ಚೆನ್ನೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಂಗಳವಾರದಿಂದ ಚೆನ್ನೈನ ಶ್ರೀ ರಾಮಚಂದ್ರ ಇನ್ಸಿಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ ಅಂಡ್ ರೀಸರ್ಚ್ ಕಾಲೇಜು ಕ್ರೀಡಾಂಗಣದಲ್ಲಿ ತರಬೇತಿ ಆರಂಭಿಸಿದೆ.
ಯುಜ್ವೇಂದ್ರ ಚಹಾಲ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಹರ್ಷೆಲ್ ಪಟೇಲ್, ಶಹಬಾಜ್ ಅಹ್ಮದ್, ಪವನ್ ದೇಶಪಾಂಡೆ, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟಿದಾರ್, ಸಚಿನ್ ಬೇಬಿ, ಸುಯಾಸ್ ಪ್ರಭುದೇಶಾಯಿ ಮತ್ತು ಕೆ ಎಸ್ ಭರತ್ ಮೊದಲ ತರಬೇತಿ ಕ್ಯಾಂಪ್ನಲ್ಲಿ ಭಾಗವಹಿಸಿದ್ದರು.
ಉಳಿದ ಆಟಗಾರರು 7 ದಿನಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿದ ನಂತರ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ ಎಂದು ಆರ್ಸಿಬಿ ಹೇಳಿಕೆ ಬಿಡುಗಡೆ ಮಾಡಿದೆ. ಆರ್ಸಿಬಿ ಡೈರೆಕ್ಟರ್ ಮೈಕೆಲ್ ಹೆಸನ್, ಕೋಚ್ ಸೈಮನ್ ಕ್ಯಾಟಿಚ್ ನೇತೃತ್ವದಲ್ಲಿ 9 ದಿನಗಳ ಕಾಲ ಈ ತರಬೇತಿ ಶಿಬಿರ ನಡೆಯಲಿದೆ. ಸಂಜಯ್ ಬಂಗಾರ್, ಎಸ್ ಶ್ರೀಧರನ್, ಆ್ಯಡಂ ಗ್ರಿಫ್ಟನ್, ಶಂಕರ್ ಬಸು ಮತ್ತು ಮಲೋಲನ್ ರಂಗರಾಜನ್ ಕೂಡ ಕ್ಯಾಂಪ್ನಲ್ಲಿರುವ ಇನ್ನಿತರೆ ಕೋಚಿಂಗ್ ಸಿಬ್ಬಂದಿಯಿದ್ದಾರೆ.
ಕಳೆದ ಆವೃತ್ತಿಯಲ್ಲಿ ಆರ್ಸಿಬಿ ಪ್ಲೇಆಫ್ ತಲುಪಿತ್ತಾದರೂ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್ಗಳ ಸೋಲುಂಡಿತ್ತು.
ಇದನ್ನು ಓದಿ:ಐಪಿಎಲ್ನಲ್ಲಿ 1000 ರನ್ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ನಾನಾಗಬೇಕು.. ರಾಬಿನ್ ಉತ್ತಪ್ಪ