ETV Bharat / sports

ದಾದಾಗೆ 48ರ ಸಂಭ್ರಮ... ಸಚಿನ್​, ಯುವಿ, ಸೆಹ್ವಾಗ್​ ಸೇರಿದಂತೆ ಕ್ರಿಕೆಟ್​ ದಿಗ್ಗಜರ ಶುಭ ಹಾರೈಕೆ - Cricket fraternity wishes to Ganguly's 48yh birthday

ಮ್ಯಾಚ್​ ಫಿಕ್ಸಿಂಗ್​ನಿಂದ ಭಾರತದಲ್ಲಿ ಕ್ರಿಕೆಟ್​ ಅಧೋಗತಿಗೆ ತಲುಪಿತ್ತು. ಜನರು ಕ್ರಿಕೆಟ್​ ಎಂದರೆ ಮೂಗು ಮುರಿಯುವ ಕಾಲ, ಕ್ರಿಕೆಟ್​ ದೇವರೆಂದೇ ಖ್ಯಾತರಾಗಿದ್ದ ಸಚಿನ್​ಗೆ ನಾಯಕತ್ವ ಕಬ್ಬಿಣದ ಕಡಲೆಯಾಗಿತ್ತು. ಇತ್ತ ದಿಕ್ಕುದೆಸೆಯಿಲ್ಲದೇ ಸಾಗುತ್ತಿದ್ದ ಭಾರತೀಯ ಕ್ರಿಕೆಟ್​ನ ಚುಕ್ಕಾಣಿ ಹಿಡಿದ ಬಂಗಾಳದ ಹುಲಿ, ಪ್ರೇಕ್ಷಕರನ್ನ ಮತ್ತೆ ಮೈದಾನಕ್ಕೆ ಕರೆತಂದರು. ಇಡೀ ತಂಡದಲ್ಲಿ ಇಂದು ಲೆಜೆಂಡ್​ ಎನಿಸಿಕೊಳ್ಳುತ್ತಿರುವ ಹಲವಾರು ಕ್ರಿಕೆಟಿಗರನ್ನು ತಂಡಕ್ಕೆ ಕರೆತಂದರು. ನಂತರ ಅಲ್ಲಿಂದ ನಡೆದಿದ್ದೆಲ್ಲ ಇತಿಹಾಸವೇ ಸರಿ.

Happy birthday Dada
ದಾದಾ ಜನ್ಮದಿನ
author img

By

Published : Jul 8, 2020, 1:16 PM IST

ಮುಂಬೈ: ಭಾರತ ಕ್ರಿಕೆಟ್​ ಕಂಡ ಶ್ರೇಷ್ಠ ನಾಯಕ ಗಂಗೂಲಿ ಇಂದು 48ನೇ ವಸಂತಕ್ಕೆ ಕಾಲಿಡುತ್ತಿದ್ದು, ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಭಾರತದಲ್ಲಿ ಕ್ರಿಕೆಟ್​ ಆಟವನ್ನು ಬದಲಾಯಿಸಿದ ದಾದಾರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಮ್ಯಾಚ್​ ಫಿಕ್ಸಿಂಗ್​ನಿಂದ ಭಾರತದಲ್ಲಿ ಕ್ರಿಕೆಟ್​ ಅಧೋಗತಿಗೆ ತಲುಪಿತ್ತು. ಜನರು ಕ್ರಿಕೆಟ್​ ಎಂದರೆ ಮೂಗು ಮುರಿಯುವ ಕಾಲ, ಕ್ರಿಕೆಟ್​ ದೇವರೆಂದೇ ಖ್ಯಾತರಾಗಿದ್ದ ಸಚಿನ್​ಗೆ ನಾಯಕತ್ವ ಕಬ್ಬಿಣದ ಕಡಲೆಯಾಗಿತ್ತು. ಇತ್ತ ದಿಕ್ಕುದೆಸೆಯಿಲ್ಲದೇ ಸಾಗುತ್ತಿದ್ದ ಭಾರತೀಯ ಕ್ರಿಕೆಟ್​ನ ಚುಕ್ಕಾಣಿ ಹಿಡಿದ ಬಂಗಾಳದ ಹುಲಿ, ಪ್ರೇಕ್ಷಕರನ್ನ ಮತ್ತೆ ಮೈದಾನಕ್ಕೆ ಕರೆತಂದರು. ಇಡೀ ತಂಡದಲ್ಲಿ ಇಂದು ಲೆಜೆಂಡ್​ ಎನಿಸಿಕೊಳ್ಳುತ್ತಿರುವ ಹಲವಾರು ಕ್ರಿಕೆಟಿಗರನ್ನು ತಂಡಕ್ಕೆ ಕರೆ ತಂದರು. ನಂತರ ಅಲ್ಲಿಂದ ನಡೆದಿದ್ದೆಲ್ಲ ಇತಿಹಾಸವೇ ಸರಿ.

