ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಾಯಕನಾಗಿ ಏನನ್ನೂ ಸಾಧಿಸಿಲ್ಲ ಎಂದು ಹೇಳಿ ವಿವಾದಕ್ಕೀಡಾಗಿದ್ದ ಗೌತಮ್ ಗಂಭೀರ್. ಇಂದು ವಿರಾಟ್ ಕೊಹ್ಲಿ ಒಬ್ಬ ಸ್ಮಾರ್ಟ್ ಕ್ರಿಕೆಟರ್, ಅವರ ಫಿಟ್ನೆಸ್ ಅವರ ಶಕ್ತಿ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಭಾರತೀಯ ನಾಯಕ ವಿರಾಟ್ ಕೊಹ್ಲಿ ಒಬ್ಬ ಸ್ಮಾರ್ಟ್ ಕ್ರಿಕೆಟರ್ , ಅವರ ಸ್ಮಾರ್ಟ್ನೆಸ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಶಸ್ವಿಯಾಗಲು ನೆರವಾಗಿದೆ ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಆಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿ ಕೆಲವು ವಿಶ್ವದ ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗರು ಹೊಂದಿರುವ ಶಕ್ತಿ ಹಾಗೂ ಸಾಮರ್ಥ್ಯವನ್ನು ಹೊಂದಿಲ್ಲ. ಆದರೆ ಅವರ ಫಿಟ್ನೆಸ್ ಮೇಲೆ ಹೆಚ್ಚು ಕೆಲಸ ಮಾಡುತ್ತಿರುವುದರಿಂದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇಷ್ಟು ದೂರ ಬರುವಂತೆ ಮಾಡಿದೆ.
ಚುಟುಕು ಕ್ರಿಕೆಟ್ನಲ್ಲಿ ಕೊಹ್ಲಿ ಅತ್ಯಂತ ಪರಿಣಾಮಕಾರಿ ಬ್ಯಾಟ್ಸ್ಮನ್ ಆಗಿರುವುದರ ಕುರಿತು ಮಾತನಾಡಿದ ಗಂಭೀರ್, "ಕೊಹ್ಲಿ ಚುರುಕುತನ ಅವರನ್ನು ಅತ್ಯಂತ ಯಶಸ್ವಿ ಆಟಗಾರರನನ್ನಾಗಿ ಪರಿವರ್ತಿಸಿದೆ. ಆದರೆ ಅವರು ಕ್ರಿಸ್ ಗೇಲ್ ಶಕ್ತಿಯನ್ನು ಹೊಂದಿಲ್ಲ, ಎಬಿ ಡಿ ವಿಲಿಯರ್ಸ್ರಂತಹ ಸಾಮರ್ಥ್ಯವನ್ನು ಹೊಂದಿಲ್ಲ. ಜಾಕ್ ಕಾಲೀಸ್ ಅಥವಾ ಲಾರಾರಲ್ಲಿದ್ದ ಸಾ,ಮರ್ಥ್ಯವೂ ಇಲ್ಲ"
"ಅವರಿಗೆ (ಕೊಹ್ಲಿಗೆ)ದೊರೆತಿರುವ ಶಕ್ತಿ ಎಂದರೆ ಅವರ ಫಿಟ್ನೆಸ್ ಮತ್ತು ಅದನ್ನು ಅವರು ತಮ್ಮ ಆಟಕ್ಕೆ ಬಳಸಿಕೊಂಡಿದ್ದ ಇಂದು ಚುಟುಕು ಕ್ರಿಕೆಟ್ನಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಂತ ಮುಖ್ಯ ವಿಷಯವೆಂದರೆ ಅವರು ವಿಕೆಟ್ಗಳ ಮಧ್ಯೆ ಚೆನ್ನಾಗಿ ಓಡುತ್ತಾರೆ, ಇದು ಹೆಚ್ಚಿನ ಜನರಿಂದ ಸಾಧ್ಯವಾಗುವುದಿಲ್ಲ " ಎಂದು ಗಂಭೀರ್ ಹೇಳಿದ್ದಾರೆ.
