ಅಹ್ಮದಾಬಾದ್: ಸತತ 4 ಪಂದ್ಯಗಳಲ್ಲಿ 3 ಬಾರಿ ಡಕ್ಔಟ್ ಆಗಿರುವ ಕನ್ನಡಿಗ ಕೆಎಲ್ ರಾಹುಲ್ರನ್ನು ಚಾಂಪಿಯನ್ ಪ್ಲೇಯರ್ ಎಂದಿರುವ ನಾಯಕ ಕೊಹ್ಲಿ, ಭಾರತ ತಂಡದಲ್ಲಿ ಆರಂಭಿಕನಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ.
ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಕೆಎಲ್ ರಾಹುಲ್ ಕಳೆದ ಇಂಗ್ಲೆಂಡ್ ವಿರುದ್ಧದ 3 ಟಿ20 ಪಂದ್ಯಗಳಿಂದ 1,0,0 ರನ್ಗಳಿಸಿ ಔಟಾಗಿದ್ದಾರೆ.
ಕೊಹ್ಲಿ ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯ ಮತ್ತು ಮೊದಲ ಟಿ20 ಪಂದ್ಯದಲ್ಲಿ ಡಕ್ಔಟ್ ಆಗಿದ್ದರು. ಆದರೆ ನಂತರ 2 ಮತ್ತು 3ನೇ ಟಿ20 ಪಂದ್ಯದಲ್ಲಿ ಕ್ರಮವಾಗಿ 73 ಮತ್ತು 77 ರನ್ಗಳಿಸಿದ್ದರು.
"ಎರಡು ದಿನಗಳ ಹಿಂದೆ ನಾನು ಕೂಡ ಫಾರ್ಮ್ ಕಳೆದುಕೊಂಡಿದ್ದೆ. ಕೆಎಲ್ ರಾಹುಲ್ ಒಬ್ಬ ಚಾಂಪಿಯನ್ ಪ್ಲೇಯರ್. ನೀವು ಅವರ ಕಳೆದ ಎರಡು ಮೂರು ವರ್ಷಗಳ ನಂಬರ್ಸ್ಗಳನ್ನು ನೋಡಿ, ಅದು ಟಿ20 ಕ್ರಿಕೆಟ್ನಲ್ಲಿ ಎಲ್ಲರಿಗಿಂತಲೂ ಅವರು ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ನಮ್ಮ ತಂಡದ ಪ್ರಮುಖ ಆಟಗಾರರಾಗಿ ರೋಹಿತ್ ಜೊತೆಗೆ ಟಾಪ್ ಆರ್ಡರ್ನಲ್ಲಿ ಮುಂದುವರಿಯಲಿದ್ದಾರೆ" ಎಂದು ಪಂದ್ಯ ಮುಗಿದ ನಂತರ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ:ಬಟ್ಲರ್ ಅಬ್ಬರಕ್ಕೆ ಮಂಕಾದ ಟೀಂ ಇಂಡಿಯಾ: 3ನೇ ಟಿ20ಯಲ್ಲಿ ಸೋಲುಂಡ ಕೊಹ್ಲಿ ಪಡೆ