ಜೈಪುರ್: ಅಂಡರ್ 19 ವಿಶ್ವಕಪ್ ಕ್ರಿಕೆಟ್ನಲ್ಲಿ ಸ್ಪಿನ್ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ರವಿ ಬಿಷ್ಣೋಯ್ ಕಿಂಗ್ಸ್ ಇಲೆವೆನ್ ತಂಡದ ರಾಹುಲ್, ಗೇಲ್ ಹಾಗೂ ಮ್ಯಾಕ್ಸ್ವೆಲ್ ರಂತಹ ಬ್ಯಾಟ್ಸ್ಮನ್ಗಳಿಗೆ ನೆಟ್ ನಲ್ಲಿ ಬೌಲಿಂಗ್ ಮಾಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಭಾರತ ಅಂಡರ್ 19 ವಿಶ್ವಕಪ್ನಲ್ಲಿ ಗೆಲ್ಲದಿದ್ದರೂ ಕೆಲವು ಯುವ ಆಟಗಾರರು ಬೆಳಕಿಗೆ ಬಂದರು. ಅಂತಹವರಲ್ಲಿ ಜೈಪುರದ ರವಿ ಬಿಷ್ಣೋಯ್ ಕೂಡ ಒಬ್ಬರು. ಇವರು ವಿಶ್ವಕಪ್ನಲ್ಲಿ 17 ವಿಕೆಟ್ ಪಡೆಯುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದರು.
ಇದೀಗ ಲಾಕ್ಡೌನ್ ಸಂದರ್ಭದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ್ದು, ತಾವೂ ಐಪಿಎಲ್ಗಾಗಿ ಮನೆಯಲ್ಲಿಯೇ ಅಭ್ಯಾಸ ನಡೆಸುತ್ತಿರುವುದಾಗಿ ತಿಳಿಸಿದ್ದು, ಆದಷ್ಟು ಬೇಗ ಕೊರೊನಾ ಸಾಂಕ್ರಾಮಿಕ ರೋಗದ ಸಮಸ್ಯೆ ಬಗೆಹರಿದು ಐಪಿಎಲ್ ಶುರುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ತಮ್ಮ ಟೀಮ್ಮೇಟ್ಗಳಾಗಿರುವ ಮ್ಯಾಕ್ಸ್ವೆಲ್ , ಕ್ರಿಸ್ ಗೇಲ್ ಹಾಗೂ ಕೆಎಲ್ ರಾಹುಲ್ ಅಂತಹ ಲೆಜೆಂಡ್ಗಳಿಗೆ ನೆಟ್ಸ್ನಲ್ಲಿ ಪ್ರಾಕ್ಟೀಸ್ ಮಾಡುವಾಗ ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಕಾತುರದಿಂದ್ದೇನೆ. ಅಲ್ಲದೆ ತಮ್ಮ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿ ಗೆಲುವು ತಂದುಕೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಇನ್ನು ತಮ್ಮ ಬೌಲಿಂಗ್ಗೆ ಪ್ರೇರಣೆಯಾಗಿರುವ ಅನಿಲ್ ಕುಂಬ್ಳೆ ಅವರನ್ನು ಭೇಟಿ ಮಾಡಿ ಅವರಿಂದ ಕೆಲವು ಬೌಲಿಂಗ್ ಟಿಪ್ಸ್ಗಳನ್ನು ಪಡೆಯಲು ಕಾಯುತ್ತಿದ್ದೇನೆ. ನಾನು ಅವರ ಬೌಲಿಂಗ್ ನೋಡಿ ಬೆಳೆದಿದ್ದೇನೆ, ಇದೀಗ ಅವರ ಕೋಚಿಂಗ್ನಲ್ಲಿ ಆಡುವ ಅದ್ಭುತ ಅವಕಾಶ ದೊರೆತಿದೆ ಎಂದಿದ್ದಾರೆ.
2019ರ ಐಪಿಎಲ್ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ರಾಂಚೈಸಿ ರವಿ ಬಿಷ್ಣೋಯ್ರಿಗೆ 2 ಕೋಟಿ ನೀಡಿ ಖರೀದಿಸಿತ್ತು.