ETV Bharat / sports

ನಿಗದಿಯಾಗಿರುವ ವೇಳಾಪಟ್ಟಿಯಂತೆ ಐಪಿಎಲ್ ನಡೆಯಲಿದೆ : ಸೌರವ್ ಗಂಗೂಲಿ

ಪ್ರಸ್ತುತ ಮುಂಬೈನಲ್ಲಿ ಡೆಲ್ಲಿ, ಸಿಎಸ್​ಕೆ, ರಾಜಸ್ಥಾನ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು 14ನೇ ಆವೃತ್ತಿಯ ಮೊದಲ ಹಂತದ ಪಂದ್ಯಗಳನ್ನಾಡಲಿವೆ. ಉಳಿದ ನಾಲ್ಕು ತಂಡಗಳು ಚೆನ್ನೈನಲ್ಲಿ ಸೆಣಸಾಡಲಿವೆ. ಲಾಕ್‌ಡೌನ್ ಜಾರಿಯಾಗಿರುವುದು ಮತ್ತಷ್ಟು ಒಳ್ಳೆಯದಾಗಿದೆ..

author img

By

Published : Apr 5, 2021, 4:52 PM IST

ಬಿಸಿಸಿಐ ಅಧ್ಯಕ್ಷ
ಸೌರವ್ ಗಂಗೂಲಿ

ಮುಂಬೈ : ನಿಗದಿತ ವೇಳಾಪಟ್ಟಿಯಂತೆ 2021ರ ಐಪಿಎಲ್ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ. ಭಾನುವಾರ ಮಹಾರಾಷ್ಟ್ರ ಸರ್ಕಾರ ವಾರದ ಅಂತ್ಯದಲ್ಲಿ ಲಾಕ್‌ಡೌನ್​ ಘೋಷಣೆ ಮಾಡಿದ ನಂತರ ಗಂಗೂಲಿ ಐಪಿಎಲ್​ಗೆ ಇದರಿಂದ ಯಾವುದೇ ತೊಂದರೆಯಿಲ್ಲ. ಎಲ್ಲವೂ ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಶುಕ್ರವಾರ ರಾತ್ರಿ 8 ರಿಂದ ಸೋಮವಾರ ಬೆಳಿಗ್ಗೆ 7ರವರೆಗೆ ಕಠಿಣ ವೀಕೆಂಡ್ ಲಾಕ್​ಡೌನ್ ಘೋಷಿಸಿದೆ. ಆದರೆ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಏಪ್ರಿಲ್‌ 9ರಿಂದ 25ರವರೆಗೆ 10 ಐಪಿಎಲ್ ಪಂದ್ಯ ನಡೆಯಲಿವೆ. ಏಪ್ರಿಲ್ 10ರಂದು ಸಿಎಸ್​ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವೆ ಈ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದೆ.

ಪ್ರಸ್ತುತ ಮುಂಬೈನಲ್ಲಿ ಡೆಲ್ಲಿ, ಸಿಎಸ್​ಕೆ, ರಾಜಸ್ಥಾನ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು 14ನೇ ಆವೃತ್ತಿಯ ಮೊದಲ ಹಂತದ ಪಂದ್ಯಗಳನ್ನಾಡಲಿವೆ. ಉಳಿದ ನಾಲ್ಕು ತಂಡಗಳು ಚೆನ್ನೈನಲ್ಲಿ ಸೆಣಸಾಡಲಿವೆ. ಲಾಕ್‌ಡೌನ್ ಜಾರಿಯಾಗಿರುವುದು ಮತ್ತಷ್ಟು ಒಳ್ಳೆಯದಾಗಿದೆ.

ಯಾಕೆಂದರೆ, ಸ್ಟೇಡಿಯಂನ ಸುತ್ತಲೂ ಯಾರು ಇರುವುದಿಲ್ಲ. ಪಂದ್ಯವನ್ನು ಆಯೋಜಿಸಲು ಕೂಡ ಯಾವುದೇ ತೊಂದರೆ ಇರುವುದಿಲ್ಲ ಎಂದು ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಐಪಿಎಲ್​ಗಾಗಿ ನಾವು ಸುರಕ್ಷಿತ ಸೆಟಪ್‌ ಮಾಡಿಕೊಂಡಿದ್ದೇವೆ. ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ದಾದಾ ತಿಳಿಸಿದ್ದಾರೆ.

ಇದನ್ನು ಓದಿ: ನಾಟ್​ವೆಸ್ಟ್​ ಸರಣಿ ವೇಳೆ ಹಠಮಾರಿ ಸೆಹ್ವಾಗ್​ರಿಂದ ಮಹತ್ವದ ನಾಯಕತ್ವ ಪಾಠ ಕಲಿತಿದ್ದೆ : ದಾದಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.