ಬ್ರಿಸ್ನೇನ್: ಆಸ್ಟ್ರೇಲಿಯಾ ಮಾಜಿ ಕೋಚ್ ಹಾಗೂ ಹಾಲಿ ಬ್ರಿಸ್ಬೇನ್ ಹೀಟ್ಸ್ ಕೋಚ್ ಡೆರೆನ್ ಲೆಹ್ಮನ್ ಟ್ವಿಟರ್ ಹ್ಯಾಕ್ ಮಾಡಿ ಕೆಟ್ಟ ಹಾಗೂ ಇರೋನ್ ವಿರೋಧಿ ಸಂದೇಶಗಳನ್ನು ಶೇರ್ ಮಾಡಿದ್ದರಿಂದ ಅವರು ಸಾಮಾಜಿಕ ಜಾಲಾತಾಣವನ್ನೇ ತ್ಯಜಿಸಿದ್ದಾರೆ.
49 ವರ್ಷದ ಲೆಹ್ಮನ್ ಬಿಗ್ಬ್ಯಾಶ್ನ ಬ್ರಿಸ್ಬೇನ್ ಹೀಟ್ ತಂಡದ ಕೋಚ್ ಆಗಿ ಕಾರ್ಯನಿರ್ಹಿಸುತ್ತಿದ್ದಾರೆ. ನಿನ್ನೆ ಸಿಡ್ನಿ ಥಂಡರ್ ವಿರುದ್ಧದ ಪಂದ್ಯ ನಡಯುವ ವೇಳೆ ಈ ಘಟನೆ ನಡೆದಿದೆ.
ಲೆಹ್ಮನ್ ಸುಮಾರು 3.4 ಲಕ್ಷ ಫಾಲೋವರ್ ಹೊಂದಿದ್ದಾರೆ. ಅವರ ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಿರುವ ವ್ಯಕ್ತಿ ಇರಾನ್ ವಿರೋಧಿ ಸಂದೇಶಗಳನ್ನು ಪ್ರಚಾರ ಮಾಡಿದ್ದಾನೆ. ಅಲ್ಲದ ಕೆಲವು ಕೆಟ್ಟ ಸಂದೇಶಗಳನ್ನು ಕೂಡ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ತಮ್ಮ ಟ್ವಿಟರ್ನಲ್ಲಿ ಇಂತಹ ಸಂದೇಶಗಳನ್ನು ನೋಡಿದ ಲೆಹ್ಮನ್ ದಿಗ್ಬ್ರಾಂತರಾಗಿದ್ದು, ಈ ರೀತಿ ನನ್ನ ಹೆಸರನ್ನು ಬಳಸಿಕೊಂಡು ಕೆಟ್ಟ ಮತ್ತು ಭಯಾನಕ ವಿಚಾರಗಳನ್ನು ಶೇರ್ ಮಾಡಿರುವುದನ್ನು ನೋಡುವುದು ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳ ಅಸಮಾಧಾನವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ. ಇದರಿಂದ ತಾವೂ ಸಾಮಾಜಿಕ ಜಾಲಾತಾಣಗಳಿಂದ ದೂರ ಉಳಿಯಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.