  • 🏏 Third-fastest to 10,000 ODI runs
    ⭐ Holds the record for the highest individual score in CWC for India
    🥈 2003 ICC Men's @cricketworldcup runner-up
    🧢 Captained India to 11 wins in 28 overseas Tests

    Happy birthday to one of 🇮🇳's most successful captains, Sourav Ganguly 🙌 pic.twitter.com/7MJe1cXcVS

    — ICC (@ICC) July 8, 2020 " class="align-text-top noRightClick twitterSection" data=" ">

ದೇಶದಲ್ಲೇ ಸರಣಿ ಗೆಲ್ಲುವುದಕ್ಕೆ ಹೆಣಗಾಡುತ್ತಿದ್ದ ಭಾರತ ತಂಡ ವಿದೇಶದಲ್ಲಿ ಹುಲಿಯಂತೆ ಘರ್ಜಿಸತೊಡಗಿತ್ತು. ಆಸ್ಟ್ರೇಲಿಯಾದಂತಹ ದೈತ್ಯ ಕ್ರಿಕೆಟ್​ ತಂಡವನ್ನು ಬಗ್ಗುಬಡಿದಿತ್ತು. ಇಂಗ್ಲೆಂಡ್​ ತಂಡವನ್ನು ಇಂಗ್ಲೆಂಡ್​ ನೆಲದಲ್ಲಿ ಮಣಿಸಿ ನಾಟ್​ವೆಸ್ಟ್​ ಸರಣಿ ಎತ್ತಿಹಿಡಿದಿತ್ತು. ಇದಲ್ಲದೇ 2003 ರ ವಿಶ್ವಕಪ್​ನಲ್ಲಿ ವೀರಾವೇಶದಿಂದ ಹೋರಾಡಿದ್ದ ಗಂಗೂಲಿ ಭಾರತಕ್ಕೆ ಪ್ರಶಸ್ತಿ ತಂದುಕೊಡುವುದರಲ್ಲಿ ವಿಫಲರಾದರೂ ಅವರ ನಾಯಕತ್ವದ ಭಾರತ ತಂಡ 20 ವರ್ಷಗಳ ನಂತರ ಫೈನಲ್​ಗೇರುವಲ್ಲಿ ಯಶಸ್ವಿಯಾಗಿತ್ತು.

ಭಾರತ ತಂಡಕ್ಕೆ ಯುವರಾಜ್​ ಸಿಂಗ್, ಮೊಹಮ್ಮದ್​ ಕೈಫ್​, ಹರ್ಭಜನ್​ ಸಿಂಗ್​, ಜಹೀರ್​ ಖಾನ್​, ಮಹೇಂದ್ರ ಸಿಂಗ್ ಧೋನಿ, ವಿರೇಂದ್ರ ಸೆಹ್ವಾಗ್​ ಹಾಗೂ ಗೌತಮ್​ ಗಂಭೀರ್​ ಅವರಂತಹ ಆಟಗಾರರನ್ನು ಆಯ್ಕೆ ಮಾಡಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು ದಾದಾ. ಅದೇ ದಾದಾ ಇಂದು ಬಿಸಿಸಿಐ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದು, ಕ್ರಿಕೆಟ್​ ಮಂಡಳಿಯನ್ನು ಬೆಳೆಸುವ ಹಾದಿಯಲ್ಲಿ ಮುನ್ನುಗ್ಗುತ್ತಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ಬೆಂಗಾಲ್​ ಮಹಾರಾಜ್​ ಇಂದು 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಭಾರತದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

  • Happy birthday Dadi!
    Hope our off-field partnership keeps going strong like our on-field ones. Wish you a blessed year ahead. pic.twitter.com/jOmq9XN07w

    — Sachin Tendulkar (@sachin_rt) July 8, 2020 " class="align-text-top noRightClick twitterSection" data=" ">

ಭಾರತ ತಂಡದ ಯಶಸ್ವಿ ಬ್ಯಾಟ್ಸ್​ಮನ್​ ಕ್ರಿಕೆಟ್​ ದೇವರೆಂದೇ ಕರೆಯಲ್ಪಡುವ ಸಚಿನ್​ ತಮ್ಮ ನೆಚ್ಚಿನ ಗೆಳಯನಿಗೆ ಜನ್ಮದಿನದ ಶುಭಕೋರಿದ್ದು, " ನಮ್ಮ ಮೈದಾನದಲ್ಲಿನ ಗೆಳತನಕ್ಕಿಂತ ಮೈದಾನದ ಹೊರಗಿನ ಗೆಳತನ ಗಟ್ಟಿಯಾಗಿ ಮುಂದುವರಿಯಲಿದೆ ಎಂದು ನಾನು ಭಾವಿಸಸಿದ್ದೇನೆ. ಹ್ಯಾಪಿ ಬರ್ತಡೇ ದಾದಿ" ಎಂದು ಶುಭಕೋರಿದ್ದಾರೆ.

