಾರಾ ಎಂಬ ಮಗಳು, ಅರ್ಜುನ್ ಎಂಬ ಮಗನಿದ್ದಾನೆ. ಅರ್ಜುನ್ ಕೂಡ ಕ್ರಿಕೆಟರ್ ಆಗಿದ್ದು, ವಿಶ್ವದ ಗಮನ ಸೆಳೆದಿದ್ದಾರೆ.