ಹೈದರಾಬಾದ್ : ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತೊಂದು ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಸ್ತುತ ಭಾರತ ಮಹಿಳಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಈ ಸರಣಿಯ ಮೂರನೇ ಪಂದ್ಯದಲ್ಲಿ ಮಿಥಾಲಿ ರಾಜ್ ಈ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಮಿಥಾಲಿ ರಾಜ್ 36 ರನ್ಗಳಿಸಿ ಔಟಾದರು. ಇಂಗ್ಲೆಂಡ್‌ನ ಷಾರ್ಲೆಟ್ ಎಡ್ವರ್ಡ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ಮೈಲಿಗಲ್ಲು ತಲುಪಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಇಂಗ್ಲಿಷ್ ಮಹಿಳೆಯನ್ನ ಮೀರಿಸಲು ಮಿಥಾಲಿಗೆ ಇನ್ನೂ 299 ರನ್ಗಳ ಅವಶ್ಯಕತೆ ಇದೆ.
-
What a champion cricketer! 👏👏
— BCCI Women (@BCCIWomen) March 12, 2021 " class="align-text-top noRightClick twitterSection" data="
First Indian woman batter to score 10K international runs. 🔝 👍
Take a bow, @M_Raj03! 🙌🙌@Paytm #INDWvSAW #TeamIndia pic.twitter.com/6qWvYOY9gC
">What a champion cricketer! 👏👏
— BCCI Women (@BCCIWomen) March 12, 2021
First Indian woman batter to score 10K international runs. 🔝 👍
Take a bow, @M_Raj03! 🙌🙌@Paytm #INDWvSAW #TeamIndia pic.twitter.com/6qWvYOY9gCWhat a champion cricketer! 👏👏
— BCCI Women (@BCCIWomen) March 12, 2021
First Indian woman batter to score 10K international runs. 🔝 👍
Take a bow, @M_Raj03! 🙌🙌@Paytm #INDWvSAW #TeamIndia pic.twitter.com/6qWvYOY9gC
38 ವರ್ಷದ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ 1999 ರಲ್ಲಿ ಐರ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಭಾರತ ಪರ 212 ಏಕದಿನ ಪಂದ್ಯಗಳನ್ನಾಡಿರುವ ಮಿಥಾಲಿ, 50 ಸರಾಸರಿಯಲ್ಲಿ 6,974 ರನ್ಗಳಿಸಿದ್ದಾರೆ. ಇನ್ನು ಕೆವಲ 26 ರನ್ ಗಳಿಸಿದರೆ 7,000 ರನ್ ಗಡಿ ತಲುಪಲಿರುವ ಮಿಥಾಲಿ ರಾಜ್, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
ಓದಿ : ಭಾರತ - ದಕ್ಷಿಣ ಆಫ್ರಿಕಾ ಮಹಿಳಾ 3ನೇ ಏಕದಿನ ಪಂದ್ಯ: ಮೊದಲ ವಿಕೆಟ್ ಕಳೆದುಕೊಂಡ ಭಾರತ
ಇದಲ್ಲದೇ, ಭಾರತ ಪರ ಅವರು 89 ಟಿ - 20 ಪಂದ್ಯಗಳಲ್ಲಿ 37.50 ರ ಸರಾಸರಿಯಲ್ಲಿ 2364 ರನ್ಗಳಿಸಿದ್ದಾರೆ. ಭಾರತ ಪರ 10 ಟೆಸ್ಟ್ ಪಂದ್ಯಗಳನ್ನಾಡಿರುವ ಮಿಥಾಲಿ 634 ರನ್ಗಳಿಸಿದ್ದಾರೆ.