  • Dada ko Janamdin ki bahut badhai.
    The only time he blinked his eye was when dancing down the track while hitting spinners for a 6, varna never. Eternally grateful for his support in initial days. #HappyBirthdayDada pic.twitter.com/U7k0Q9paJI

    — Virender Sehwag (@virendersehwag) July 8, 2020 " class="align-text-top noRightClick twitterSection" data=" ">

'ದಾದಾರಿಗೆ ಜನ್ಮದಿನದ ಶುಭಾಶಯಗಳು ​(ದಾದಾ ಕಿ ಜನ್ಮದಿನ್ ಕಿ ಬಹುತ್ ಬಧಾಯ್​) ಅವರು ಸ್ಪಿನ್ನರ್​ಗಳಿಗೆ ಸಿಕ್ಸರ್​ ಹೊಡೆಯುವಾಗ ಮಾತ್ರ ಒಮ್ಮೆ ಕಣ್ಣು ಮಿಟುಕಿಸುತ್ತಿದ್ದರು. ಆರಂಭದ ದಿನಗಳಲ್ಲಿ ನಮ್ಮನ್ನು ಬೆಂಬಲಿಸಿದ್ದನ್ನು ಎಂದಿಗೂ ಮರೆಯಲೂ ಸಾಧ್ಯವಿಲ್ಲ' ಎಂದು ಭಾರತ ಕಂಡ ಸ್ಫೋಟಕ ಬ್ಯಾಟ್ಸ್​ಮನ್​ ಸೆಹ್ವಾಗ್​ ಶುಭ ಕೋರಿದ್ದಾರೆ.

  • Happy Birthday to the undisputed Dada of Indian Cricket 🎂 You have always led from the front, showing us what it means to be a true leader. I have learnt a lot from you & hope to become to others what you are to me. You are our eternal captain🙇@SGanguly99 #HappyBirthdayDada pic.twitter.com/MJKAwgGw1r

    — Yuvraj Singh (@YUVSTRONG12) July 8, 2020 " class="align-text-top noRightClick twitterSection" data=" ">

'ಭಾರತೀಯ ಕ್ರಿಕೆಟ್​ನ ದಾದಾರಿಗೆ ಜನ್ಮದಿನದ ಶುಭಾಶಯಗಳು. ನೀವು ಸದಾ ಮುಂದೆ ನಿಂತು ತಂಡವನ್ನು ಮುನ್ನಡೆಸಿದ್ದೀರಿ. ನಿಜವಾದ ನಾಯಕ ಹೇಗಿರಬೇಕು ಎಂದು ನಮಗೆ ತೋರಿಸಿಕೊಟ್ಟಿದ್ದೀರಿ. ನಿಮ್ಮಿಂದ ನಾನು ಸಾಕಷ್ಟು ಕಲಿತಿದ್ದೇನೆ. ನೀವು ನನಗೆ ನೀಡಿದ ಬೆಂಬಲದಂತೆ ಬೇರೆಯವರಿಗೂ ಸಿಗಲಿ ಎಂದು ಆಶಿಸುತ್ತೇನೆ. ನೀವು ನಮ್ಮ ಶಾಶ್ವತ ನಾಯಕ' ಎಂದು ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್​ ದಾದಾಗೆ ಶುಭಾಶಯ ತಿಳಿಸಿದ್ದಾರೆ.

  • Happy Birthday Dada💙@SGanguly99 🎂🎂
    The man who revolutionalized Indian cricket 🇮🇳
    Your contribution to cricket both as a player, and a captain will be admired by the generations to come!
    Have a fabulous year ahead🙏 pic.twitter.com/QRM29CdN6C

    — Suresh Raina🇮🇳 (@ImRaina) July 8, 2020 " class="align-text-top noRightClick twitterSection" data=" ">
  • From a fine batsman to an outstanding captain & now leading Indian cricket on the whole—here’s wishing my favourite captain & mentor @SGanguly99 a very happy birthday. But FAULADI SEENA dikha ke aise kaun chadhta hai, Dada #HappyBirthdayDada pic.twitter.com/8PKZ3RwwtB

    — Mohammad Kaif (@MohammadKaif) July 8, 2020 " class="align-text-top noRightClick twitterSection" data=" ">

ವಿರಾಟ್​ ಕೊಹ್ಲಿ, ಮೊಹಮ್ಮದ್​ ಕೈಫ್​, ವಿವಿಎಸ್​ ಲಕ್ಷ್ಮಣ್​,ಸುರೇಶ್​ ರೈನಾ, ಶಿಖರ್​ ಧವನ್​, ಹಾರ್ದಿಕ್​ ಪಾಂಡ್ಯ, ಪ್ರಗ್ಯಾನ್ ಓಜಾ, ಶ್ರೇಯಸ್​ ಅಯ್ಯರ್​ ಮುಂತಾದ ಕ್ರಿಕೆಟಿಗರು ದಾದಾಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.