ನವದೆಹಲಿ: ಮುಂಬರುವ ವಿಶ್ವಕಪ್ಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಕಟಗೊಂಡಿದೆ. ನಾಲ್ವರು ಆಲ್ರೌಂಡರ್ ಸೇರಿದಂತೆ ಹಿರಿಯ ಆಟಗಾರರು ಹಾಗೂ ಯುವ ಪ್ರತಿಭೆಗಳನ್ನೊಳಗೊಂಡ ತಂಡವನ್ನ ಆಯ್ಕೆ ಸಮಿತಿ ಘೋಷಣೆ ಮಾಡಿದೆ.
ಇದರ ಮಧ್ಯೆ ವಿಶ್ವಕಪ್ ತಂಡದ ಆಯ್ಕೆ ವೇಳೆ ಚರ್ಚೆಗೆ ಬಂದ ನಾಲ್ವರು ಬೌಲರ್ಗಳನ್ನ ಟೀಂ ಇಂಡಿಯಾ ಜತೆಗೆ ಇಂಗ್ಲೆಂಡ್ಗೆ ಕಳಿಸಲು ಆಯ್ಕೆ ಸಮಿತಿ ನಿರ್ಧಾರ ಕೈಗೊಂಡಿದೆ. ನೆಟ್ನಲ್ಲಿ ತಂಡದ ಬ್ಯಾಟ್ಸ್ಮನ್ಗಳಿಗೆ ಬೌಲಿಂಗ್ ಮಾಡಲಿದ್ದಾರೆ.
ವಿಶ್ವಕಪ್ ತಂಡದ ಜತೆ ನವ್ದೀಪ್ ಸೈನಿ, ಆವೇಶ್ ಖಾನ್, ಎಡಗೈ ವೇಗಿ ಖಲೀಲ್ ಅಹ್ಮದ್ ಹಾಗೂ ದೀಪಕ್ ಚಹರ್ ತಂಡದ ಇತರ ವೇಗಿಗಳಾಗಿ ಆಯ್ಕೆಗೊಂಡಿದ್ದು, ಖಲೀಲ್ ಅಹ್ಮದ್ ಹಾಗೂ ನವ್ದೀಪ್ ಸೈನಿ ಹೆಸರು ವಿಶ್ವಕಪ್ ತಂಡದ ಆಯ್ಕೆ ವೇಳೆ ಚರ್ಚೆಗೆ ಬಂದಿದ್ದವು. ಆದರೆ ಅನುಭವಿಗಳಾದ ಭುವನೇಶ್ವರ್ ಕುಮಾರ್,ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾಗೆ ಅವಕಾಶ ನೀಡಲಾಗಿದೆ.
ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾ 1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ವಿಶ್ವಕಪ್ಗೆ ಮುತ್ತಿಕ್ಕಿತ್ತು. ಇದೀಗ ಮತ್ತೊಮ್ಮೆ ಅದೇ ಸಾಧನೆ ಮಾಡಲು ವಿರಾಟ್ ಕೊಹ್ಲಿ ಬಳಗ ಸನ್ನದ್ಧಗೊಂಡಿದೆ.