ETV Bharat / sports

ನೈಟ್​ರೈಡರ್ಸ್​ ತಂಡವನ್ನು ಕೀರನ್​ ಪೊಲಾರ್ಡ್​ ಮುನ್ನಡೆಸಲಿದ್ದಾರೆ.. ಟಿಕೆಆರ್​ ಸಿಇಒ ವೆಂಕಿ ಮೈಸೂರು ಸ್ಪಷ್ಟನೆ

author img

By

Published : Aug 1, 2020, 7:08 PM IST

ಸತತ ಎರಡು ಆವೃತ್ತಿಯಲ್ಲಿ ಟಿಕೆಆರ್​ ತಂಡವನ್ನು ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದ ನಾಯಕ ಡ್ವೇನ್​ ಬ್ರಾವೋ ಗಾಯಕ್ಕೊಳಗಾದ ಕಾರಣ ಶಾರುಖ್‌​​ ಖಾನ್​ ಒಡೆತನದ ತಂಡವನ್ನು 2019ರ ಆವೃತ್ತಿಯಲ್ಲಿ ಪೊಲಾರ್ಡ್​ ಮುನ್ನಡೆಸಿದ್ದರು. ಈ ವೇಳೆ ಟಿಕೆಆರ್​ ಪ್ಲೇ ಆಫ್​ ಹಂತಕ್ಕೂ ಕಾಲಿಟ್ಟಿತ್ತು..

ಟಿಕೆಆರ್​ ನಾಯಕ ಕೀರನ್​ ಪೊಲಾರ್ಡ್​
ಟಿಕೆಆರ್​ ನಾಯಕ ಕೀರನ್​ ಪೊಲಾರ್ಡ್​

ಪೋರ್ಟ್​ ಆಫ್‌ಸ್ಪೈನ್ ​: ಆಲ್​ರೌಂಡರ್​ ಕೀರನ್​ ಪೊಲಾರ್ಡ್​ ಈ ಆವೃತ್ತಿಯ ಸಿಪಿಎಲ್​ನಲ್ಲೂ ಟ್ರಿಂಬಾಗೊ ನೈಟ್​ ​ರೈಡರ್ಸ್​ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಶಾರುಖ್‌​ ಖಾನ್​ ಒಡೆತನದ ಟಿಕೆಆರ್​ ತಂಡವನ್ನು 2019ರ ಆವೃತ್ತಿಯಲ್ಲಿ ಸತತ ಎರಡು ಆವೃತ್ತಿಯಲ್ಲಿ ತಂಡವನ್ನು ಚಾಂಪಿಯನ್ ಮಾಡಿದ್ದ ಖಾಯಂ ನಾಯಕ ಡ್ವೇನ್​ ಬ್ರಾವೋ ಅನುಪಸ್ಥಿತಿಯಲ್ಲಿ ಪೊಲಾರ್ಡ್​ ಮುನ್ನಡೆಸಿದ್ದರು. ಟಿಕೆಆರ್​ ಪ್ಲೇ ಆಫ್​ ಹಂತಕ್ಕೂ ಕಾಲಿಟ್ಟಿತ್ತು.

ಇದೀಗ ಟೀಮ್​ ಮ್ಯಾನೇಜ್​ಮೆಂಟ್ ಪೊಲಾರ್ಡ್​ ನಾಯಕತ್ವವನ್ನು ಆನಂದಿಸಿದ್ದು, ಪ್ರಸ್ತುತ ವಿಂಡೀಸ್​ ನಾಯಕರಾಗಿರುವ ಅವರನ್ನೇ 2020ರ ಆವೃತ್ತಿಗೂ ಟಿಕೆಆರ್​ ಮುನ್ನಡೆಸಲು ಅನುವು ಮಾಡಿಕೊಟ್ಟಿದೆ.

'ವೆಸ್ಟ್ ಇಂಡೀಸ್ ತಂಡದ ನಾಯಕನಾಗಿರುವ ಕೀರನ್ ಪೊಲಾರ್ಡ್​ ಟಿಕೆಆರ್​ ತಂಡವನ್ನು ಮುನ್ನಡೆಸುತ್ತಿರುವುದು ನಮಗೆ ಸಂತೋಷವಾಗಿದೆ' ಎಂದು ತಂಡದ ಸಿಇಒ ವೆಂಕಿ ಮೈಸೂರು ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ದಿ ಚಾಂಪಿಯನ್​ ಡಿಜೆ ಬ್ರಾವೋ ಕಳೆದ ವರ್ಷ ನಾಯಕತ್ವವನ್ನು ಬೇರೊಬ್ಬರಿಗೆ ವಹಿಸುವಂತೆ ಕೇಳಿಕೊಂಡಿದ್ದರು. ಯಾಕೆಂದರೆ, ಅವರು ಆಟದ ಕಡೆಗೆ ಗಮನ ನೀಡುವುದು ಮತ್ತು ಆಟವನ್ನು ಎಂಜಾಯ್​ ಮಾಡುವುದಕ್ಕಾಗಿ ನಾಯಕತ್ವ ಬಿಟ್ಟು ಕೊಡುವುದಾಗಿ ತಿಳಿಸಿದ್ದರು. ಜೊತೆಗೆ ಪೊಲಾರ್ಡ್​ ನಾಯಕತ್ವದಲ್ಲಿ ಆಡಲು ಸಂತೋಷವಿದೆ ಎಂದು ಅವರು ತಿಳಿಸಿದ್ದರು ಎಂದು ವೆಂಕಿ ಮೈಸೂರು ವಿವರಿಸಿದ್ದಾರೆ.

'ಅವರಿಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ ಮತ್ತು ಅವರಿಬ್ಬರ ಒಗ್ಗೂಡುವಿಕೆಯಿಂದ ಈ ವರ್ಷ ನಮಗೆ ಸಿಪಿಎಲ್‌ ಟ್ರೋಫಿ ಗೆಲ್ಲಲು ಉತ್ತಮ ಅವಕಾಶವಿದೆ. ಬ್ರಾವೋ ಈ ಮೊದಲು ಪೊಲಾರ್ಡ್ ಜತೆ ಆಡಿರುವುದರಿಂದ ಇದು ಅನುಕೂಲಕಾರಿ ವಿಷಯವಾಗಿದೆ' ಎಂದು ಅವರು ತಿಳಿಸಿದ್ದಾರೆ.

ಸಿಪಿಎಲ್‌ನ 2020 ಆವೃತ್ತಿಯು ಅಗಸ್ಟ್ 18ರಿಂದ ಸೆಪ್ಟೆಂಬರ್ 20ವರೆಗೆ ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಸಂಪೂರ್ಣ ಆವೃತ್ತಿ ನಡೆಯಲಿದೆ. ಟೂರ್ನಿಯಲ್ಲಿ ವಿದೇಶಿ ಮತ್ತು ಕೆರಿಬಿಯನ್ ಆಟಗಾರರು ಭಾಗವಹಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.