ಮುಂಬೈ: ವಿಂಡೀಸ್ ಪ್ರವಾಸಕ್ಕೆ ಫಾರ್ಮ್ನಲ್ಲಿಲ್ಲದ ಕೇದಾರ್ ಜಾದವ್ರನ್ನು ಆಯ್ಕೆ ಮಾಡಲಾಗಿದ್ದು, ಯುವ ಆಟಗಾರ ಶುಬ್ಮನ್ ಗಿಲ್ರನ್ನು ಆಯ್ಕೆಗೆ ಪರಿಗಣಿಸದಿರುವುದು ಭಾರತೀಯ ಅಭಿಮಾನಿಗಳನ್ನು ಕೆರಳಿಸಿದೆ.
ವಿಶ್ವಕಪ್ನಲ್ಲಿ ಮಹಾರಾಷ್ಟ್ರ ಮೂಲದ ಕೇದಾರ್ ಜಾದವ್ ವಿಶ್ವಕಪ್ನಲ್ಲಿ ಹೇಳಿಕೊಳ್ಳುವ ಪ್ರದರ್ಶನ ತೋರದೇ ಇದ್ದರೂ ಅವರನ್ನು ಆಯ್ಕೆಗೆ ಪರಿಗಣಿಸಿದ್ದು, ದಿನೇಶ್ ಕಾರ್ತಿಕ್, ವಿಜಯ್ ಶಂಕರ್ರನ್ನು ತಂಡದಿಂದ ಹೊರ ಹಾಕಲಾಗಿದೆ. ಕೇದಾರ್ ಕೂಡ ದಿನೇಶ್ ಹಾಗೂ ಶಂಕರ್ ನೀಡಿದ ಪ್ರದರ್ಶನವನ್ನು ನೀಡಿದ್ದಾರೆ. ಆದರೆ ಅವರಿಬ್ಬರನ್ನು ತಂಡದಿಂದ ಕೈಬಿಟ್ಟಿದ್ದು ಕೇದಾರ್ಗೆ ಅವಕಾಶ ನೀಡಿರುವುದನ್ನು ಭಾರತೀಯ ಅಭಿಮಾನಿಗಳ ಆಕ್ರೋಶ ವ್ಯಕ್ತವಾಗುತ್ತಿವೆ.
ಆದರೆ ಕೇದಾರ್ ಜಾದವ್ ಆಯ್ಕೆಯನ್ನು ಸಮರ್ಥಿಸಿಕೊಂಡಿರುವ ಎಂಎಸ್ಕೆ ಕೇದಾರ್ ಆಯ್ಕೆಗೆ ಪರಿಗಣಿಸದೇ ಇರುವಷ್ಟು ಕೆಟ್ಟಪ್ರದರ್ಶನ ನೀಡಿಲ್ಲ. ಆದ್ದರಿಂದ ವಿಂಡೀಸ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿದೆ.
ಅಭಿಮಾನಿಗಳ ಪ್ರಕಾರ ಆಯ್ಕೆ ಸಮಿತಿ 2023 ರ ವಿಶ್ವಕಪ್ ದೃಷ್ಟಿಯಿಂದ ತಂಡವನ್ನು ಸಿದ್ದಗೊಳಿಸುತ್ತೇವೆಂದು ತಿಳಿಸಿದ್ದರು. ಇದೀಗ 19 ವರ್ಷದ ಶುಬ್ಮನ್ ಗಿಲ್ ಬದಲಿಗೆ 34 ವರ್ಷದ ಕೇದಾರ್ ಸೂಕ್ತವೇ ಎಂದು ಪ್ರಶ್ನೆ ಮಾಡಿದ್ದಾರೆ. 2023ರ ವಿಶ್ವಕಪ್ ವೇಳೆಗೆ ಕೇದಾರ್ಗೆ 38 ಆಗಲಿದ್ದು ಅವರು 2023ರ ವಿಶ್ವಕಪ್ಗೆ ಹೇಗೆ ತಂಡ ತಯಾರಿ ಮಾಡಲಿದ್ದೀರಾ ಎಂದು ಪ್ರಸಾದ್ರನ್ನು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಶುಬ್ಮನ್ ಗಿಲ್ ಕಳೆದೊಂದು ವರ್ಷದಿಂದ ಲಿಸ್ಟ್ ಎ ಪಂದ್ಯಗಳಲ್ಲಿ 46.82 ಸರಾಸರಿಯಲ್ಲಿ 5 ಶತಕ 9 ಅರ್ಧಶತಕ ಬಾರಿಸಿ ಗಮನಸೆಳೆದಿದ್ದಾರೆ. ಅವರ ಆರಂಭಿಕ ಸ್ಥಾನದಿಂದ ಮಧ್ಯಮಕ್ರಮಾಂಕದವರೆಗೂ ಯಾವ ಕ್ರಮಾಂಕದಲ್ಲಿ ಬೇಕಾದರೂ ಬ್ಯಾಟಿಂಗ್ ನಡೆಸುವಂತಹ ಬ್ಯಾಟ್ಸ್ಮನ್ ಆಗಿದ್ದಾರೆ. ಹೀಗಿರುವಾಗ ಇಂತಹ ಯುವ ಆಟಗಾರರಿಗೆ ಅವಕಾಶ ನೀಡುವುದನ್ನು ಬಿಟ್ಟು ಕೇದಾರ್ ಜಾದವ್ರಿಗೆ ಅವಕಾಶ ನೀಡಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಖಂಡಿಸಿದ್ದಾರೆ.