ಸಿಡ್ನಿ(ಆಸ್ಟ್ರೇಲಿಯಾ): ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಏಕದಿನ ಪಂದ್ಯದಲ್ಲಿ ಭಾರತ ಎಲ್ಲಾ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ತಂಡಕ್ಕೆ ಆಟದ ತಯಾರಿಗಾಗಿ ಸಾಕಷ್ಟು ಸಮಯವಿತ್ತು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
"ಪಂದ್ಯಕ್ಕೆ ತಯಾರಾಗಲು ಸಾಕಷ್ಟು ಸಮಯ ಸಿಕ್ಕಿದೆ. ಸೋಲಿಗೆ ಯಾವುದೇ ನೆಪಗಳು ಇರಬಹುದೆಂದು ಭಾವಿಸಬೇಡಿ. ಬಹುಶಃ ಟಿ-20 ಕ್ರಿಕೆಟ್ ಪಂದ್ಯಗಳನ್ನಾಡಿದ್ದ ನಾವು, ಬಹು ಕಾಲದ ನಂತರ ಆಡಿದ ಸುದೀರ್ಘ ಆಟ ಇದಾಗಿದೆ. ಬಹುಶಃ ಅದು ಪರಿಣಾಮ ಬೀರುವಂತಹದ್ದು" ಎಂದು ವಿರಾಟ್ ಕಾರಣ ಕೊಟ್ಟಿದ್ದಾರೆ.
ಪಾಂಡ್ಯ, ಧವನ್ ಹೋರಾಟ ವ್ಯರ್ಥ.. ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದ ಆಸೀಸ್
"25 ಓವರ್‌ಗಳ ನಂತರ ತಂಡದ ಬಾಡಿ ಲಾಂಗ್ವೇಜ್ ಉತ್ತಮವಾಗಿಲ್ಲ. ಗುಣಮಟ್ಟದ ಆಟಗಾರರು ನೀಡುವ ಅವಕಾಶವನ್ನು ಕೈ ಚೆಲ್ಲಿದ್ರೆ ಖಡಿತವಾಗಿಯೂ ಅದಕ್ಕೆ ಬೆಲೆ ಕಟ್ಟಬೇಕಾಗುತ್ತದೆ" ಎಂದು ಟೀಂ ಇಂಡಿಯಾದ ಕಳಪೆ ಕ್ಷೇತ್ರರಕ್ಷಣೆ ಬಗ್ಗೆ ಮಾತನಾಡಿದ್ದಾರೆ.
"ದುರದೃಷ್ಟವಶಾತ್ ಹಾರ್ದಿಕ್ ಪಾಂಡ್ಯಾ ಬೌಲಿಂಗ್ ಮಾಡಲು ಫಿಟ್ ಆಟಗಿಲ್ಲ. ಮಾರ್ಕಸ್ ಸ್ಟೋಯ್ನಿಸ್ ಅಥವಾ ಮ್ಯಾಕ್ಸ್‌ವೆಲ್ ಅವರಂತಹ ಆಲ್ರೌಂಡ್ ಆಟಗಾರರ ಕೊರತೆ ಇದೆ ಎಂದು ಹೇಳಿದ್ದಾರೆ.
ಐಪಿಎಲ್ ವೇಳೆ ಎಲ್ಲಿ ಅಡಗಿತ್ತು ಈ ನಿಮ್ಮ ಪರಾಕ್ರಮ.. ಆಸೀಸ್ ಆಟಗಾರರಿಗೆ ಅಭಿಮಾನಿಗಳ ಪ್ರಶ್ನೆ!!
ಆಕ್ರಮಣಕಾರಿಯಾಗಿ ಆಟವಾಡಲು ಕೊಹ್ಲಿ ಟೀಂ ಇಂಡಿಯಾ ಆಟಗಾರರನ್ನು ಬೆಂಬಲಿಸಿದರು. "ಬ್ಯಾಟಿಂಗ್ ದೃಷ್ಟಿಕೋನದ ಬಗ್ಗೆ ನಾವು ಈಗ ಸಂಕ್ಷಿಪ್ತವಾಗಿ ಚರ್ಚೆಸಿದ್ದೇವೆ. ಅದಕ್ಕೆ ಬದ್ಧರಾಗಿರುವ ಎಲ್ಲಾ ಬ್ಯಾಟ್ಸ್‌ಮನ್‌ಗಳು ನಮ್ಮ ಉದ್ದೇಶಕ್ಕೆ ತಕ್ಕಂತೆ ಆಡುತ್ತಿರುವುದನ್ನು ನೋಡಿದ್ದೀರಿ. ಹಾರ್ದಿಕ್ ಅವರ ಇನ್ನಿಂಗ್ಸ್ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ" ಎಂದಿದ್ದಾರೆ.
ಇಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 66 ರನ್ಗಳಿಂದ ಸೋಲು ಕಂಡಿದ್ದು, ಸರಣಿಯಲ್ಲಿ ಆತಿಥೇಯ ತಂಡ ಮುನ್ನಡೆ ಸಾಧಿಸಿದೆ.