ETV Bharat / sports

ಧೋನಿ ನಾಯಕತ್ವದ ಗುಣ ಪುನರಾವರ್ತನೆ ಕಷ್ಟ: ಒಂದು ಯುಗದ ಅಂತ್ಯ ಎಂದ ಗಂಗೂಲಿ! - ಬಿಸಿಸಿಐ ಅಧ್ಯಕ್ಷ

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದು, ಇದೇ ವಿಷಯವಾಗಿ ಮಾತನಾಡಿರುವ ಸೌರವ್​ ಗಂಗೂಲಿ ಒಂದು ಯುಗದ ಅಂತ್ಯ ಎಂದಿದ್ದಾರೆ.

Sourav Ganguly
Sourav Ganguly
author img

By

Published : Aug 16, 2020, 2:10 AM IST

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್​ ಧೋನಿ ವಿದಾಯ ಘೋಷಿಸಿದ್ದಾರೆ. ಸ್ವಾತಂತ್ರ್ಯೋತ್ಸವ ದಿನವೇ ಈ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಧೋನಿ ಸದ್ಯ ಐಪಿಎಲ್​ ಟೂರ್ನಿಯಲ್ಲಿ ಭಾಗಿಯಾಗುವ ಉದ್ದೇಶದಿಂದ ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

ಮಾಹಿ, ಇನ್ಮುಂದೆ ವಿಶ್ವ ಕ್ರಿಕೆಟ್​ ನಿಮ್ಮ ಹೆಲಿಕಾಪ್ಟರ್​ ಶಾಟ್​ ಮಿಸ್​ ಮಾಡಿಕೊಳ್ಳಲಿದೆ: ಅಮಿತ್​ ಶಾ

ಅವರು ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ಅನೇಕರು ಟ್ವೀಟ್​​ ಮಾಡಿ ಶುಭಾಶಯ ತಿಳಿಸಿದ್ದು, ಭಾರತೀಯ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಸೌರವ್​ ಗಂಗೂಲಿ ಕೂಡ ಅವರಿಗೆ ವಿಶ್​ ಮಾಡಿದ್ದಾರೆ.

Sourav Ganguly
ಧೋನಿ ಜತೆ ಗಂಗೂಲಿ ಸಂಭ್ರಮ

ಧೋನಿ ನಾಯಕತ್ವದ ಗುಣ ಪುನರಾವರ್ತನೆ ಮಾಡುವುದು ಕಷ್ಟ ಎಂದಿರುವ ಗಂಗೂಲಿ, ಒಂದು ಯುಗದ ಅಂತ್ಯ ಎಂದಿದ್ದಾರೆ. ಮಹೇಂದ್ರ ಸಿಂಗ್​ ಧೋನಿ ದೇಶ ಮತ್ತು ವಿಶ್ವ ಕ್ರಿಕೆಟ್​​ನಲ್ಲಿ ವಿಶಿಷ್ಟ ಆಟಗಾರ. ಸೀಮಿತ್​ ಓವರ್​ಗಳ ಕ್ರಿಕೆಟ್​​ನಲ್ಲಿ ಅವರ ಸಾಧನೆ ಅಪಾರ. ಭರ್ಜರಿ ಬ್ಯಾಟಿಂಗ್​ ಮೂಲಕ ವಿಶ್ವದ ಗಮನ ಸೆಳೆದಿರುವ ಅವರು, ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ ಎಂದಿದ್ದಾರೆ. ಪ್ರತಿಯೊಂದು ಒಳ್ಳೆಯದಕ್ಕೂ ಅಂತ್ಯವಿರುತ್ತದೆ. ದೇಶದ ವಿಕೆಟ್​ ಕೀಪರ್​ಗಳಿಗೆ ಮಾನದಂಡ ನಿಗದಿಪಡಿಸಿರುವ ಧೋನಿ, ವೃತ್ತಿಜೀವನ ಕೊನೆಗೊಳಿಸಿದ್ದಾರೆ. ಅವರ ಮುಂದಿನ ಜೀವನ ಉತ್ತಮವಾಗಿರಲಿ ಎಂದು ಹಾರೈಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.