ಲಂಡನ್: ವಿಶ್ವಕ್ರಿಕೆಟ್ನಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ಬೌಲಿಂಗ್ ಮಾಡುವ ಭಾರತದ ಕೆಚ್ಚೆದೆಯ ಬೌಲರ್ ಜಸ್ಪ್ರೀತ್ ಬುಮ್ರಾ, ತಮ್ಮ ರೋಲ್ ಮಾಡೆಲ್ ಯಾರು ಎಂಬುದನ್ನು ತಿಳಿಸಿದ್ದಾರೆ.
ತಮ್ಮ ವೃತ್ತಿ ಜೀವನದ ಯಶಸ್ಸಿಗೆ ತಮ್ಮ ಕುಟುಂಬವೇ ಕಾರಣ ಎಂದಿರುವ ಅವರು, ಚಿಕ್ಕವಯಸ್ಸಿನಲ್ಲೇ ತಂದೆಯನ್ನ ಕಳೆದು ಕೊಂಡಿದ್ದಾರೆ. ಹೀಗಾಗಿ ತಮ್ಮ ಬದುಕಿನ ಹೆಚ್ಚಿನ ದಿನಗಳನ್ನು ಅಕ್ಕ ಹಾಗೂ ಅಮ್ಮನೊಂದಿಗೆ ಕಳೆದಿರುವ ಯಾರ್ಕರ್ ಸ್ಪೆಷಲಿಸ್ಟ್ ತಮಗೆ ಸ್ಪೂರ್ತಿ ತಮ್ಮ ಅಮ್ಮನೇ ಎಂದು ಐಸಿಸಿ ನಡೆಸಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸ್ಕೂಲ್ ಪ್ರಿನ್ಸಿಪಾಲ್ ಆಗಿದ್ದ ನಮ್ಮ ತಾಯಿ ನಾನೊಬ್ಬ ಕ್ರಿಕೆಟಿಗನಾಗಲು ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ನನ್ನ ಮತ್ತು ಅಕ್ಕನ ಏಳಿಗೆಗಾಗಿ ಅವರು ತುಂಬಾ ಕಷ್ಟಪಟ್ಟಿದ್ದಾರೆ. ನಮ್ಮಮ್ಮನೇ ನನಗೆ ಸ್ಪೂರ್ತಿ, ನನಗೆ ಪ್ರೇರಣೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
- " class="align-text-top noRightClick twitterSection" data="">
ವಿಶ್ವಕಪ್ನಲ್ಲಿ ತಮ್ಮ ಪ್ರದರ್ಶನದ ಕುರಿತು ಮಾತನಾಡಿರುವ ಬುಮ್ರಾ, ಈ ಅಭಿಯಾನದ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರಿರುವ ಕುರಿತು ಮಾತನಾಡಿದ್ದು, ಇಂಥ ಮಹತ್ವದ ಟೂರ್ನಮೆಂಟ್ಗಳಲ್ಲಿ ಉತ್ತಮ ಆರಂಭ ತೋರುವುದು ಎಲ್ಲಾ ತಂಡಗಳ ಬಯಕೆಯಾಗಿದೆ. ಅದ್ರಲ್ಲೂ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಎದುರಿಸುವಾಗ ವಿಕೆಟ್ ಪಡೆಯುವುದು ಪ್ರಮುಖವಾಗಿರುತ್ತದೆ. ಆದ್ದರಿಂದ ಉತ್ತಮ ಏರಿಯಾಗಳಲ್ಲಿ ಬೌಲಿಂಗ್ ಮಾಡುವುದರ ಜೊತೆಗೆ ಲೈನ್ ಅಂಡ್ ಲೆಂತ್ನಲ್ಲಿ ಸ್ಥಿರತೆ ಕಾಪಾಡಿಕೊಳ್ಳಬೇಕು. ಇದು ಯಶಸ್ವಿಯಾದ್ದರಿಂದಲೇ ಬಲಿಷ್ಠ ತಂಡಗಳೆದುರು ಬಹುಬೇಗ ವಿಕೆಟ್ ಪಡೆದೆವು ಎಂದಿದ್ದಾರೆ.
ವಿಶ್ವದ ಕಠಿಣ ಬೌಲರ್ ಬುಮ್ರಾ ಎಂದ ಕ್ರಿಸ್ ಗೇಲ್, ಆ್ಯಂಡ್ರೂ ರಸೆಲ್
ಇದೇ ವಿಡಿಯೋದಲ್ಲಿ ಮಾತನಾಡಿರುವ ಕ್ರಿಸ್ಗೇಲ್, ಬುಮ್ರಾರ ಎಸೆತಗಳು ಎಂತಹ ಬ್ಯಾಟ್ಸ್ಮನ್ಗಳನ್ನು ಮೋಸಗೊಳಿಸುತ್ತವೆ. ಉತ್ತಮ ಯಾರ್ಕರ್, ರಿವರ್ಸ್ವಿಂಗ್ ಹಾಗೂ ವೇಗ ಬುಮ್ರಾರ ಬೌಲಿಂಗ್ನಲ್ಲಿದೆ. ಅವರು ಇತರೆ ಎಲ್ಲಾ ವೇಗಿಗಳಿಗಿಂತ ಭಿನ್ನ ಎಂದು ಹೊಗಳಿದ್ದಾರೆ.
ಐಪಿಎಲ್ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬೌಲರ್ಗಳ ನಿದ್ದೆಗೆಡಿಸಿದ್ದ ವಿಂಡೀಸ್ ಆಲ್ರೌಂಡರ್ ಆ್ಯಂಡ್ರ್ಯೂ ರಸೆಲ್ ಕೂಡ ಬುಮ್ರಾ ತಾವೆದುರಿಸಿದ ಅತ್ಯಂತ ಕಠಿಣ ಬೌಲರ್, ಅವರು ಉತ್ತಮ ಯಾರ್ಕರ್ ಹಾಗೂ ಉತ್ತಮ ವೇಗವನ್ನು ಕಾಯ್ದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.