ವಿಶಾಖಪಟ್ಟಣ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಏಕೈಕ ಕನ್ನಡಿಗ ಮಯಾಂಕ್ ಅಗರ್ವಾಲ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ದಾಖಲಿಸಿದ್ದಾರೆ.
ವಿಶಾಖಪಟ್ಟಣದ ವೈ. ಎಸ್ ರಾಜಶೇಖರರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನ ಮಯಾಂಕ್ ತಮ್ಮ ಚೊಚ್ಚಲ ಶತಕ ಪೂರ್ಣಗೊಳಿಸಿದ್ದಾರೆ.
-
🙌🙌💯#INDvSA https://t.co/R5QyyblOwZ pic.twitter.com/utqFMShNj0
— BCCI (@BCCI) October 3, 2019 " class="align-text-top noRightClick twitterSection" data="
">🙌🙌💯#INDvSA https://t.co/R5QyyblOwZ pic.twitter.com/utqFMShNj0
— BCCI (@BCCI) October 3, 2019🙌🙌💯#INDvSA https://t.co/R5QyyblOwZ pic.twitter.com/utqFMShNj0
— BCCI (@BCCI) October 3, 2019
ಈಗಾಗಲೆ ಜೊತೆಗಾರ ರೋಹಿತ್ ಶರ್ಮಾ ಶತಕ ಪೂರ್ಣಗೊಳಿಸಿ ದ್ವಿಶತಕದತ್ತ ದಾಪುಗಾಲಿಟ್ಟಿದ್ದಾರೆ. ಮಯಾಂಕ್ ಕೂಡ ಅವರಿಗೆ ಉತ್ತಮವಾಗಿ ಸಾಥ್ ನೀಡುತ್ತಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ವಿಕೆಟ್ಗೆ ದಾಖಲೆಯ ಜೊತೆಯಾಟ ನೀಡಿದ್ದಾರೆ.
ಮೊದಲ ದಿನ 84 ರನ್ಗಳಿಸಿದ್ದ ಮಯಾಂಕ್ ಇಂದು 206 ನೇ ಎಸೆತದಲ್ಲಿ ಶತಕ ಪೂರ್ಣಗೊಳಿಸಿದರು. ಇವರ ಇನ್ನಿಂಗ್ಸ್ನಲ್ಲಿ 13 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಕೂಡ ಸೇರಿತ್ತು. ಮಯಾಂಕ್ ಅಗರ್ವಾಲ್ ಭಾರತದ ನೆಲದಲ್ಲಿ ಆಡಿದ ಮೊದಲ ಟೆಸ್ಟ್ನಲ್ಲಿಯೇ ಶತಕ ಬಾರಿಸಿರುವುದು ವಿಶೇಷವಾಗಿತ್ತು.