ETV Bharat / sports

ಬುಮ್ರಾ ಮೇಲೆ ಮಾಲಿಂಗ ಇಟ್ಟಿದ್ದ ನಿರೀಕ್ಷೆ ಹುಸಿಯಾಯಿತು: ಜಯವರ್ದನೆ - ಕಗಿಸೋ ರಬಾಡ ಪರ್ಪಲ್ ಕ್ಯಾಪ್

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕಗಿಸೋ ರಬಾಡ 17 ಪಂದ್ಯಗಳಲ್ಲಿ 30 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡರು. ಬುಮ್ರಾ 27 ಮತ್ತು ಮುಂಬೈನ ಮತ್ತೊಬ್ಬ ಬೌಲರ್​ ಟ್ರೆಂಟ್ ಬೌಲ್ಟ್​ 25 ವಿಕೆಟ್ ಪಡೆದರು ಮೂರನೇ ಸ್ಥಾನ ಪಡೆದರು.

ಜಸ್ಪ್ರೀತ್ ಬುಮ್ರಾ
ಜಸ್ಪ್ರೀತ್ ಬುಮ್ರಾ
author img

By

Published : Nov 11, 2020, 10:39 PM IST

ದುಬೈ: ಲಸಿತ್ ಮಾಲಿಂಗ 13ನೇ ಆವೃತ್ತಿಯಲ್ಲಿ 27 ವಿಕೆಟ್​ ಪಡೆದು ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು. ಆದರೆ ಮುಂಬೈ ತಂಡದ ಲಸಿತ್ ಮಾಲಿಂಗ ಈ ಆವೃತ್ತಿಯಲ್ಲಿ ಬುಮ್ರಾ ಪರ್ಪಲ್ ಕ್ಯಾಪ್​ ಗೆಲ್ಲುತ್ತಾರೆಂದು ಬಯಸಿದ್ದರೆಂದು ಕೋಚ್ ಜಯನೆವರ್ದ ಹೇಳಿದ್ದಾರೆ.

ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿ 5ನೇ ಬಾರಿ ಟ್ರೋಫಿ ಎತ್ತಿ ಹಿಡಿದಿತ್ತು. ಕೌಟುಂಬಿಕ ಕಾರಣದಿಂದ ಟೂರ್ನಿಯಿಂದ ಹಿಂದಿ ಸರಿದಿರುವ ಮಾಲಿಂಗ, ಈ ವರ್ಷದ ಐಪಿಎಲ್​ನಲ್ಲಿ ಬುಮ್ರಾರಿಂದ ಶ್ರೇಷ್ಠ ಪ್ರದರ್ಶನ ಹೊರಬರುತ್ತದೆ, ಅವರೇ ಪರ್ಪಲ್​ ಕ್ಯಾಪ್​ ಪಡೆಯುತ್ತಾರೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಒಂದು ಪಂದ್ಯ ಮಿಸ್​ ಮಾಡಿಕೊಂಡ ಹಾಗೂ ಕೊನೆಯ ಪಂದ್ಯದಲ್ಲಿ ವಿಕೆಟ್ ಪಡೆಯದ ಕಾರಣ ಪರ್ಪಲ್ ಕ್ಯಾಪ್​ ಕೈತಪ್ಪಿತು.

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕಗಿಸೋ ರಬಾಡ 17 ಪಂದ್ಯಗಳಲ್ಲಿ 30 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡರು. ಬುಮ್ರಾ 27 ಮತ್ತು ಮುಂಬೈನ ಮತ್ತೊಬ್ಬ ಬೌಲರ್​ ಟ್ರೆಂಟ್ ಬೌಲ್ಟ್​ 25 ವಿಕೆಟ್ ಪಡೆದರು ಮೂರನೇ ಸ್ಥಾನ ಪಡೆದರು.

ಮುಂಬೈ ಟ್ರೋಫಿ ಗೆದ್ದ ಬಳಿಕ ಮಾತನಾಡಿದ ಕೋಚ್ ಜಯವರ್ದನೆ , ಕಳೆದ ವರ್ಷದಂತೆ ಕೊನೆಯ ಎಸೆತದಲ್ಲಿ ಪಂದ್ಯ ಮುಗಿಯದಿದ್ದಕ್ಕೆ ಸಂತೋಷವಿದೆ. ಈ ವರ್ಷ ಅದ್ಭುತ ಬೌಲಿಂಗ್ ಪ್ರದರ್ಶನ ತೋರುತ್ತಿದ್ದರಿಂದ ಬುಮ್ರಾ ಪರ್ಪಲ್ ಕ್ಯಾಪ್ ಗೆಲ್ಲಬೇಕೆಂದು ಮಲಿ(ಮಾಲಿಂಗ) ಬಯಸಿದ್ದರು. ಆದರೆ ತುಂಬಾ ಹತ್ತಿರ ಬಂದು ಮಿಸ್​ ಮಾಡಿಕೊಂಡರು" ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.