ಕೊಹ್ಲಿ ಬ್ಯಾಟಿಂಗ್ ಕೌಶಲ್ಯದ ಬಗ್ಗೆ ಮಾತನಾಡಿದ ಗಂಭೀರ್, ಟಿ20 ಕ್ರಿಕೆಟ್ನಲ್ಲಿ ಡಾಟ್ ಬಾಲ್ಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡುವುದಿಲ್ಲ. ನೀವು ಕಡಿಮೆ ಡಾಟ್ ಬಾಲ್ಗಳನ್ನು ಆಡಿದರೆ , ನೀವು ಯಾವಾಗಲೂ ಕಡಿಮೆ ಒತ್ತಡದಲ್ಲಿರುತ್ತೀರಿ , ನೀವು ಸುಲಭವಾಗಿ ಸ್ಟ್ರೈಕ್ ರೊಟ್ಯಾಟ್ ಮಾಡುವುದಲ್ಲದೆ, ಪ್ರತಿಯೊಂದು ಬಾಲ್ಗಳಲ್ಲೂ ರನ್ ತೆಗೆಯಬಹುದು. ಕ್ರಿಕೆಟ್ನಲ್ಲಿ ಸುಲಭದ ಕೆಲಸವೆಂದರೆ ಬೌಂಡರಿ ಸಿಕ್ಸರ್ ಸಿಡಿಸುವುದು. ಪ್ರತಿ ಎಸೆತದಲ್ಲಿ ರನ್ಗಳಿಸುವುದು ಕಷ್ಟಸಾಧ್ಯ
ಆದರೆ ಎಲ್ಲಾ ಕ್ರಿಕೆಟಿಗರಿಗೂ ಸ್ಟ್ರೈಕ್ ಬದಲಾಯಿಸುವುದು ಸಾಧ್ಯವಾಗುವುದಿಲ್ಲ. ಕೆಲವೇ ಕೆಲವು ಕ್ರಿಕೆಟರ್ಗಳು ಮಾತ್ರ ಪ್ರತಿ ಎಸೆತದಲ್ಲೂ ಸ್ಟ್ರೈಕ್ ಬದಲಾಯಿಸಬಲ್ಲರು. ಅದರಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮರಾಗಿದ್ದಾರೆ. ಬೇರೆಯವರಿಗಿಂತಲೂ ವಿಭಿನ್ನರಾಗಿದ್ದಾರೆ. ನೀವು ರೋಹಿತ್ ನೋಡಿದರೆ, ಅವರು ಕೊಹ್ಲಿ ಹೊಂದಿರುವ ಸ್ಟ್ರೈಕ್ ಬದಲಾಯಿಸಿಕೊಳ್ಳುವ ಗುಣವನ್ನು ಹೊಂದಿಲ್ಲ. ಆದರೆ ರೋಹಿತ್ ದೊಡ್ಡ ಹೊಡೆತಗಳನ್ನು ಹೊಡೆಯಲು ಸಮರ್ಥರಿದ್ದಾರೆ. ಆದರೆ ಕೊಹ್ಲಿ ರೋಹಿತ್ಗಿಂತಲೂ ಹೆಚ್ಚು ಸ್ಥಿರತೆಯುಳ್ಳ ಬ್ಯಾಟ್ಸ್ಮನ್ ಆಗಿದ್ದಾರೆ. ಕ್ರಿಸ್ ಗೇಲ್, ಎಬಿ ಡಿ ವಿಲಿಯರ್ಸ್ ಕೂಡ ಸ್ಟ್ರೈಕ್ ಬದಲಾಯಿಸಿಕೊಳ್ಳುವ ಕೌಶಲ್ಯವನ್ನು ಹೊಂದಿಲ್ಲ, ಅದರಲ್ಲೂ ಸ್ಪಿನ್ ಬೌಲರ್ಗಳ ಎದುರು ಅವರು ಪರದಾಡುತ್ತಾರೆ. ಆದರೆ ಕೊಹ್ಲಿಗೆ ಅದು ಸುಲಭ, ಆದ್ದರಿಂದಲೇ ಅವರ ಸರಾಸರಿ 50ಕ್ಕಿಂತ ಹೆಚ್ಚಿದೆ ಎಂದು ಗಂಭೀರ್ ಭಾರತ ತಂಡದ ನಾಯಕನನ್ನು ಹೊಗಳಿದ್ದಾರೆ.