ETV Bharat / sports

ದ್ರಾವಿಡ್​ಗೆ ಬೌಲಿಂಗ್​ ಮಾಡುವುದು ತುಂಬಾ ಕಠಿಣ; ಶೋಯಬ್​ ಅಖ್ತರ್​

ತಮ್ಮ ಮಾರಕ ಬೌಲಿಂಗ್​ ದಾಳಿಯಿಂದ ವಿಶ್ವದ ದಿಗ್ಗಜ ಬ್ಯಾಟ್ಸ್​ಮನ್​ಗಳನ್ನೇ ಬೆಚ್ಚಿ ಬೀಳಿಸುತ್ತಿದ್ದ ಶೋಯಬ್​ ಅಖ್ತರ್,​ ದ್ರಾವಿಡ್​ ವಿರುದ್ಧ ಮುಖಾಮುಖಿಯಾದಾಗ ಇಬ್ಬರಿಗೂ ಒಬ್ಬರನ್ನೊಬ್ಬರು ಎದುರಿಸಲು ಕಠಿಣವಾಗುತ್ತಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ರಾಹುಲ್​ ದ್ರಾವಿಡ್​ -ಅಖ್ತರ್​
ರಾಹುಲ್​ ದ್ರಾವಿಡ್​ -ಅಖ್ತರ್​
author img

By

Published : Aug 9, 2020, 3:37 PM IST

ಲಾಹೋರ್​: ಭಾರತದ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾದ ಕನ್ನಡಿಗ ರಾಹುಲ್​ ದ್ರಾವಿಡ್​ ಒಬ್ಬ ಕಠಿಣ ಹಾಗೂ ದೃಢನಂಬಿಕೆಯುಳ್ಳ ಬ್ಯಾಟ್ಸ್​ಮನ್​ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯಬ್​​ ಅಖ್ತರ್​ ಹೇಳಿದ್ದಾರೆ.

ತಮ್ಮ ಮಾರಕ ಬೌಲಿಂಗ್​ ದಾಳಿಯಿಂದ ವಿಶ್ವದ ದಿಗ್ಗಜ ಬ್ಯಾಟ್ಸ್​ಮನ್​ಗಳನ್ನೇ ಬೆಚ್ಚಿ ಬೀಳಿಸುತ್ತಿದ್ದ ಶೋಯಬ್​ ಅಖ್ತರ್,​ ದ್ರಾವಿಡ್​ ವಿರುದ್ಧ ಮುಖಾಮುಖಿಯಾದಾಗ ಇಬ್ಬರಿಗೂ ಒಬ್ಬರನ್ನೊಬ್ಬರು ಎದುರಿಸಲು ಕಠಿಣವಾಗುತ್ತಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

"ದ್ರಾವಿಡ್ ಒಬ್ಬ ಕಠಿಣ ಮತ್ತು ದೃಢನಂಬಿಕೆಯುಳ್ಳ ಬ್ಯಾಟ್ಸ್​ಮನ್​. ನನ್ನನ್ನು ಎದುರಿಸಲು ಅವರಿಗೆ ಹೇಗೆ ಕಠಿಣವಾಗುತ್ತಿತ್ತೋ ಅದೇ ರೀತಿ ಅವರಿಗೆ ಬೌಲಿಂಗ್​ ಮಾಡುವುದು ನನಗೆ ಸವಾಲಿನ ಕೆಲಸವಾಗಿತ್ತು. ಅವರು ನನ್ನ ಬೌಲಿಂಗ್​ಗೆ ಸ್ವಲ್ಪ ಸುಲಭವಾಗಿ ಬ್ಯಾಟಿಂಗ್​ ಮಾಡುತ್ತಿದ್ದರು" ಎಂದು ಆಕಾಶ್​ ಚೋಪ್ರಾ ಅವರ ಯೂಟ್ಯೂಬ್​ ಚಾನೆಲ್​ ಆಕಾಶ್​ವಾಣಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ರಾಹುಲ್​ ದ್ರಾವಿಡ್​
ರಾಹುಲ್​ ದ್ರಾವಿಡ್​

ತಾವೂ ಕ್ಲಬ್​ ಲೆವೆಲ್​ನಲ್ಲಿ ತರಬೇತಿ ಪಡೆದ ಬಗ್ಗೆ ಮಾತನಾಡಿರುವ ಅವರು, ಒಬ್ಬ ಬ್ಯಾಟ್ಸ್​ಮನ್​ ದ್ರಾವಿಡ್​ ರೀತಿ ಆಡುತ್ತಿದ್ದರೆ, ನಾವು ಅವರಿಗೆ ಹೆಚ್ಚು ಲೆಂಗ್ತ್​​ ಬಾಲ್​ಗಳನ್ನು ಮಾಡಬೇಕು. ಸ್ಟಂಪ್​ಗೆ ಹೆಚ್ಚು ಹತ್ತಿರವಾಗಿ ಬ್ಯಾಟ್​ ಮತ್ತು ಪ್ಯಾಡ್​ ಮಧ್ಯದಲ್ಲಿ ಗುರಿಯಿಟ್ಟು, ಪ್ಯಾಡ್​ಗೆ ಬಡಿಯುವಂತೆ ಬೌಲ್​ ಮಾಡಬೇಕು ಎಂದು ತಮ್ಮ ಆರಂಭದ ದಿನಗಳಲ್ಲಿ ಬೌಲಿಂಗ್​ನಲ್ಲಿ ಅಭಿವೃದ್ಧಿ ಹೊಂದಿದ ಬಗ್ಗೆ ತಿಳಿಸಿದ್ದಾರೆ.

ಬೆಂಗಳೂರಿನ ಪಂದ್ಯವೊಂದರಲ್ಲಿ ದ್ರಾವಿಡ್​ರನ್ನು ಎಲ್​ಬಿಡಬ್ಲ್ಯೂ ಮಾಡಿದ್ದೆ, ಆದರೆ ಅಂಪೈರ್​ ಪಾಕಿಸ್ತಾನದ ಪರ ತೀರ್ಪು ನೀಡಲಿಲ್ಲ. ಆದರೂ ನಾವು ಪಂದ್ಯವನ್ನು ಗೆದ್ದುಕೊಂಡೆವು ಎಂದು ಅಖ್ತರ್​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.