ರಾಯ್ಪುರ್: ರೋಡ್ ಸೇಫ್ಟಿ ವರ್ಲ್ಡ್ ಕ್ರಿಕೆಟ್ ಸಿರೀಸ್ನಲ್ಲಿ ಭಾಗಿಯಾಗಲು ರಾಯ್ಪುರ್ನಲ್ಲಿರುವ ಟೀಂ ಇಂಡಿಯಾ ಮಾಜಿ ಪ್ಲೇಯರ್ ಇರ್ಫಾನ್ ಪಠಾಣ್ ಇದೀಗ ಛತ್ತೀಸ್ಗಢ ಕ್ರಿಕೆಟ್ ಅಸೋಸಿಯೇಷನ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಛತ್ತೀಸ್ಗಢ ಕ್ರಿಕೆಟ್ಗೆ ಉತ್ತಮ ಕೋಚ್ ಅಗತ್ಯವಿದೆ ಎಂದು ಹೇಳಿರುವ ಅವರು, ಉತ್ತಮ ತಂಡ ರೂಪುಗೊಳ್ಳಲು ಹೊಸ ತರಬೇತುದಾರನಿಗೆ ಕನಿಷ್ಠ 2 ವರ್ಷಗಳ ಸಮಯ ನೀಡಬೇಕಾಗುತ್ತದೆ ಎಂದಿದ್ದಾರೆ.
ಇಂಡಿಯಾ ಲೆಜೆಂಡ್ಸ್ ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಲೆಜೆಂಡ್ಸ್ ವಿರುದ್ಧ ಸೆಣಸಾಟ ನಡೆಸಲಿದ್ದು, ಸಂಜೆ 7 ಗಂಟೆಗೆ ಪಂದ್ಯ ಆಯೋಜನೆಗೊಂಡಿದೆ. ಪಂದ್ಯಕ್ಕೂ ಮುಂಚಿತವಾಗಿ ನಡೆದ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಛತ್ತೀಸ್ಗಢದಲ್ಲಿ ಕ್ರಿಕೆಟ್ಗೆ ಉತ್ತಮ ಸೌಲಭ್ಯವಿದೆ. ಆದರೆ ಆಟಗಾರನಿಗೆ ಉತ್ತಮ ಕೋಚ್ ಅವಶ್ಯಕತೆ ಇರುತ್ತದೆ. ಅದರ ಅವಶ್ಯಕತೆ ಇಲ್ಲಿನ ಕ್ರಿಕೆಟ್ ಅಸೋಸಿಯೇಷನ್ಗಿದೆ ಎಂದಿದ್ದಾರೆ.
ತಾವು ಜಮ್ಮು-ಕಾಶ್ಮೀರದಲ್ಲಿ ಎರಡು ವರ್ಷಗಳ ಕಾಲ ಕೋಚ್ ಆಗಿದ್ದ ವೇಳೆ ಅಲ್ಲಿನ ಕ್ರಿಕೆಟ್ ಮಂಡಳಿ ತಮಗೆ ಎಲ್ಲಾ ರೀತಿಯ ಅಧಿಕಾರ ನೀಡಿತ್ತು. ಇದೇ ಕಾರಣಕ್ಕಾಗಿ ಕೆಲ ಪ್ಲೇಯರ್ಸ್ ಐಪಿಎಲ್ನಲ್ಲಿ ಭಾಗಿಯಾಗುತ್ತಿದ್ದಾರೆ. ಅದೇ ರೀತಿ ಛತ್ತೀಸ್ಗಢ ಉತ್ತಮ ತರಬೇತುದಾರನಿಗೆ ಆಯ್ಕೆ ಮಾಡಿಕೊಂಡು ಅವರಿಗೆ 2 ವರ್ಷಗಳ ಸಮಯಾವಕಾಶ ನೀಡಬೇಕು ಎಂದರು.
ಯಾವುದೇ ಕೋಚ್ಗೆ ಕನಿಷ್ಠ ಮೂರರಿಂದ ನಾಲ್ಕು ಸರಣಿ ನೀಡಲಾಗುತ್ತದೆ. ಅದರ ಆಧಾರದ ಮೇಲೆ ಕಾರ್ಯಕ್ಷಮತೆ ಅಳೆಯಬೇಕು. ಆದರೆ ಇಲ್ಲಿನ ಕ್ರಿಕೆಟ್ ಮಂಡಳಿಯಲ್ಲಿ ಈ ಕೆಲಸ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೋಡ್ ಸೇಫ್ಟಿ ವರ್ಲ್ಡ್ ಕ್ರಿಕೆಟ್ ಸಿರೀಸ್ನಲ್ಲಿ ಈಗಾಗಲೇ ಇಂಡಿಯಾ ಲೆಜೆಂಡ್ಸ್ ಬಾಂಗ್ಲಾ ಲೆಜೆಂಡ್ಸ್ ವಿರುದ್ಧ ಗೆಲುವು ಸಾಧಿಸಿದ್ದು, ಇಂದಿನ ಪಂದ್ಯದಲ್ಲಿ ಆಂಗ್ಲರ ಮೇಲೆ ಸವಾರಿ ಮಾಡಲಿದೆ.