ETV Bharat / sports

ಮೆಲ್ಬೋರ್ನ್​ನಲ್ಲಿ ಗೋ ಮಾಂಸ ತಿಂದ್ರಾ ಟೀಂ ಇಂಡಿಯಾ ಆಟಗಾರರು? ಟ್ವಿಟರ್​ನಲ್ಲಿ ಫ್ಯಾನ್ಸ್‌ ಆಕ್ರೋಶ - ಭಾರತೀಯ ಆಟಗಾರರಿಂದ ಗೋ ಮಾಂಸ ಸೇವನೆ

ಅಂದು ಟೀಂ ಇಂಡಿಯಾ ಆಟಗಾರರ ಬಿಲ್ ಪಾವತಿಸಿದ್ದೆ ಎಂದು ಟ್ವಿಟರ್​ನಲ್ಲಿ ಹೇಳಿಕೊಂಡಿದ್ದ ಅಭಿಮಾನಿ, ಬಿಲ್​ನ ಅರ್ಧ ಭಾಗವನ್ನು ಮುಚ್ಚಿಕೊಂಡು ಒಟ್ಟು ಮೊತ್ತವನ್ನಷ್ಟೇ ಕಾಣುವಂತೆ ಫೋಟೋ ತೆಗೆದು ಪೋಸ್ಟ್ ಮಾಡಿದ್ರು. ಆದರೆ, ಈಗ ಮತ್ತೊಂದು ಫೋಟೋ ವೈರಲ್ ಆಗಿದ್ದು, ಅದರಲ್ಲಿ ಫೋರ್ಕ್ ಮತ್ತು ಬೀಫ್ ಕೂಡ ಇದೆ..

Indian Players Get Trolled by Fans For Beef Consumption
ಗೋ ಮಾಂಸ ತಿಂದ್ರಾ ಟೀಂ ಇಂಡಿಯಾ ಆಟಗಾರರು
author img

By

Published : Jan 3, 2021, 12:49 PM IST

Updated : Jan 3, 2021, 12:55 PM IST

ಹೈದರಾಬಾದ್ : ಅಭಿಮಾನಿಯೊಬ್ಬ ಮೆಲ್ಬೋರ್ನ್ ರೆಸ್ಟೋರೆಂಟ್​ವೊಂದರಲ್ಲಿ ಟೀಂ ಇಂಡಿಯಾ ಆಟಗಾರರ ಬಿಲ್‌ನ ಪಾವತಿಸಿದ್ದೀಗ ಹಳೆಯ ವಿಷಯ. ಆದರೆ, ಭಾರತದ ಆಟಗಾರರು ಅಂದು ಬೀಫ್ ತಿಂದಿದ್ದಾರೆ ಎಂದು ವೈರಲ್ ಆಗಿರುವ ಬಿಲ್​ನ ಫೋಟೋ ಕಂಡು ಕೆಲ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೆಸ್ಟೋರೆಂಟ್​ಗೆ ತೆರಳಿದ್ದ ಭಾರತದ ತಂಡದ ಉಪನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್, ಶುಭ್‌ಮನ್ ಗಿಲ್, ಪೃಥ್ವಿ ಶಾ ಮತ್ತು ನವದೀಪ್ ಸೈನಿ ಮೇಲೆ ಕೋವಿಡ್ ನಿಯಮ ಉಲ್ಲಂಘನೆ ಆರೋಪ ಕೇಳಿ ಬಂದಿತ್ತು. ಈಗಾಗಲೇ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಐಸೋಲೇಶನ್​​​ಗೆ (ಪ್ರತ್ಯೇಕವಾಗಿ) ಒಳಪಡಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ.

  • Your vada pav king is eating beef???????? @Oye_Jahazi 🤬🤬🤬🤬🤬🤬🤬

    — Diksha 🌈 (@BrahmaandKiMaa) January 2, 2021 " class="align-text-top noRightClick twitterSection" data=" ">

ರೆಸ್ಟೋರೆಂಟ್​​​ನಲ್ಲಿ ಊಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಆಟಗಾರರು ಜೈವಿಕ ಸುರಕ್ಷಿತ ಬಯೋಬಬಲ್​​ ಪ್ರೋಟೋಕಾಲ್​ ಉಲ್ಲಂಘನೆ ಮಾಡಿದ್ದು, ನೆಟ್ಟಿಗರು ಕ್ರಮಕ್ಕೆ ಒತ್ತಾಯಿಸಿದ್ದರು.

ಹೀಗಾಗಿ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಕ್ರಿಕೆಟ್​ ಆಸ್ಟ್ರೇಲಿಯಾವು (ಸಿಎ) ಆಟಗಾರರಿಂದ ಪ್ರೋಟೋಕಾಲ್‌ ಉಲ್ಲಂಘನೆಯಾಗಿದೆಯೇ, ಇಲ್ಲವೇ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದು, ಈಗಾಗಲೇ ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ ನೀಡಿದೆ.

ಆದರೆ, ಅಂದು ಟೀಂ ಇಂಡಿಯಾ ಆಟಗಾರರ ಬಿಲ್ ಪಾವತಿಸಿದ್ದೆ ಎಂದು ಟ್ವಿಟರ್​ನಲ್ಲಿ ಹೇಳಿಕೊಂಡಿದ್ದ ಅಭಿಮಾನಿ, ಬಿಲ್​ನ ಅರ್ಧ ಭಾಗವನ್ನು ಮುಚ್ಚಿಕೊಂಡು ಒಟ್ಟು ಮೊತ್ತವನ್ನಷ್ಟೇ ಕಾಣುವಂತೆ ಫೋಟೋ ತೆಗೆದು ಪೋಸ್ಟ್ ಮಾಡಿದ್ರು. ಆದರೆ, ಈಗ ಮತ್ತೊಂದು ಫೋಟೋ ವೈರಲ್ ಆಗಿದ್ದು, ಅದರಲ್ಲಿ ಫೋರ್ಕ್ ಮತ್ತು ಬೀಫ್ ಕೂಡ ಇದೆ.

  • Sharma ji ka ladka bhi beef khata hai 🙆‍♂️

    — सनकी v3.0 (@snkii__) January 2, 2021 " class="align-text-top noRightClick twitterSection" data=" ">

ಸದ್ಯ ಈ ಫೋಟೋ ಕಂಡಿರುವ ಅಭಿಮಾನಿಗಳು ಬೀಫ್ ತಿಂದವರು ಯಾರು ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಅಲ್ಲದೆ ಬಹುತೇಕ ಅಭಿಮಾನಿಗಳು ರೋಹಿತ್ ಶರ್ಮಾ ಅವರ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕಾಣಿಸಿದ್ದ ಬಿಲ್ ಮತ್ತು ಈಗ ವೈರಲ್ ಆಗಿರುವ ಎರಡೂ ಬಿಲ್​ಗಳು ಒಂದೇ ರೀತಿ ಕಂಡರೂ ಸತ್ಯಾಸತ್ಯತೆಗಳ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.

Last Updated : Jan 3, 2021, 12:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.