ETV Bharat / sports

ಅಮಾನತು ಶಿಕ್ಷೆಯ ಬಳಿಕ ನಾನು ನನಗೋಸ್ಕರ ಆಡಲು ತೀರ್ಮಾನಿಸಿದೆ: ಕೆ.ಎಲ್.ರಾಹುಲ್

author img

By

Published : Jun 14, 2020, 1:35 PM IST

'ಕಾಫಿ ವಿತ್​ ಕರಣ್'​ ಕಾರ್ಯಕ್ರಮದಲ್ಲಿ ಹೆಣ್ಣಿನ ಕುರಿತು ಕೀಳುಮಟ್ಟದ ಹೇಳಿಕೆ ನೀಡಿದ ಆರೋಪದ ಬಳಿಕ ಕೆಲ ಪಂದ್ಯಗಳಿಂದ ಅಮಾನತುಗೊಂಡಿದ್ದ ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಮತ್ತೆ ಹೇಗೆ ತಮ್ಮ ವೃತ್ತಿ ಬದುಕನ್ನು ಪುನರಾರಂಭಿಸಿದರು ಎಂಬುವುದರ ಕುರಿತು ಅವರು ಮಾತನಾಡಿದ್ದಾರೆ.

I wanted to be selfish and play for myself after 2019 suspension: KL Rahul
2019ರ ಅಮಾನತಿಕ ಕುರಿತು ಹಂಚಿಕೊಂಡ ಕೆಎಲ್ ರಾಹುಲ್

ನವದೆಹಲಿ: ಟೀಂ ಇಂಡಿಯಾದ ಉನ್ನತ ಕ್ರಮಾಂಕದ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ 2019ರ ಅಮಾನತು ಶಿಕ್ಷೆಯ ಬಳಿಕ ತನ್ನ ವೃತ್ತಿಜೀವನವನ್ನು ಹೇಗೆ ಮತ್ತೆ ಪ್ರಾರಂಭಿಸಿದರು ಎಂಬುದರ ಕುರಿತು ಮನದಾಳ ಹಂಚಿಕೊಂಡಿದ್ದಾರೆ.

ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಹೆಣ್ಣಿನ ಕುರಿತು ಕೀಳು ಮಟ್ಟದ ಹೇಳಿಕೆ ನೀಡಿದ ಬಳಿಕ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ತೀವ್ರ ಟೀಕೆಗೆ ಗುರಿಯಾಗಿದ್ದರು ಮತ್ತು ಬಿಸಿಸಿಐನ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಇಬ್ಬರನ್ನೂ ಕೆಲ ಪಂದ್ಯಗಳಿಂದ ಸಸ್ಪೆಂಡ್ ಮಾಡಿತ್ತು.

I wanted to be selfish and play for myself after 2019 suspension: KL Rahul
ಕೆ.ಎಲ್​.ರಾಹುಲ್

ನನ್ನ ಸ್ಥಿರವಾದ ಕಾರ್ಯಕ್ಷಮತೆಗೆ ಸಾಕಷ್ಟು ಮನ್ನಣೆ ಇದೆ. ಅಮಾನತುಗೊಳಿಸಿದ ಬಳಿಕ ನಾನು ಪ್ರಲೋಭನೆಗೆ ಒಳಗಾಗಿದ್ದೆ ಮತ್ತು ಒಂದು ರೀತಿಯಲ್ಲಿ ಸ್ವಾರ್ಥಿಯಾಗಿ, ನನಗೋಸ್ಕರ ಆಡಲು ತೀರ್ಮಾನಿಸಿದ್ದೇನೆ. ನಮ್ಮ ವೃತ್ತಿಜೀವನದಲ್ಲಿ ಹೆಚ್ಚು ಸಮಯ ಇರುವುದಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. 2019 ರ ನಂತರ ನನ್ನಲ್ಲಿ 12 ಅಥವಾ 11 ವರ್ಷಗಳು ಉಳಿದಿವೆ. ಈ ಅವಧಿಯಲ್ಲಿ ಆಟಗಾರ ಮತ್ತು ತಂಡದ ವ್ಯಕ್ತಿಯಾಗಲು ನನ್ನ ಸಮಯ ಮತ್ತು ಶಕ್ತಿಯನ್ನು ನಾನು ಅರ್ಪಿಸಬೇಕಾಗಿದೆ ಎಂದು ರಾಹುಲ್‌ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.