ETV Bharat / sports

114 ರನ್​ಗಳ ಮೊದಲ ಇನ್ನಿಂಗ್ಸ್​ ಮುನ್ನಡೆ ಪಡೆದ ವಿಂಡೀಸ್: ಕುತೂಹಲ ಕೆರಳಿಸಿದ ಕೊನೆಯ 2 ದಿನದ ಆಟ - ಹೋಲ್ಡರ್​ 6 ವಿಕೆಟ್​

ಸೌತಾಂಪ್ಟನ್​ನಲ್ಲಿ ಬಯೋಸೆಕ್ಯೂರ್​ ತಾಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ವಿಂಡೀಸ್​ ಮೇಲುಗೈ ಸಾಧಿಸಿದೆ.

ವೆಸ್ಟ್​ ಇಂಡೀಸ್​ - ಇಂಗ್ಲೆಂಡ್​
ವೆಸ್ಟ್​ ಇಂಡೀಸ್​ - ಇಂಗ್ಲೆಂಡ್​
author img

By

Published : Jul 11, 2020, 1:02 PM IST

ಸಾತಾಂಪ್ಟನ್​: ಸುದೀರ್ಘ ದಿನಗಳ ಬಳಿಕ ಮರಳಿದ ಕ್ರಿಕೆಟ್​ನಲ್ಲಿ ವೆಸ್ಟ್​ ಇಂಡೀಸ್ ಆತಿಥೇಯ ಇಂಗ್ಲೆಂಡ್​ ವಿರುದ್ಧ ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡರಲ್ಲೂ ಅದ್ಭುತ ಪ್ರದರ್ಶನ ತೋರಿದ್ದು, 114ರನ್​ಗಳ ಮುನ್ನಡೆ ಪಡೆದುಕೊಂಡಿದೆ.

ಸೌತಾಂಪ್ಟನ್​ನಲ್ಲಿ ಬಯೋಸೆಕ್ಯೂರ್​ ತಾಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ವಿಂಡೀಸ್​ ಮೇಲುಗೈ ಸಾಧಿಸಿದೆ. ಮೊದಲ ದಿನ ಮಳೆಗೆ ಆಹುತಿಯಾದರೂ ಎರಡನೇ ದಿನ ಇಂಗ್ಲೆಂಡ್​ ತಂಡವನ್ನು ಹೋಲ್ಡರ್​ ಪಡೆ 204 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಇಂಗ್ಲೆಂಡ್​ ಜೇಸನ್​ ಹೋಲ್ಡರ್​(42ಕ್ಕೆ 6) ಹಾಗೂ ಶೆನಾನ್​ ಗೇಬ್ರಿಯಲ್​ (62ಕ್ಕೆ4) ಮಾರಕ ಬೌಲಿಂಗ್​ ದಾಳಿಗೆ ತತ್ತರಿಸಿ ಕೇವಲ 204 ರನ್​ಗಳಿಗೆ ಆಲೌಟ್​ ಆಗಿದೆ. ಇಂಗ್ಲೆಂಡ್​ ಪರ ನಾಯಕ ಬೆನ್​ ಸ್ಟೋಕ್ಸ್​ 43, ಜಾಸ್​ ಬಟ್ಲರ್​ 35 ರನ್​ಗಳಿಸಿದ್ದೇ ಟಾಪ್​ ಸ್ಕೋರ್​ ಎನಿಸಿಕೊಂಡಿತು.

ಇತ್ತ ಮೊದಲ ಇನ್ನಿಂಗ್ಸ್​ ಬ್ಯಾಟಿಂಗ್​ ನಡೆಸಿದ ವೆಸ್ಟ್​ ಇಂಡೀಸ್​ 318 ರನ್​ಗಳಿಸಿ 114 ರನ್​ಗಳ ಮುನ್ನಡೆಗಳಿಸಿದೆ. ಆರಂಭಿಕ ಬ್ಯಾಟ್ಸ್​ಮನ್​ ಕ್ರೇಗ್​ ಬ್ರಾತ್​ವೇಟ್​ 65, ಜಾನ್​ ಕ್ಯಾಂಪ್​ಬೆಲ್​ 28,ಬ್ರೂಕ್ಸ್​ 39, ರಾಸ್ಟನ್​ ಚೇಸ್​ 47 ಹಾಗೂ ಶೇನ್​ ಡೋರಿಚ್​ 61 ರನ್​ಗಳಿಸಿ ಮುನ್ನಡೆಗೆ ಪ್ರಮುಖ ಪಾತ್ರವಹಿಸಿದರು.

ಇಂಗ್ಲೆಂಡ್​ ಪರ ಜೇಮ್ಸ್​ ಆ್ಯಂಡರ್ಸನ್​ 3, ನಾಯಕ ಬೆನ್​ ಸ್ಟೋಕ್ಸ್​ 4, ಡಾಮ್​ ಬೆಸ್​ 2 ಹಾಗೂ ಮಾರ್ಕ್​ ವುಡ್​ 1 ವಿಕೆಟ್​ ಪಡೆದು ಮಿಂಚಿದರು.

ಇನ್ನು 114 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಇಂಗ್ಲೆಂಡ್​ ವಿಕೆಟ್​ ಕಳೆದುಕೊಳ್ಳದೆ 15 ರನ್​ಗಳಿಸಿದೆ. ಇನ್ನು ಎರಡು ದಿನಗಳ ಆಟ ಬಾಕಿಯುಳಿದಿದ್ದು 117ದಿನಗಳ ಬಳಿಕ ಆರಂಭವಾಗಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯ ಕೂತೂಹಲ ಕೆರಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.