ETV Bharat / sports

ಕ್ರಿಸ್ ​ಲಿನ್​ಗೆ ಮೇಡನ್ ಓವರ್​ ಮಾಡಿದ 48 ವರ್ಷದ ಪ್ರವೀಣ್​ ತಾಂಬೆ - ಕ್ರಿಸ್​ ಲಿನ್​

ಸೆಪ್ಟೆಂಬರ್​ 19 ರಿಂದ ಐಪಿಎಲ್​ ಶುರುವಾಗಲಿದ್ದು, ಕ್ರಿಸ್​ ಲಿನ್​ ಬ್ಯಾಟಿಂಗ್​ ವೈಫಲ್ಯ ಚಾಂಪಿಯನ್​ ಮುಂಬೈ ತಂಡದ ಆತಂಕಕ್ಕೆ ಕಾರಣವಾಗಿದೆ.

ಕ್ರಿಸ್ ​ಲಿನ್​
ಕ್ರಿಸ್ ​ಲಿನ್​
author img

By

Published : Sep 2, 2020, 11:56 PM IST

ಟ್ರಿನಿಡಾಡ್​: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್​ಮನ್​ ಕ್ರಿಸ್​ ಲಿನ್​ ಪ್ರಸ್ತುತ ನಡೆಯುತ್ತಿರುವ ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ತಮ್ಮ ಫ್ಲಾಫ್​ ಶೋ ಮುಂದುವರಿಸಿದ್ದಾರೆ.

ಟ್ರಿಂಬಾಗೋ ನೈಟ್​ರೈಡರ್ಸ್​ ನೀಡಿದ 175 ರನ್​ಗಳ ಗುರಿ ಪಡೆದ ಸೇಂಟ್​ ಕಿಟ್ಸ್​ ಮತ್ತು ನೇವಿಸ್ ಪೇಟ್ರಿಯೋಟ್ಸ್​ ತಂಡ ದಯನೀಯ ವೈಫಲ್ಯ ಅನುಭವಿಸಿದೆ. ಅದರಲ್ಲೂ ಕ್ರಿಸ್​ ಲಿನ್​ ತಮ್ಮ ಬ್ಯಾಟಿಂಗ್ ವೈಫಲ್ಯವನ್ನು ಮುಂದುವಿರಿಸದ್ದಾರೆ.

ಟೂರ್ನಿಯಲ್ಲಿ ಎರಡನೇ ಪಂದ್ಯವನ್ನಾಡಿದ ಪ್ರವೀಣ್​ ತಾಂಬೆ ಎದುರು ಕ್ರಿಸ್​ಲಿನ್​ ತಡಬಡಾಯಿಸಿದರಲ್ಲದೆ, ತಾಂಬೆ ಎಸೆದ 11ನೇ ಓವರ್​ನಲ್ಲಿ ಎಲ್ಲಾ ಆರು ಎಸೆತಗಳನ್ನು ಡಾಟ್​ ಮಾಡುವ ಮೂಲಕ ಮೇಡನ್​ ನೀಡಿದರು. ಕೊನೆಗೆ 46ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 1 ಬೌಂಡರಿ ಸಹಿತ 34 ರನ್​ ಗಳಿಸಿ ಬ್ರಾವೋಗೆ ವಿಕೆಟ್​ ಒಪ್ಪಿಸಿದರು.

ಪ್ರವೀಣ್​ ತಾಂಬೆ
ಪ್ರವೀಣ್​ ತಾಂಬೆ

ಪ್ರವೀಣ್​ ತಾಂಬೆ 4 ಓವರ್​ಗಳಲ್ಲಿ ಒಂದು ಮೇಡನ್ ಸಹಿತ ಕೇವಲ 12 ರನ್​ ನೀಡಿ 1 ವಿಕೆಟ್​ ಪಡೆದರು.

ಟೂರ್ನಿಯುದ್ದಕ್ಕೂ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿರುವ ಕ್ರಿಸ್​ ಲಿನ್ ಒಂದು ಅರ್ಧಶಕವನ್ನು ದಾಖಲಿಸದಿರುವುದು ವಿಪರ್ಯಾಸವಾಗಿದೆ. ಅವರು ಬಾರ್ಬಡೋಸ್​ ವಿರುದ್ಧದ ಎರಡು ಪಂದ್ಯಗಳಲ್ಲಿ 19 ಹಾಗೂ 16, ಸೇಂಟ್ ಲೂಸಿಯಾ ಜೌಕ್ಸ್​ ವಿರುದ್ಧ 2 ಪಂದ್ಯದಲ್ಲಿ 14 ಮತ್ತು ಸೊನ್ನೆ, ಜಮೈಕಾ ವಿರುದ್ಧ 8, ಟಿಕೆಆರ್​ ವಿರುದ್ಧ 34 ಹಾಗೂ ಗಯಾನ ವಿರುದ್ಧ 16 ರನ್​ಗಳಿಸಿ ಔಟಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.